24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಮಚ್ಚಿನ: ನೆತ್ತರ ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬದ ಸಂಭ್ರಮ

ಮಚ್ಚಿನ: ಇಲ್ಲಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ನೆತ್ತರ ಇದರ ಬೆಳ್ಳಿ ಹಬ್ಬ ಸಂಭ್ರಮವು ಡಿ. 9 ರಂದು ನಡೆಯಿತು.

ಸಮಾರಂಭದ ಉದ್ಘಾಟನೆಯನ್ನು ಶ್ರೀ ಅನಂತೇಶ್ವರ ದೇವಸ್ಥಾನದ ಬಳ್ಳಮಂಜ ಇದರ ಆಡಳಿತ ಮೊಕ್ತೇಸರರಾದ ಹರ್ಷ ಸಂಪಿಗೆತ್ತಾಯ ಇವರ ದೀಪ ಬೆಳಗಿಸಿ ಉದ್ಘಾಟಿಸಿ, ಈ ಶಾಲೆಗೆ ಈ ಊರ ಜನರು ಹಗಲು ಇರುಳು ದುಡಿದ ಶ್ರಮದಿಂದ ಇಂದು ಶಾಲೆ ಬೆಳ್ಳಿ ಹಬ್ಬಕ್ಕೆ ಬಾಜಾಕವಾಗಿರುತ್ತದೆ. ಈ ಊರ ಜನರಿಗೂ ಹಾಗೂ ಶಾಲೆಗೆ ಹಾಗೂ ಶಿಕ್ಷಕರಿಗೂ ವಿದ್ಯಾರ್ಥಿಗಳಿಗೂ ಶುಭವಾಗಲಿ ಎಂದರು.

ಮುಖ್ಯ ಅತಿಥಿಗಳಾದ ವಂ| ಸ್ಟ್ಯಾನಿ ಗೋವಿಯಸ್ ಧರ್ಮ ಗುರುಗಳು ಸೆಕ್ರೇಡ್ ಹಾರ್ಟ್ ಚರ್ಚ್ ಮಡಂತ್ಯಾರ್ ಇವರು ವಿದ್ಯಾಸಂಸ್ಥೆಯು ವಿದ್ಯಾ ದೇಗುಲ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಬಹು! ಕೆ ಎಂ ಹನೀಫ್ ಸಖಾಫಿ ಧರ್ಮ ಗುರುಗಳು ಬಂಗೇರಕಟ್ಟ ಮಾತನಾಡಿ ಈ ಶಾಲೆ ಯಾವುದೇ ಜಾತಿ ಧರ್ಮ ಭೇದವಿಲ್ಲದ ದೇಗುಲ ಈ ನಮ್ಮ ಶಾಲೆ. ನಮ್ಮ ಈ ಊರ ಮಕ್ಕಳು ಸರಕಾರಿ ಶಾಲೆಯಲ್ಲಿ ಕಳಿತರೆ ಮಾತ್ರ ನಾವಿಂದು ಬೆಳ್ಳಿ ಹಬ್ಬ ಆಚರಿಸಲು ಸಾಧ್ಯ ಎಂದರು.

ವೇದಿಕೆಯಲ್ಲಿ ಶಾಲಾ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಚೇತನ ಪುಂಜಾಲಕಟ್ಟೆ, ವಿಶ್ವನಾಥ ಬಂಗೇರ ಕಾರಂದೂರು. ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೂಪ ನವೀನ್ ಕೂಡ್ಲಕ್ಕೆ, ತಣ್ಣೀರುಪಂಥ ಗ್ರಾಮ ಪಂಚಾಯತ್ ಸದಸ್ಯರಾದ ರುಕೇಶ್ ಮುಂದಿಲ, ಹರೇಕಳ ಹಾಜಬ್ಬ ಶಿಕ್ಷಣ ಸಂತರು, ಪದ್ಮಾವತಿ ಆರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರ್ಕಾರ ಇದರ ಮಾಜಿ ನಿರ್ದೇಶಕರಾದ ರಾಜಶೇಖರ ಶೆಟ್ಟಿ ಭಂಡಾರಿಗುಡ್ಡೆ, ಮಚ್ಚಿನ ಗ್ರಾಮ ಪಂಚಾಯತ್ ಸದಸ್ಯರಾದ ಮಾಜಿ ಅಧ್ಯಕ್ಷರಾದ ಪ್ರಮೋದ್ ಕುಮಾರ್, ಶ್ರೀಮತಿ ಜಯಶ್ರೀ, ಕಂದಾಯ ಇಲಾಖೆಯ ರಮೇಶ್, ವಾಸು ಮೂಲ್ಯ ನೆತ್ತರ, ಕೃಷ್ಣಪ್ಪ ಸಾಲ್ಯಾನ್ ಶಾಲಾ ಬೆಳ್ಳಿ ಹಬ್ಬದ ಅಧ್ಯಕ್ಷರಾದ ಪ್ರಶಾಂತ್ ದೇವಾಡಿಗ, ಗೌರಧ್ಯಕ್ಷರಾದ ಹೈದರ್ ಎಮ್ ಆರ್ ಸೂಪರಿ, ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ಇದರ ಅಧ್ಯಕ್ಷರಾದ ಸಂತೋಷ್ ಕೊಡ್ಲಕ್ಕೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ನವೀನ್ ಕೋಡಿ, ಶಾಲಾ ಮುಖ್ಯ ಶಿಕ್ಷಕರಾದ ರೂಪ ರುಫಿನಾ ರೋಡ್ರಿಗಸ್, ಶಾಲಾ ನಾಯಕ ಧನುಷ್, ಭಾಗ್ಯಶ್ರೀ ಮಹಿಳಾ ಮಿತ್ರ ಮಂಡಳಿಯ ಅಧ್ಯಕ್ಷರಾದ ಮೋಹಿನಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೇಶವ ಮಚಗುರಿ ಉಪಸ್ಥಿರಿದರು.

ಶಾಲಾ ಬೆಳ್ಳಿಹಬ್ಬದ ಅಂಗವಾಗಿ ನೆತ್ತರ ಶಾಲಾ ವರ್ಗಾವಣೆಗೊಂಡ ಮುಖ್ಯ ಶಿಕ್ಷಕರಾದ ಸೀತಾರಾಮ್, ಮಚ್ಚಿನ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರುಕ್ಮಿಣಿ, ಅರೇಕಳ ಪದ್ಮಶ್ರೀ ಪುರಸ್ಕೃತರಾದ ಹಾಜಬ್ಬ ಶಿಕ್ಷಣ ಸಂತರು ಇವರನ್ನು ಸನ್ಮಾನಿಸಲಾಯಿತು. ನಂತರ ಅಂಗನವಾಡಿ ಪುರಾಣಿಗಳಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕಿ ರೂಪ ಸ್ವಾಗತಿಸಿದರು. ಮಹಾಬಲ ದೇವಾಡಿಗ ಧನ್ಯವಾದ ನೀಡಿದರು. ಸದಾಶಿವ ಹೆಗ್ಡೆ ಬಳ್ಳಮಂಜ, ಹೇಮಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಹಾಗೂ ದೇವಿ ಪ್ರಸಾದ್ ಶಕ್ತಿನಗರ ಇವರ ಸಾರಥ್ಯದಲ್ಲಿ ನೆತ್ತರ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ. ಭಾಗ್ಯಶ್ರೀ ಮಹಿಳಾ ಮಿತ್ರ ಮಂಡಳಿ ನೆತ್ತರ ಇವರಿಂದ ಬಯಕುನೆನೆ ಬಯಕೋಡು ಮತ್ತು ಭಾಗ್ಯಶ್ರೀ ಮಿತ್ರ ಮಂಡಳಿ ನೆತ್ತರ ಯುವಕರಿಂದ ರವಿಶಂಕರ್ ಶಾಸ್ತ್ರಿ ಅನಿಲ ವಿರಚಿತ ಕೊಡ ಒಂಜಾಕ ಎಂಬ ನಾಟಕ ನಡೆಯಿತು.

Related posts

ನಾಳೆ(ಜು.6): ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ : ಎಸ್.ಎಸ್.ಎಲ್.ಸಿ ಸಾಧಕರಿಗೆ ಸನ್ಮಾನ: ದಿತಿ ಸಾಂತ್ವನ ನಿಧಿ ವಿತರಣೆ

Suddi Udaya

ಮದ್ದಡ್ಕ ಕಿನ್ನಿಗೋಳಿ ವರಕಬೆಯ ಬಳಿ ಹೂತು ಹೋದ ರಾಜ್ಯ ಹೆದ್ದಾರಿ ರಸ್ತೆ

Suddi Udaya

ಶ್ರೀ ದುರ್ಗಾ ಫರ್ನಿಚರ್ ಮತ್ತು ಇಲೆಕ್ಟ್ರಾನಿಕ್ಸ್‌ನಲ್ಲಿ ಖರೀದಿಗೆ ವಿಶೇಷ ಡಿಸ್ಕೌಂಟ್

Suddi Udaya

ಉರುವಾಲು :32 ನೇ‌ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಬೆಳ್ತಂಗಡಿ:  ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಆಟಿದ ಗಮ್ಮತ್ತ್’

Suddi Udaya

ಕಿಲ್ಲೂರು : ಹರ್ಷ ಮಟನ್, ಚಿಕನ್, ಹಾಗೂ ಫಿಶ್ ಸೆಂಟರ್ ಶುಭಾರಂಭ

Suddi Udaya
error: Content is protected !!