September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಜೈ ಕರ್ನಾಟಕ ಗಾಯಕರ ಬಳಗದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ: ಗೌರವ ಅಧ್ಯಕ್ಷರಾಗಿ ಮನೋಹರ ಪ್ರಸಾದ್, ಜಿಲ್ಲಾ ಅಧ್ಯಕ್ಷರಾಗಿ ಇಸ್ಮಾಯಿಲ್ ಬಂಗಾಡಿ

ಬೆಳ್ತಂಗಡಿ: ಜೈ ಕರ್ನಾಟಕ ಗಾಯಕರ ಬಳಗದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ದಕ್ಷಿಣ ಕನ್ನಡ ಜಿಲ್ಲೆಯ ವಾಯ್ಸ್ ಆಫ್ ಬಂಗಾಡಿ ಕಚೇರಿಯಲ್ಲಿ ಜೈ ಕರ್ನಾಟಕ ಗಾಯಕರ ಬಳಗ ಸಂಸ್ಥಾಪಕ ಅಧ್ಯಕ್ಷರಾದ ಹೆಚ್.ಎ ಶ್ರೀನಿವಾಸ್ ಮೂರ್ತಿ ಸಮ್ಮುಖದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜೈ ಕರ್ನಾಟಕ ಗಾಯಕರ ಬಳಗ ಸಂಸ್ಥಾಪಕ ಅಧ್ಯಕ್ಷ ಹೆಚ್.ಎ ಶ್ರೀನಿವಾಸ್ ಮೂರ್ತಿ ಮತ್ತು ರಾಜ್ಯ ಉಪಾಧ್ಯಕ್ಷರಾದ ಶಾಂತಾರಾಜ್ ಅವರಿಗೆ ಜಿಲ್ಲಾ ಕಾಲಾವಿದರಿಂದ ಸನ್ಮಾನ ಮಾಡಲಾಯಿತು.


ಕಾರ್ಯಕ್ರಮದಲ್ಲಿ ರಾಜ್ಯ ಅಧ್ಯಕ್ಷರು ಮತ್ತು ರಾಜ್ಯ ಉಪಾಧ್ಯಕ್ಷರು ಗಾಯಕರಿಗೆ ಮಾಹಿತಿ ನೀಡಿದರು. ನಂತರ ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜೈ ಕರ್ನಾಟಕ ಗಾಯಕರ ಬಳಗದ ದಕ್ಷಿಣ ಕನ್ನಡ ಜಿಲ್ಲಾ ಗೌರವ ಅಧ್ಯಕ್ಷರಾಗಿ ಮನೋಹರ ಪ್ರಸಾದ್ ,ಜಿಲ್ಲಾ ಅಧ್ಯಕ್ಷರಾಗಿ ಇಸ್ಮಾಯಿಲ್ ಬಂಗಾಡಿ, ಉಪಾಧ್ಯಕ್ಷರಾಗಿ ನವೀನಾಂಜಲಿ ಪುತ್ತೂರು, ಪ್ರದಾನ ಕಾರ್ಯದರ್ಶಿಯಾಗಿ ರವಿ ನೇತ್ರಾವತಿ ನಗರ, ಉಪ ಕಾರ್ಯದರ್ಶಿಯಾಗಿ ಅಶ್ವೀರ್ ಸೋಮಂತಡ್ಕ, ಕೋಶಾಧಿಕಾರಿಯಾಗಿ ನವೀನ್ ಕುಮಾರ್ ಬಂಗಾಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶಾಹೀನ್ ಅತ್ತಾಜೆ, ಜಿಲ್ಲೆಯ ಮಹಿಳಾ ಘಟಕ ಅಧ್ಯಕ್ಷೆಯಾಗಿ ಕವಿತಾ.ಡಿ.ಪುತ್ತೂರು ಆಯ್ಕೆಯಾದರು.

Related posts

ಬೆಳ್ತಂಗಡಿ: ಆ.7ರಿಂದ ಯಕ್ಷಸಾಂಗತ್ಯ ಸಪ್ತಕ ತಾಳಮದ್ದಳೆ

Suddi Udaya

ಸುಲ್ಕೇರಿ ಗ್ರಾ.ಪಂ. ವತಿಯಿಂದ ಸ್ವಾಮಿ ವಿವೇಕಾನಂದರ ಪುತ್ಥಳಿ ಲೋಕಾರ್ಪಣೆ

Suddi Udaya

ಮಡಂತ್ಯಾರು: ಮೂಡಯೂರು ರಸ್ತೆ ಬದಿ ಸ್ವಚ್ಛತಾ ಕಾರ್ಯ

Suddi Udaya

ಚಿನ್ನಾಭರಣ ಪರೀಕ್ಷಕರನ್ನು ವಜಾ ಮಾಡಿರುವ ಪ್ರಕರಣದ ನಿಗೂಢತೆಯನ್ನು ಬಯಲು ಮಾಡಬೇಕೆಂದು ಅಗ್ರಹಿಸಿ ಕೊಕ್ಕಡ ಕೆನರಾ ಬ್ಯಾಂಕ್ ಮ್ಯಾನೇಜರ್ ಮೂಲಕ ಕೇಂದ್ರ ಕಚೇರಿಗೆ ಮನವಿ

Suddi Udaya

ಚಂದು ಲಾಯಿಲ ಹಾಗೂ ಬಿ. ರಾಮಣ್ಣ ಶೆಟ್ಟಿ ಮಾಲಾಡಿ ಇವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಲ್ಲಿ “ಹೆಜ್ಜೆಗುರುತು” ವಿಶೇಷ ಕಾರ್ಯಕ್ರಮ

Suddi Udaya
error: Content is protected !!