ಅಳದಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಚುನಾವಣೆಯು ಡಿ.17 ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಅಳದಂಗಡಿ ಜ್ಞಾನ ಮಾರ್ಗದಲ್ಲಿ ನಡೆಯಲಿದೆ.
ಅಳದಂಗಡಿ ಸಹಕಾರಿ ಸಂಘದಲ್ಲಿ ೨೨೦೦ ಸದಸ್ಯರಿದ್ದು ಒಟ್ಟು 12 ಸ್ಥಾನಗಳಿಗೆ ಸ್ಪರ್ಧೆ ನಡೆಯಲಿದೆ. ಸಾಮಾನ್ಯ ಸಾಲಗಾರ ಕ್ಷೇತ್ರದಿಂದ 5 ಸ್ಥಾನ, ಸಾಲಗಾರ ಕ್ಷೇತ್ರದಿಂದ ಪರಿಶಿಷ್ಟ ಜಾತಿ ಹಾಗೂ ಪ.ಪಂಗಡ ಮೀಸಲು ಸ್ಥಾನ 2, ಸಾಲಗಾರರ ಕ್ಷೇತ್ರದಿಂದ ಮಹಿಳಾ ಮೀಸಲು ಸ್ಥಾನ 2, ಸಾಲಗಾರ ಕ್ಷೇತ್ರದಿಂದ ಹಿಂದುಳಿದ ಪ್ರವರ್ಗ ಎ ಸ್ಥಾನ 1, ಹಿಂದಳಿದ ಪ್ರವರ್ಗ ಬಿ ಸ್ಥಾನ 1, ಸಾಲಗಾರರಲ್ಲದ ಕ್ಷೇತ್ರದಿಂದ ಸಾಮಾನ್ಯ ಸ್ಥಾನ 1 ಆಗಿದೆ.
12 ಸ್ಥಾನಗಳಿಗೆ 24 ಮಂದಿ ಸ್ಪರ್ದಿಸಲಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ಚುನಾವಣೆ ಪೈಪೋಟಿಯನ್ನು ಪಡೆದುಕೊಂಡಿದೆ.
ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಹುತೇಕವಾಗಿ ವಿವಿಧ ಕ್ಷೇತ್ರದಲ್ಲಿ ದುಡಿದ ಪ್ರಮುಖರಿದ್ದಾರೆ. ಒಂದಷ್ಟು ಹೊಸ ಮುಖಗಳು, ಹಿಂದಿನ ಅವಧಿಯಲ್ಲಿ ನಿರ್ದೇಶಕರಾದವರು, ಅಧ್ಯಕ್ಷರಾದವರು ಸ್ಪರ್ಧೆಯಲ್ಲಿದ್ದು ಎಲ್ಲರಿಗೂ ಗೆಲುವು ಯಾರಿಗೆ ಸಲ್ಲುತ್ತದೆಂದು ಕುತೂಹಲ ಕೆರಳಿಸಿದೆ.
ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಅಭ್ಯರ್ಥಿಗಳು: ಸ್ಪರ್ಧಾ ಕಣದಲ್ಲಿ ಸಹಕಾರಿ ಭಾರತಿ ಅಭ್ಯಥಿಗಳಾದ ಸಾಮಾನ್ಯ ಕ್ಷೇತ್ರದಿಂದ ಹಿಂದಿನ ಅವಧಿಯ ನಿರ್ದೇಶಕ ಗುರುಪ್ರಸಾದ್ ಹೆಗ್ಡೆ ಬಳಂಜ, ಯುವ ಸಂಘಟಕ ಜನಾರ್ಧನ್ ಕೊಡಂಗೆ, ಉದ್ಯಮಿ ರಾಕೇಶ್ ಹೆಗ್ಡೆ ಬಳಂಜ, ರಾಜಕೀಯ ಮುಖಂಡ ವಿಶ್ವನಾಥ ಹೊಳ್ಳ ನಾಲ್ಕೂರು, ಹಿರಿಯರಾದ ಸುಂದರ ಆಚಾರ್ಯ ಕುದ್ಯಾಡಿ, ಪಂ ಪಂಗಡ ಮತ್ತು ಜಾತಿ ಧರ್ಣಪ್ಪ ನಾವರ, ಕೊರಗಪ್ಪ ಬಡಗಕಾರಂದೂರು, ಹಿಂದುಳಿದ ಪ್ರವರ್ಗ ಎ ಸ್ಥಾನದಿಂದ ಹಿಂದಿನ ಅವಧಿಯ ನಿರ್ದೆಶಕ ಬಾಲಕೃಷ್ಣ ಪೂಜಾರಿ ಯೈಕುರಿ ನಾಲ್ಕೂರು, ಹಿಂದುಳಿದ ಪ್ರವರ್ಗ ಬಿ ಸ್ಥಾನದಿಂದ ಬಳಂಜ ಗ್ರಾ.ಪಂ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕುರೆಲ್ಯ, ಮಹಿಳಾ ಮೀಸಲು ಸ್ಥಾನದಿಂದ ಮಮತಾ ತೆಂಕಕಾರಂದೂರು, ಸುಂದರಿ ಪಿಲ್ಯ, ಸಾಲಗಾರರಲ್ಲದ ಸಾಮಾನ್ಯ ಸ್ಥಾನದಿಂದ ಬಳಂಜ ಗ್ರಾ.ಪಂ ಮಾಜಿ ಅಧ್ಯಕ್ಷ ಹೇಮಂತ್ ತೆಂಕಕಾರಂದೂರು ಸ್ಪರ್ಧೆಯಲ್ಲಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು: ಸಾಮಾನ್ಯ ಕ್ಷೇತ್ರದಿಂದ ಚಿಂತಕ ದಿನೇಶ್ ಪಿ.ಕೆ ಬಳಂಜ, ಬಳಂಜ ಗ್ರಾ.ಪಂ ಮಾಜಿ ಅಧ್ಯಕ್ಷ ವಿಕ್ಟರ್ ಕ್ರಾಸ್ತ ನಾಲ್ಕೂರು, ಉದ್ಯಮಿ ಸತೀಶ್ ಪೂಜಾರಿ ಅಳದಂಗಡಿ, ಜನಪದ ಕಲಾವಿದ ಸತೀಶ್ ದೇವಾಡಿಗ ಬಳಂಜ, ಅಳದಂಗಡಿ ಸಿ.ಎ ಬ್ಯಾಂಕ್ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ರೈ ಪಡ್ಯೋಡಿ ಬಡಗಕಾರಂದೂರು, ಪ.ಪಂಗಡ ಹಾಗೂ ಪ.ಜಾತಿ ಕ್ಷೇತ್ರದಿಂದ ರತ್ನಾಕರ ನಾಯ್ಕ ನಾವರ, ರಮೇಶ್ ನಾಲ್ಕೂರು, ಹಿಂದುಳಿದ ಪ್ರವರ್ಗ ಎ ಸ್ಥಾನದಿಂದ ಹಿರಿಯರಾದ ದೇಜಪ್ಪ ಪೂಜಾರಿ ಬಳಂಜ, ಹಿಂದುಳಿದ ಪ್ರವರ್ಗ ಬಿ ಸ್ಥಾನದಿಂದ ಸಂಘಟಕ ದೇವಿಪ್ರಸಾದ್ ಶೆಟ್ಟಿ ಬಡಗಕಾರಂದೂರು, ಮಹಿಳಾ ಮೀಸಲು ಸ್ಥಾನದಿಂದ ಮೋನಿಕಾ ನಿಲೋಫರ್ ಡಿಸೋಜ ಬಡಗಕಾರಂದೂರು, ಅಳದಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ವಸಂತಿ ಕುದ್ಯಾಡಿ, ಸಾಲಗಾರರಲ್ಲದ ಕ್ಷೇತ್ರದಿಂದ ಲೋಕೇಶ್ ಕೆ ಕುದ್ಯಾಡಿ ಅಂತಿಮ ಕಣದ ಸ್ಪರ್ಧೆಯಲ್ಲಿದ್ದಾರೆ.