ಬೆಳ್ತಂಗಡಿ: ಚರ್ಮಗಂಟು ರೋಗದ ಎರಡನೇ ಅಲೆಯೇ ಎಂಬ ಸಂದೇಹ

Suddi Udaya

ಬೆಳ್ತಂಗಡಿ; ಕೋವಿಡ್ 19 ರೋಗ ಲಕ್ಷಣಗಳು ಪಕ್ಕದ ಕೇರಳ ರಾಜ್ಯದಲ್ಲಿ ಮತ್ತೆ ಕಂಡು ಬಂದಿತ್ತು ಮೂರು ಜನ ಮೃತಪಟ್ಟ ಬೆನ್ನಿಗೇ ಆರೋಗ್ಯ ಇಲಾಖೆ ಕಠಿಣ ಕ್ರಮದ ಹೆಜ್ಜೆಗಳನ್ನಿಡಲು ಆರಂಭಸಿದೆ. ಈ ಮಧ್ಯೆ ಹಸುಗಳಿಗೆ ಹರಡಿದ್ದ ಚರ್ಮ ಗಂಟು ರೋಗದ ಎರಡನೇ ಅಲೆ ಬೆಳ್ತಂಗಡಿ ತಾಲೂಕಿಗೆ ಮತ್ತೆ ಬಂದಿದೆಯೇ ಎಂಬ ಸಂದೇಹ ವ್ಯಕ್ತವಾಗುತ್ತಿದೆ.


ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಪೆರೋಡಿತ್ತಾಯಕಟ್ಟೆ ಪ್ರದೇಶದ ಕಾಸಿಂ ಗಿಂಡಾಡಿ ಇವರ ಮನೆಯ‌ ಗೀರ್ ತಳಿಯ ಗಂಡು ಕರುವಿನ ಮೈ ಮೇಲೆ ಚರ್ಮ ಗಂಟು ರೋಗ ಪತ್ತೆಯಾಗಿದೆ‌.
ಈ ಬಗ್ಗೆ ಪಶು ಸಂಗೋಪನೆ ಇಲಾಖೆ ಗಮನಹರಿಸಬೇಕಾಗಿದ್ದು, ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ

Leave a Comment

error: Content is protected !!