ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬಂಗಾಡಿ ರವಿರಾಜ ಬಳ್ಳಾಲ್ ಅವರ ನಿಧನಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

ಬೆಳ್ತಂಗಡಿ: ಬಂಗಾಡಿ ರವಿರಾಜ ಬಳ್ಳಾಲ್ ಅವರ ನಿಧನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.

ರವಿರಾಜ ಬಳ್ಳಾಲ್ ಧರ್ಮಾನುರಾಗಿಗಳಾಗಿದ್ದು ಬಂಗಾಡಿ ಬಸದಿಯನ್ನೇ ಅತಿಶಯ ಕ್ಷೇತ್ರವಾಗಿ ಬೆಳೆಸಿದರು. ಸದಾ ಸ್ವಾಧ್ಯಾಯ ನಿರತರಾಗಿದ್ದ ಅವರು ಧರ್ಮ, ಸಾಹಿತ್ಯ, ಕಲೆ, ಸಂಸ್ಕೃತಿ, ಆಧ್ಯಾತ್ಮಿಕ ಸಾಧನೆ ಬಗ್ಯೆ ಚಿಂತನ-ಮಂಥನ ನಡೆಸುತ್ತಿದ್ದರು.
ಬಂಗಾಡಿಯಲ್ಲಿ ಹಲವಾರು ಧರ್ಮಪ್ರಭಾವನಾ ಕಾರ್ಯಗಳನ್ನು ಹಮ್ಮಿಕೊಂಡಿದ್ದರು. ಕೃಷಿ, ತೋಟಗಾರಿಕೆಯಲ್ಲಿಯೂ ಅವರಿಗೆ ವಿಶೇಷ ಆಸಕ್ತಿ-ಅನುಭವ ಇತ್ತು.

ಧರ್ಮಸ್ಥಳದ ಪರಮ ಭಕ್ತರೂ, ಅಭಿಮಾನಿಯೂ ಆಗಿದ್ದ ಅವರು ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.
ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆ ಬಗ್ಗೆ ಅವರು ಅಮೂಲ್ಯ ಕೃತಿಯೊಂದನ್ನೂ ರಚಿಸಿದ್ದರು.

Related posts

ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ಶ್ರೀ ರಾಮಕ್ಷೇತ್ರ ಕನ್ಯಾಡಿಯಲ್ಲಿ ರಾಮ ನಾಮ ತಾರಕ ಮಂತ್ರ ಪಠಣ

Suddi Udaya

ಉಜಿರೆ: ಮಾಚಾರು ದರ್ಖಾಸು ನಿವಾಸಿ ಸುಂದರಿ ನಿಧನ

Suddi Udaya

ಚಾಂದ್ರಮಾನ ಯುಗಾದಿಯಂದು ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya

ವಿಪರೀತ ಗಾಳಿ ಮಳೆ: ನೇಲ್ಯಡ್ಕ ಕೆ.ವಿ. ಅಬ್ರಹಾಂ ರವರ ಮನೆಗೆ ಬಿದ್ದ ವಿದ್ಯುತ್ ಕಂಬ

Suddi Udaya

ಅರಸಿನಮಕ್ಕಿಯಲ್ಲಿ 22ನೇ ವರ್ಷದ ಅಷ್ಟಮಿ : ಹರೀಶ್ ಪೂಂಜರಿಂದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ‘ಪರಂಪರಾ ಟು ಪ್ರಗತಿ’ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಕ್ಕೆ ಚಾಲನೆ

Suddi Udaya
error: Content is protected !!