33.4 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಲಗೋರಿ ಪಂದ್ಯಾಟ

ಬೆಳಾಲು: ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಹಳೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಲಗೋರಿ ಪಂದ್ಯಾಟ ಜರಗಿತು.

ಪಂದ್ಯಾಟಕ್ಕೆ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಚಾಲನೆ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರು, ಉಪಾಧ್ಯಕ್ಷರಾದ ಶ್ರೀಮತಿ ವಸಂತಿ ಮಂಡಾಲು ರವರು ಉಪಸ್ಥಿತರಿದ್ದರು.

ಜಾನಪದ ಕ್ರೀಡೆಯಾಗಿರುವ ಲಗೋರಿಯನ್ನು ಪಂದ್ಯಾಟವಾಗಿ ಅಳವಡಿಸಿಕೊಂಡಿರುವ ಹಳೆ ವಿದ್ಯಾರ್ಥಿ ಸಂಘದ ಬಗ್ಗೆ ಬಹುವಾಗಿ ಮೆಚ್ಚುಗೆ ವ್ಯಕ್ತವಾಯಿತು.

ಪಂದ್ಯಾಟದಲ್ಲಿ ಅಂತಿಮವಾಗಿ ಸಂತೋಷ್ ಕನಿಕ್ಕಿಲ ತಂಡದವರು ಪ್ರಥಮ, ಶೇಖರ್ ಗೌಡ ಕೊಲ್ಲಿಮಾರು ತಂಡ ದ್ವಿತೀಯ ಹಾಗೂ ಸುರೇಶ್ ತಂಡದವರು ತೃತೀಯ ಸ್ಥಾನವನ್ನು ಪಡೆದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಕನಿಕ್ಕಿಲ, ಕಾರ್ಯದರ್ಶಿಗಳಾದ ಮಹಮ್ಮದ್ ಶರೀಫ್ ಬೆಳಾಲು ರವರು ಕೂಟವನ್ನು ಸಂಯೋಜಿಸಿದರು. ಉಜಿರೆ ಶ್ರೀ ಧ ಮಂ ಕ್ರೀಡಾ ಸಂಘದವರು ಸ್ಪರ್ಧೆಯನ್ನು ನಿರ್ವಹಿಸಿದರು.

Related posts

ಮೊಗ್ರು: ಕರಂಬಾರುವಿನಲ್ಲಿ ಕಾಡಾನೆ ಪ್ರತ್ಯಕ್ಷ: ನೇತ್ರಾವತಿ ನದಿಯಲ್ಲಿ ಜಳಕ

Suddi Udaya

ಬೆಳ್ತಂಗಡಿ ಸ. ಪ್ರ. ದ. ಕಾಲೇಜಿನಲ್ಲಿ ಜಿಎಸ್‌ಟಿ ದಿನಾಚರಣೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಧುಮೇಹ ಪರೀಕ್ಷೆಯಲ್ಲಿ ನಿಖರ ವರದಿ ನೀಡಬಲ್ಲ ಮೆಶಿನ್ ಅಳವಡಿಕೆ

Suddi Udaya

ಕೊಯ್ಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

Suddi Udaya

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶಾರದ ಮಂಟಪ ಉಜಿರೆ 17ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ, ಪೂರ್ವಭಾವಿ ಸಭೆ

Suddi Udaya

ರೈತರಿಗೆ ಬೆಳೆ ವಿಮೆ ಪಾವತಿಸಲು ಜು.31 ಅಂತಿಮ ದಿನ

Suddi Udaya
error: Content is protected !!