25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ನಾಲ್ಕೂರು: ಕೆಲ ಸಮಯದಿಂದ ಪುಣ್ಕೆದೊಟ್ಟು ಪರಿಸರದಲ್ಲಿ ಚಿರತೆ ಕಾಟ ಮನೆಯ ಸಾಕು ಪ್ರಾಣಿಗಳ ಮೇಲೆ ದಾಳಿ, ಭಯಬೀತರಾದ ಗ್ರಾಮಸ್ಥರು, ಅರಣ್ಯ ಇಲಾಖೆಗೆ ಮಾಹಿತಿ, ಸ್ಪಂದನೆ

ಬಳಂಜ: ನಾಲ್ಕೂರು ಗ್ರಾಮದ ಪುಣ್ಕೆದೊಟ್ಟು ಪರಿಸರದಲ್ಲಿ ದಿನದಿಂದ ದಿನಕ್ಕೆ ಚಿರತೆ ಕಾಟ ಜಾಸ್ತಿಯಾಗಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ.ಕಳೆದ ಕೆಲವು ಸಮಯದ ಹಿಂದೆ ಬಳಂಜ, ನಿಟ್ಟಡ್ಕ, ಪುಣ್ಕೆದೊಟ್ಟು ಪರಿಸರದಲ್ಲಿ ಸಾಕು ಪ್ರಾಣಿಗಳಾದ ಗೋವು, ನಾಯಿ,ಬೆಕ್ಕು, ಕೋಳಿಗಳ ಮೇಲೆ ದಾಳಿಗಳಾಗಿದ್ದು‌ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಕೂಡಲೇ ಉಪವಲಯರಣ್ಯಾಧಿಕಾರಿ‌ ತಕ್ಷಣ ಸ್ಪಂದಿಸಿ ಚಿರತೆ ಪತ್ತೆಗಾಗಿ ಪುಣ್ಕೆದೊಟ್ಟು ಪರಿಸರದಲ್ಲಿ ಬೋನ್ ಅಳವಡಿಸಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಈ ಪರಿಸರದಲ್ಲಿ ಪುನಃ ಚಿರತೆ ದಾಳಿ ಮಾಡುತ್ತಿದೆ. ಕಳೆದ ರಾತ್ರಿ ಪುಣ್ಕೆದೊಟ್ಟು ಮನೆ ಕೋಳಿ ಗೂಡುವಿಕೆ ದಾಳಿ ಮಾಡಿದೆ, ನಾಯಿ,ಬೆಕ್ಕು ಕಣ್ಮರೆಯಾಗಿದ್ದು ಇದರಿಂದ ಊರಲ್ಲಿ ಚಿರತೆಯ ಚಿಂತೆ ಹೆಚ್ಚಾಗಿ ಜನರು ರಾತ್ರಿ ಓಡಾಡಲು ಭಯಪಡುವ ಸಮಸ್ಯೆ ಸಂಭವಿಸಿದೆ.

Related posts

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್- ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ನೆರಿಯ ಪ್ರದೇಶದಲ್ಲಿ ಭಾರೀ ಮಳೆ ಸೇತುವೆ ಮತ್ತೆ ಮುಳುಗಡೆ ಆತಂಕದಲ್ಲಿ ಜನತೆ

Suddi Udaya

ಮಾ.18: ಉಜಿರೆಗೆ ನಂದಿ ರಥಯಾತ್ರೆ

Suddi Udaya

ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಕಾಂಗ್ರೆಸ್‌ ಮುಖಂಡರು

Suddi Udaya

ನಾಳೆಯಿಂದ ಧರ್ಮಸ್ಥಳದಲ್ಲಿ ಭಜನಾ ತರಬೇತಿ ಕಮ್ಮಟ: ಮಂಡ್ಯ ಜಿಲ್ಲೆಯ ಆರತಿಪುರದ ಪೂಜ್ಯ ಸಿದ್ಧಾಂತಕೀರ್ತಿ ಸ್ವಾಮೀಜಿ ಭಜನಾ ಕಮ್ಮಟ ಉದ್ಘಾಟನೆ

Suddi Udaya

ಚಂದ್ರಯಾನ-3 ಉಪಗ್ರಹ ಹೊತ್ತ ನೌಕೆ ಯಶಸ್ವಿ ಉಡಾವಣೆ

Suddi Udaya
error: Content is protected !!