32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ: ಹಿರಿಯರ ಸೇವಾ ಪ್ರತಿಷ್ಠಾನದಿಂದ ದಶ ಸಾಧಕರಿಗೆ ಗೌರವಾರ್ಪಣೆ     

 ಕೊಕ್ಕಡ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಟಾನದ ವತಿಯಿಂದ ಡಿ 17ರಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ  ಗಣೇಶ ಕಲಾ ಭವನದಲ್ಲಿ ನಡೆದ ದ್ವಿತೀಯ ವಾರ್ಷಿಕೋತ್ಸವದಲ್ಲಿ  ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಾಧಕರನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಯವರು ಹಾಗು ಗಣ್ಯ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.                                                                                 

 ಶ್ರೀ  ಎಡನೀರು  ಮಠದ ಆಡಳಿತ ಅಧಿಕಾರಿ ರಾಜೇಂದ್ರ ಕಲ್ಲೂರಾಯ, ಮೂಡಬಿದ್ರಿಯ ನ್ಯಾಯವಾದಿ ಬಾಹುಬಲಿ ಪ್ರಸಾದ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಸಂತ ಸುವರ್ಣ, ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಂಗಯ್ಯ ಸುಳ್ಯ, ಪರಿಸರ ತಜ್ಞ ಪ್ರೊ.ರಾಜಮಣಿ  ರಾಮಕುಂಜ, ಸುರೇಶ ಬೈಂದೂರು,ಸಾಮಾಜಿಕ ಕಾರ್ಯಕರ್ತ ಉಮೇಶ್ ಶೆಣೈ, ಶ್ರೀ ಕ್ಷೇತ್ರ ಸೌತಡ್ಕದ ಸಿಬಂದಿಗಳಾದ  ಬಿ.ಕೇಶವ ಶಬರಾಯ,   ಎಂ .ವೈ ರಾಮಕೃಷ್ಣ ಮತ್ತು ಶ್ರೀಮತಿ ವಿನೋದ ಕೆ.ಶೆಟ್ಟಿ ಅವರನ್ನು ಎಡನೀರು ಶ್ರೀಗಳವರು ಮತ್ತು ಗಣ್ಯ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.

ಜಯರಾಮ ಭಂಡಾರಿ, ಭವಾನಿಶಂಕರ್ ಮತ್ತು ಮಹಾಬಲ ರೈ   ಸನ್ಮಾನಿತರ ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತರ ಪರವಾಗಿ  ರಾಜೇಂದ್ರ ಕಲ್ಲೂರಾಯ ಉತ್ತರಿಸಿ ವಯಸ್ಸು, ಸ್ಥಾನಮಾನ, ಗಳಿಸಿದ ಜ್ಞಾನ ಸಂಪಾದನೆ ಮತ್ತು ಸಮಾಜಮುಖಿ ಕೆಲಸಗಳಿಂದ  ಹಿರಿತನ ಪಡೆಯುತ್ತಾರೆ. ಹಿರಿಯರ ಸಮಸ್ಯೆಗಳಿಗೆ  ಪ್ರತಿಷ್ಠಾನದಿಂದ ಪರಿಹಾರ  ದೊರೆಯಲಿ ಎಂದು ಆಶಿಸಿದರು.

Related posts

ನಿಡ್ಲೆ ಸರಕಾರಿ ಪ್ರೌಢ ಶಾಲೆಯ ನೂತನ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Suddi Udaya

ಕೊಯ್ಯೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ

Suddi Udaya

ಇಂದಬೆಟ್ಟು: ಭಾರಿ ಗಾಳಿ ಮಳೆಗೆ ವಾಸ್ತವ್ಯದ ಮನೆಯ ಮೇಲ್ಛಾವಣಿ ಕುಸಿತ, ಪ್ರಾಣಾಪಾಯದಿಂದ ಪಾರು

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ವತಿಯಿಂದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಗೆ ದೇಣಿಗೆ ಹಸ್ತಾಂತರ

Suddi Udaya

ಬೆಳ್ತಂಗಡಿ ಭಕ್ತಿ ಹೆಜ್ಜೆ ಬಳಗದಿಂದ “ಭಜಕೆರೆ ಆಟಿದ ಕಮ್ಮೆನ ಜನಪದ ಮಿನದನ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕಳಿಯ ಬದಿನಡೆ ದೈವಗಳಿಗೆ ವಾರ್ಷಿಕ ನೇಮೋತ್ಸವ

Suddi Udaya
error: Content is protected !!