ಫೆ.15-22: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: ಪೂರ್ವಭಾವಿ ಸಭೆ

Suddi Udaya

ಕೊರಿಂಜ: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 15 ರಿಂದ 22.ರವರೆಗೆ ನಡೆಯುವ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಡಿ.9 ರಂದು ದೇವಸ್ಥಾನದ ವಠಾರದಲ್ಲಿ ನೆರವೇರಿತು.

ಬ್ರಹ್ಮ ಕಲಶೋತ್ಸದ ಅಧ್ಯಕ್ಷ ಶಾಸಕ ಹರೀಶ್ ಪೂಂಜ ಮಾತನಾಡಿ ಬ್ರಹ್ಮ ಕಲಶೋತ್ಸವ ಸೇವೆ ಮಾಡಲು 12 ವರ್ಷಕೊಮ್ಮೆ ಬರವುದು. ಈ ಗ್ರಾಮದಲ್ಲಿ 600 ಮನೆ ಇದೆ. ಜನರು ಯಾವ ರೀತಿಯಲ್ಲಿ ಸಹ ಸೇವೆ ಮಾಡಬಹುದು. ಎಲ್ಲರೂ ಸಂಕಲ್ಪ ಮಾಡಬೇಕು. ಈಗಲೇ 50 ಲಕ್ಷ ಅನುದಾನ ನೀಡಿದ್ದೇನೆ . ಇನ್ನು ಬ್ರಹ್ಮ ಕಲಶೋತ್ಸವಕ್ಕೆ ಸುಮಾರು 55ರಿಂದ 60ಲಕ್ಷ ಬೇಕಾಗಬಹುದು ಆದ್ದರಿಂದ ಅನ್ನ ಸೇವೆ ಶ್ರೇಷ್ಠವಾದ ಸೇವೆ. ಅನೇಕ ಮಂದಿ ಅನ್ನ ಸೇವೆ ಮಾಡಲು ಮುಂದಾದರೆ ಮತ್ತು ಹೊರ ಕಾಣಿಕೆ ವಸ್ತು ರೂಪದಲ್ಲಿ ಜೊತೆಗೆ ಪ್ರತಿ ಮನೆಗೆ ರೂ.500 ಕೂಪನ್ ನೀಡಿದರೆ. ಇಡೀ ಬ್ರಹ್ಮಕಲಶೋತ್ಸವನ್ನು ಅಚ್ಚುಕಟ್ಟವಾಗಿ ಮಾಡಬಹುದು.

ಮುಂದಿನ ಕಾರ್ಯಯೋಜನೆ, ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ, ಬ್ರಹ್ಮಕಲಶೋತ್ಸವ ಕಾರ್ಯಾಧ್ಯಕ್ಷ ಪ್ರಸನ್ನ ಧರ್ಬೆ , ಉಪಾಧ್ಯಕ್ಷ ರವಿರಾಜ್, ಜೀರ್ಣೋದ್ಧಾರದ ಗೌರವ ಸಲಹೆಗಾರರು ದಿನಕರ ಪೂಜಾರಿ ಕಡ್ತಿಲ, ದೇವಸ್ಥಾನದ ಪವಿತ್ರ ಪಾಣಿಗಳಾದ ಹರೀಶ್ ಭಟ್ ತಾಳಿಂಜ, ಜೀರ್ಣೋದ್ಧಾರದ ಕಾರ್ಯಾಧ್ಯಕ್ಷ ಸುನಿಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದಾಸಪ್ಪ ಗೌಡ ಕೋಡಿಯಡ ಕಡ್ತಿಲ ಉಪಸ್ಥಿತರಿದ್ದರು.

ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ರವರು ಪ್ರಾಸ್ತವಿಕ ಮಾತನಾಡಿ ಸ್ವಾಗತಿಸುತ್ತಾ ಜೀರ್ಣೋದ್ಧಾರದ ಕೆಲಸ 2ಕೋಟಿ ವೆಚ್ಚದಲ್ಲಿ ಆಗುತ್ತಿದೆ. ಈಗಾಗಲೇ ಶಾಸಕರಾದ ಹರೀಶ್ ಪೂಂಜ 50 ಲಕ್ಷ ಅನುದಾನ ನೀಡಿದ್ದಾರೆ.

ಬ್ರಹ್ಮಕಲಶೋತ್ಸವ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಡ್ತಿಲ ರವರು ಧನ್ಯವಾದವಿತ್ತರು. ಬ್ರಹ್ಮಕಲಶೋತ್ಸವ ಕಾರ್ಯದರ್ಶಿ ವಿಜಯ ಕುಮಾರ್ ಕಳ್ಳಲಿಕೆ ನಿರೂಪಿಸಿದರು.
ಇನ್ನಿತರ ಸಮಿತಿಗಳ ಸಂಚಾಲಕರು ಅಧ್ಯಕ್ಷರು ಸದಸ್ಯರುಗಳು ಉಪಸ್ಥಿತರಿದ್ದರು

Leave a Comment

error: Content is protected !!