ಬೆಳಾಲು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ಬೆಳಾಲು : ಗ್ರಾಮ ಪಂಚಾಯತ್ ಬೆಳಾಲು ಹಾಗೂ ಕೆನರಾ ಬ್ಯಾಂಕ್ ಉಜಿರೆ ಇದರ ಸಹಯೋಗದೊಂದಿಗೆ ಬೆಳಾಲು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಕೆನರಾ ಬ್ಯಾಂಕ್ ಮೆನೇಜರ್ ಪ್ರಿಯಾ ಪೋರ್ ವಾಲ್ ಇವರು ನೆರವೇರಿಸಿದರು. ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕ್ ಮೆನೇಜರ್ ರವಿಕಿರಣ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಲಕ್ಷ್ಮೀಭಾಯಿ, ಕಾರ್ಯಕ್ರಮದ ಪ್ರಭಾರಿ ಸೀತಾರಾಮ್ ಬೆಳಾಲು ಇವರು ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸುರೇಂದ್ರ ಗೌಡ, ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯ ಸತೀಶ್ ಗೌಡ ಎಳ್ಳುಗದ್ದೆ,ಕೃಷ್ಣಯ್ಯ ಆಚಾರ್ಯ, ಯಶವಂತ ಗೌಡ ಬೆಳಾಲು, ಬೆಳಾಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಾಧವ ಗೌಡ ಓಣಾಜೆ,ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಗೌಡ ಪೆರ್ಲ -ಬೈಪಾಡಿ ಹಾಗೂ ಸರ್ವ ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗ , ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಯೋಜನೆಗಳ ಅರ್ಜಿ ಸಲ್ಲಿಸಲು ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ ಅಗ್ನಿಪಥ್ ನಲ್ಲಿ ಸೇನೆಗೆ ಆಯ್ಕೆಯಾದ ರಜನೀಶ್,ಕೃಷಿಕ ಸೋಮ ಮುಗೇರ ಕೊಳ್ಳಜಾಲು, ಪುಗೋದಿನಿ ಕೊಲ್ಪಾಡಿ, ಡೀಕಮ್ಮ ಗುಂಡಿಹಿತ್ತಿಲು, ಹಾಗೂ ಪೋಷನ್ ಯೋಜನೆ ಅಡಿಯಲ್ಲಿ ಅಂಗನವಾಡಿ ಮಕ್ಕಳಾದ ಧೃವಿ ಎಳ್ಳುಗದ್ದೆ , ಹರ್ಷ ಓಣಾಜೆ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಪಿ ಡಿ ಓ ಲಕ್ಷ್ಮೀಭಾಯಿ ಸ್ವಾಗತಿಸಿ, ಸತೀಶ್ ಎಳ್ಳುಗದ್ದೆ ನಿರೂಪಿಸಿ, ಗ್ರಂಥಾಲಯ ಮೇಲ್ವಿಚಾರಕ ಡೀಕಯ್ಯ ಅರಣೆಮಾರು ಧನ್ಯವಾದವಿತ್ತರು. ಕೇಂದ್ರ ಸರ್ಕಾರದ ಉಜ್ವಲ್ ಗ್ಯಾಸ್ ಫಲಾನುಭವಿಗಳ ತಂಬ್ ಹಾಗೂ ದಾಖಲೆ ಸಲ್ಲಿಸೋದು, ಪ್ರಾಥಮಿಕ ಆರೋಗ್ಯ ಕೇಂದ್ರದವರು ಆರೋಗ್ಯ ತಪಾಸಣೆ ನಡೆಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment

error: Content is protected !!