ಇಳಂತಿಲ : ಪ್ರಾಥಮಿಕ ಆರೋಗ್ಯ ಕೇಂದ್ರ ಕಣಿಯೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ವಿಭಾಗ ಮಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು. ದ.ಕ. ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ದ.ಕ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಕಣಿಯೂರು ವಲಯ ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ) ಇಳಂತಿಲ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ), ವಾಣಿ ಶ್ರೀ ಭಜನಾ ಮಂಡಳಿ ವಾಣಿನಗರ ಇಳಂತಿಲ, ವಾಣಿ ಶ್ರೀ ಗೆಳೆಯರ ಬಳಗ ಇಳಂತಿಲ, ಇಳಂತಿಲ ಗ್ರಾಮದ ಎಲ್ಲಾ ಸ್ತ್ರೀ ಶಕ್ತಿ ಸಂಘಗಳು ಯುವಕ ಮಂಡಲ (ರಿ.) ವಾಣಿನಗರ ಇಳಂತಿಲ ಮಂಗಳ ಕಲಾ ಸಾಹಿತ್ಯ ವೇದಿಕೆ ಪಟ್ಟಿ ಬಡಗನ್ನೂರು ಘಟಕ ಪುತ್ತೂರು ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಗ್ರಾ.ಪಂ. ಇಳಂತಿಲ ಸಂಜೀವಿನಿ ಒಕ್ಕೂಟ ಗ್ರಾಮ ಪಂಚಾಯತ್ ಅಳಂತಿಲ ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವನಗರ ಕಾರ್ಕಳ (ರಿ) ಇದರ ಸಂಯುಕ್ತಾಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ 28ನೇ ಕಾರ್ಯಕ್ರಮ ನೇತ್ರ ವೈದ್ಯರ ನಡೆ ಗ್ರಾಮ ಪಂಚಾಯತ್ ಕಡೆ ಎಂಬ ಕಾರ್ಯಕ್ರಮ ಯೋಜನಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಡಿ.17 ರಂದು ಇಳಂತಿಲ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಶಿಬಿರವನ್ನು ಇಲಂತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಪ್ಪ ಗೌಡ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಇಲಂತಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ, ಇಳಂತಿಲ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಮಹಾಬಲ ಶೆಟ್ಟಿ, ಉಪ್ಪಿನಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಕೆವಿ ಪ್ರಸಾದ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಿಕಾ ಭಟ್, ಸದಸ್ಯರಾದ ಉಷಾ ಎಮ್. ಎಸ್, ಜಾನಕಿ ಕಣಿಯೂರು ಪ್ರಾರ್ಥಮಿಕ ವೈದ್ಯಾಧಿಕಾರಿ ಅರ್ಚನಾ, ನೇತ್ರ ತಜ್ಞರಾದ ಅಂಬಿಕ ಉಪಸ್ಥಿತರಿದ್ದರು.
ಕಾರ್ಯಕ್ರಮ ಸಂಯೋಜಕರಾದ ಮುರಳಿ ನಿರೂಪಿಸಿ, ಸ್ವಾಗತಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಂಜೀವ ನಾಯ್ಕ್ ಧನ್ಯವಾದವಿತ್ತರು.