September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಬೋಂಟ್ರೊಟ್ಟುಗುತ್ತು, ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಕಲಶಾಭಿಷೇಕ ಸಮಿತಿ ಮಹಾ ಚಂಡಿಕಾಯಾಗ ಮತ್ತು ದೈವಗಳ ಪುನರ್ ಪ್ರತಿಷ್ಠ ಕಲಶಾಭಿಷೇಕ ಮತ್ತು ನೇಮೋತ್ಸವ ಅಂಗವಾಗಿ ಕ್ಷೇತ್ರದಲ್ಲಿ ಚಪ್ಪರ ಮುಹೂರ್ತ

ಬಳಂಜ: ಬೋಂಟ್ರೊಟ್ಟುಗುತ್ತು, ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್ ಮತ್ತು ಕಲಶಾಭಿಷೇಕ ಸಮಿತಿ ವತಿಯಿಂದ ಮಹಾ ಚಂಡಿಕಾ ಯಾಗ ಮತ್ತು ದೈವಗಳ ಪುನರ್ ಪ್ರತಿಷ್ಠ ಕಲಶಾಭಿಷೇಕ ಮತ್ತು ನೇಮೋತ್ಸವವು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರ ಶುಭಾಶೀರ್ವಾದಗಳೊಂದಿಗೆ ಶ್ರೀನಿವಾಸ ಅಮ್ಮುಣ್ಣಾಯ ಅಸ್ರಣ್ಣರು ಮದ್ದಡ್ಕ, ಇವರ ನೇತೃತ್ವದಲ್ಲಿ ಡಿ. 28 ರಿಂದ 31ರ ವರೆಗೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಇದರ ಮೊದಲ ಅಂಗವಾಗಿ ಬೊಂಟ್ರೋಟ್ಟುಗುತ್ತು ಕ್ಷೇತ್ರದಲ್ಲಿ ಚಪ್ಪರ ಮುಹೂರ್ತ ಡಿ16 ರಂದು ನಡೆಯಿತು.

ಅರಸು ಪಟ್ಟಿ ಪ್ರದಾನರಾದ ಗಣೇಶ್ ಪೂಜಾರಿ ಬೊಂಟ್ರೋಟ್ಟುಗುತ್ತು ಚಪ್ಪರ ಮುಹೂರ್ತದ ವಿಧಿ ವಿಧಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಲಶಾಭಿಷೇಕ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ, ಬೊಂಟ್ರೋಟ್ಟು ಗುತ್ತು ಟ್ರಸ್ಟ್ ನ ಅಧ್ಯಕ್ಷ ಹರೀಶ್ ಪೂಜಾರಿ ಬೈಲಬರಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್.ಎಸ್, ಪ್ರಮುಖರಾದ ಕೃಷ್ಣಪ್ಪ ಪೂಜಾರಿ ಬೋಟ್ರೋಟ್ಟು ಗುತ್ತು, ಸದಾನಂದ ಪೂಜಾರಿ ಬೊಂಟ್ರೋಟ್ಟು ಗುತ್ತು,ಹರೀಶ್ ರೈ ಬರಮೇಲು, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ನಿರ್ದೇಶಕರಾದ ಪ್ರವೀಣ್ ಪೂಜಾರಿ ಲಾಂತ್ಯಾರು, ರಂಜಿತ್ ಪೂಜಾರಿ ಮಜಲಡ್ಡ, ಹಿರಿಯರಾದ ವಸಂತ ಪೂಜಾರಿ ತಾರಿಪಡ್ಪು,ಅಸದೋಕ್ ಪೂಜಾರಿ ಮುಡಾಯಿಬೆಟ್ಟು, ಅಶ್ವಿನ್ ಕುಮಾರ್ ಬಿ.ಕೆ,ಮಹೇಶ್ ,ಅನಿಲ್, ಅಖಿಲ್, ಯತೀಶ್ ಹುಂಬೆಜೆ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಡಿ.31 ರಂದು ಧರ್ಮರಸು, ದೈವ ಕೊಡಮಣಿತ್ತಾಯ, ಮಹಿಸಂದಾಯ, ಕೇತುಲ್ಲಾಯ, ಅಂಗಣ ಪಂಜುರ್ಲಿ, ಕಲ್ಲುರ್ಟಿ ಕಲ್ಕುಡ, ಕ್ಷೇತ್ರಪಾಲ ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ‌.

Related posts

ರಕ್ಷಿತ್ ಶಿವರಾಂ ಅವರ ಮನವಿಗೆ ಅಧಿಕಾರಿಗಳ ಸ್ಪಂದನೆ: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಗೆ ಅವಕಾಶ

Suddi Udaya

ಬೆಳ್ತಂಗಡಿ ಪ.ಪಂ. ಆಡಳಿತ ಅಧಿಕಾರಿಯಾಗಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಅಧಿಕಾರ ಸ್ವೀಕಾರ

Suddi Udaya

ಉಡುಪಿ ಶ್ರೀಕೃಷ್ಣ ಮಾಸೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ದಂಪತಿಗಳಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವ

Suddi Udaya

ಉಜಿರೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ವಯೋಲಿನ್ ತರಗತಿಗಳು ಶುಭಾರಂಭ

Suddi Udaya

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದರೆಗೆ ಗುದ್ದಿದ ಲಾರಿ

Suddi Udaya

ಸ್ಪರ್ಧಾತ್ಮಕ ಪರೀಕ್ಷೆ: ಕು. ಅಂಚಿತಾ ಡಿ. ಜೈನ್ ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!