23.6 C
ಪುತ್ತೂರು, ಬೆಳ್ತಂಗಡಿ
May 21, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮರ ಕಟ್ಟಿಂಗ್ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಮೆಷಿನ್ ತಗುಲಿ ಸಾವ್ಯದ ವ್ಯಕ್ತಿ ಪ್ರಶಾಂತ್ ಪೂಜಾರಿ ಸಾವು

ಬೆಳ್ತಂಗಡಿ : ಮರ ಕಟ್ಟಿಂಗ್ ಮಾಡುವಾಗ ಕಟ್ಟಿಂಗ್ ಮೆಷಿನ್ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿಯ ಸಾವ್ಯದಲ್ಲಿ ಡಿ. 20 ರಂದು ನಡೆದಿದೆ.

ತಾಲೂಕಿನ ಸಾವ್ಯ ಗ್ರಾಮದ ಹೊಸಮನೆ ಎಂಬಲ್ಲಿ ಪ್ರಶಾಂತ್ ಪೂಜಾರಿ ಮತ್ತು ಸಹೋದರ ಪ್ರಮೋದ್ ರವರು ಕಟ್ಟಿಗೆ ಮಾಡುವಾಗ ಆಕಸ್ಮಿಕವಾಗಿ ಕಟ್ಟಿಂಗ್ ಮೆಶಿನ್ ಪ್ರಶಾಂತ್‌ ಪೂಜಾರಿಯವರ ಕುತ್ತಿಗೆಯ ಭಾಗಕ್ಕೆ ತಾಗಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಮ್.ಸಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಿದಾಗ ಚಿಕಿತ್ಸೆ ಫಲಿಸದೆ ಪ್ರಶಾಂತ್ ಪೂಜಾರಿ (36) ಎಂಬವರು ಡಿ.20ರಂದು(ಇಂದು) ಬೆಳಗ್ಗಿನ ಜಾವ ಸುಮಾರು 2 ಗಂಟೆಗೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಪ್ರಶಾಂತ್ ಸಹೋದರ ಪ್ರಮೋದ್ ವೇಣೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

Related posts

ಸೋಣಂದೂರು: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಪಲ್ಟಿ

Suddi Udaya

ವೇಣೂರು: ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣ ಕಳವು

Suddi Udaya

ಕಳೆಂಜ: ಕಾಯರ್ತಡ್ಕ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಸಾಮೂಹಿಕ ಪ್ರಾರ್ಥನೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಬೆಹರಿನ್ ಇಂಡಿಯಾ ಇಂಟರ್ನ್ಯಾಷನಲ್ ಆವಾರ್ಡ್- 2024

Suddi Udaya

ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದಿಂದ ರೂ. 343.74 ಕೋಟಿ ಅನುದಾನ ಬಿಡುಗಡೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

Suddi Udaya

ಫೆಂಗಲ್ ಚಂಡಮಾರುತ: ಡಿ.02 ರಿಂದ 03 ರವರೆಗೆ ದ.ಕ. ಜಿಲ್ಲೆಯಾದ್ಯಂತ ಸಾಧಾರಣದಿಂದ ಭಾರಿ ಮಳೆಯಾಗುವ ಮುನ್ಸೂಚನೆ

Suddi Udaya
error: Content is protected !!