ಅಂಗಳದಲ್ಲಿದ್ದ ಅಡಿಕೆಯನ್ನು ತಾರಸಿಯ ಮೇಲೆ ಹಾಕಿ ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಪಟ್ರಮೆ: ಅಂಗಳದಲ್ಲಿದ್ದ ಅಡಿಕೆಯನ್ನು ತಾರಸಿಯ ಮೇಲೆ ಹಾಕಿ ವಾಪಾಸು ಬರುತ್ತಿದ್ದ ಸಮಯ ನೆಲಕ್ಕೆ ಹಾಸಿದ ಟೈಲ್ಸ್‌ನಲ್ಲಿ ಕಾಲಿಗ ಹಾಕಿದ ಚಪ್ಪಲಿಯಿಂದಾಗಿ ಆಕಸ್ಮಿಕವಾಗಿ ಕಾಲು ಜಾರಿ ಆಯ ತಪ್ಪಿ ಟೈಲ್ಸ್ ನೆಲದ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಡಿ.20 ರಂದು ಪಟ್ರಮೆಯಲ್ಲಿ ನಡೆದಿದೆ.


ಪಟ್ರಮೆ ಗ್ರಾಮದ ದೇರಾಜೆ ಮನೆ ಗುರುವ (47 ವರ್ಷ) ಈ ಘಟನೆಯಲ್ಲಿ ಮೃತಪಟ್ಟವರು. ಈ ಬಗ್ಗೆ ಬಾಬು ಎಂಬವರು ಧರ್ಮಸ್ಥಳ ಠಾಣೆಗೆ ದೂರು ನೀಡಿ, ತನ್ನ ಚಿಕ್ಕಪ್ಪ ಗುರುವ ಎಂಬವರು ಡಿ. 19 ರಂದು ರಾತ್ರಿ ಪಟ್ರಮೆ ಗ್ರಾಮದ ಕುತ್ಯಾಡಿ ಎಂಬಲ್ಲಿ ರವೀಂದ್ರನಾಥ ಶೆಟ್ಟಿಯವರ ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಯ ಅಂಗಳದಲ್ಲಿದ್ದ ಅಡಿಕೆಯನ್ನು ತಾರಸಿಯ ಮೇಲೆ ಹಾಕಿ ವಾಪಾಸು ಒಳ ಮನೆಯ ಒಳಗಿನಿಂದ ಬರುತ್ತಿದ್ದ ಸಮಯ ಅವರು ಧರಿಸಿದ್ದ ಚಪ್ಪಲಿಯು ನೆಲಕ್ಕೆ ಹಾಸಿದ ಟೈಲ್ಸ್ ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಟೈಲ್ಸ್ ನೆಲದ ಮೇಲೆ ಹಿಂದಕ್ಕೆ ಬಿದ್ದು, ಹಿಂಬದಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ನಾನು, ರವೀಂದ್ರನಾಥ ಶೆಟ್ಟಿ ಮತ್ತು ಅವರ ಮನೆಯವರು ಆರೈಕೆ ಮಾಡಿ ವಿಚಾರವನ್ನು ಅವರು ಪತ್ನಿ ಲಲಿತಾರವರಿಗೆ ತಿಳಿಸಿ ಅವರ ಜೊತೆ ಚಿಕಿತ್ಸೆ ಬಗ್ಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅಲ್ಲಿನ ವೈದ್ಯರು ಪರೀಕ್ಷಿಸಿ ಸೂಚಿಸಿದಂತೆ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆಯಲ್ಲಿದ್ದವರು ಡಿ.20 ರಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ: 86/2023 ಕಲಂ:174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Comment

error: Content is protected !!