April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಕುವೆಟ್ಟು: ಮನೆಗೆ ನುಗ್ಗಿದ್ದ ಕಳ್ಳರು: ನಗದು ಸಹಿತ ರೂ. 3.87 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಕುವೆಟ್ಟು : ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಮನೆಯ ಎದುರಿನ ಬಾಗಿಲಿನ ಲಾಕ್ ನ್ನು ಮುರಿದು ಒಳಪ್ರವೇಶಿಸಿ 69 ½ ಗ್ರಾಂ ತೂಕದ ಚಿನ್ನಾಭರಣ ಹಾಗೂ 40,000 ನಗದು ಹಣವನ್ನು ಕಳವು ಮಾಡಿದ ಘಟನೆ ನಡೆದಿದೆ.

ಬೆಳ್ತಂಗಡಿ ಕುವೆಟ್ಟು ನಿವಾಸಿ ಸುಲೈಮಾನ್ (56ವ) ಎಂಬವರ ದೂರಿನಂತೆ, ಡಿ.9 ರಂದು ಸಂಜೆಯಿಂದ ಡಿ.10 ರ ಸಂಜೆಯ ಅವಧಿಯಲ್ಲಿ ಸುಲೈಮಾನ್ ಮನೆಯಲ್ಲಿ ಇಲ್ಲದ ವೇಳೆ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿನ ಲಾಕ್ ನ್ನು ಮುರಿದು ಒಳಪ್ರವೇಶಿಸಿ ಬೆಡ್ ರೂಮಿನ ಗಾಡ್ರೇಜಿನ ಬಾಗಿಲು ಮುರಿದು ಒಟ್ಟು 69 ½ ಗ್ರಾಂ ತೂಕದ ಚಿನ್ನಾಭರಣ ಹಾಗೂ 40,000 ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಒಟ್ಟು ಮೌಲ್ಯ 3,87,500 ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ 119/2023 ಕಲಂ;457,454,380 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ

Related posts

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಎರಡನೇ ವರ್ಷದ ಶ್ರೀ ಗಣೇಶೋತ್ಸವ

Suddi Udaya

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಕೊಕ್ಕಡ ವಲಯದಲ್ಲಿ ಸಿದ್ಧಿವಿನಾಯಕ ಹೊಸ ಸಂಘ ರಚನೆ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Suddi Udaya

ಉಜಿರೆ ರುಡ್‌ಸೆಟ್ ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ

Suddi Udaya

ಪೆರ್ಲ ಬೈಪಾಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಭಡ್ತಿಗೊಂಡ ಕೊರಗಪ್ಪ ಟಿ.ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಎಸ್‌ವೈಎಸ್ ಗುರುವಾಯನಕೆರೆ ಶಾಖೆಯ ವತಿಯಿಂದ 150 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya
error: Content is protected !!