April 2, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಕಳೆಂಜ: ಜಾಗದ ವಿಚಾರವಾಗಿ ಹಲ್ಲೆ, ಬೆದರಿಕೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ : ಕಳೆಂಜ ಗ್ರಾಮದ ಲಕ್ಷ್ಮಿ ನಾರಾಯಣ ಗೌಡ (39ವ) ಎಂಬವರಿಗೆ ಸಂಬಂಧಿತರಾದ ಹೊನ್ನಪ್ಪ ಗೌಡ, ಮೇದಪ್ಪ ಗೌಡ ಹಾಗೂ ಕುಸುಮಾ ಎಂಬುವವರು ಜಾಗದ ವಿಚಾರವಾಗಿ ಹಲ್ಲೆ ಮಾಡಿರುವ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆಂಜ ಲಕ್ಷ್ಮಿ ನಾರಾಯಣ ಗೌಡ (39) ಎಂಬವರ ದೂರಿನಂತೆ ಸಂಬಂಧಿಕರಾದ ಲಕ್ಷ್ಮಿ ನಾರಾಯಣ ಗೌಡ ಮತ್ತು ಹೊನ್ನಪ್ಪ ಗೌಡ, ಮೇದಪ್ಪ ಗೌಡ ಹಾಗೂ ಕುಸುಮಾ ಅವರಿಗೆ ಜಾಗದ ವಿಚಾರದಲ್ಲಿ ತಕರಾರುರಿದ್ದು, ಲಕ್ಷ್ಮಿನಾರಾಯಣ ಅವರ ಮನೆಯ ಸಮೀಪದ ಖಾಲಿ ಜಾಗದಲ್ಲಿ ಲಕ್ಷ್ಮೀ ನಾರಾಯಣ ಅವರ ಅಣ್ಣ ಹೊನ್ನಪ್ಪರವರು ಅಡಿಕೆ ಒಣ ಹಾಕುವ ಕುರಿತು ತಕರಾರು ಮಾಡಿದ್ದು, ಡಿ. 13ರಂದು ಬೆಳಿಗ್ಗೆ ಆರೋಪಿಗಳು ದೂರುದಾರರನ್ನು ಅವ್ಯಾಚವಾಗಿ ಬೈದು, ಹೊನ್ನಪ್ಪ ಗೌಡರು ಕೈಯಲ್ಲಿದ್ದ ಕಬ್ಬಿಣದ ಸರಳಿನಿಂದ ಲಕ್ಷ್ಮಿನಾರಾಯಣ ಅವರ ತಲೆಗೆ ಆರೋಪಿಗಳೊಂದಿಗೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 102/2023 ಕಲಂ:341.504.324.323.506.R/W.34 IPC ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಸ್ವ-ಉದ್ಯೋಗ ಅಥವಾ ಉದ್ಯೋಗ ತಯಾರಿಕಾ ತರಬೇತಿಗೆ ಅರ್ಜಿ ಆಹ್ವಾನ

Suddi Udaya

ನವರಾತ್ರಿಯ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಮುನ್ನೆಚ್ಚರಿಕೆಯಾಗಿ ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿಗಳಿಂದ ಬೆಳ್ತಂಗಡಿಯಲ್ಲಿ ಪಥಸಂಚಲನ

Suddi Udaya

ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿಗೆ “ರಾಷ್ಟ್ರೀಯ ಅಧ್ಯಕ್ಷರ ಭೇಟಿ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಬಿಸಿಎ ವಿಭಾಗದಿಂದ ಎನಿಗ್ಮಾ- 2024

Suddi Udaya

2೦47ರಲ್ಲಿ ವಿಕಸಿತ ಭಾರತ : ರಾಷ್ಟ್ರೀಯ ವಿಚಾರ ಸಂಕಿರಣ

Suddi Udaya
error: Content is protected !!