ಡಿ.30: ರೂ.1.62 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪಡಂಗಡಿ ಪ್ರಾ.ಕೃ.ಪ.ಸ. ಸಂಘದ “ಸಮೃದ್ಧಿ” ಸಭಾಭವನ ಹಾಗೂ ಗೋದಾಮು ಕಟ್ಟಡ ಲೋಕಾರ್ಪಣೆ

Suddi Udaya

ಪಡಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ “ಸಮೃದ್ಧಿ” ಸಭಾಭವನ ಹಾಗೂ ಗೋದಾಮು ಕಟ್ಟಡದ ಉದ್ಘಾಟನೆ ಸಮಾರಂಭವು ಡಿ.30ರಂದು ವಿಜೃಂಭಣೆಯಿಂದ ನಡೆಯಲಿದೆ.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಅಧ್ಯಕ್ಷ ಸಹಕಾರ ರತ್ನ ಡಾ| ಎಂ.ಎನ್ ರಾಜೇಂದ್ರ ಕುಮಾರ್ ಸಭಾಭವನ ಉದ್ಘಾಟಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಗೋದಾಮು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.


ಸಮಾರಂಭದ ಅಧ್ಯಕತೆಯನ್ನು ಪಡಂಗಡಿ ಪ್ರಾಥಮಿಕ ಕೃಷಿ ಪ.ಸ. ಸಂಘದ ಅಧ್ಯಕ್ಷ ಅಂತೋನಿ ಫೆರ್ನಾಂಡಿಸ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕರುಗಳಾದ ಪ್ರತಾಪ್‌ಸಿಂಹ ನಾಯಕ್ ಹಾಗೂ ಕೆ. ಹರೀಶ್ ಕುಮಾರ್, ದ.ಕ.ಜಿ.. ಕೇ.ಸ. ಬ್ಯಾ. ನಿರ್ದೇಶಕ ಬಿ. ನಿರಂಜನ್ ಬಾವಂತಬೆಟ್ಟು, ಪಡಂಗಡಿ ಗ್ರಾ.ಪಂ ಅಧ್ಯಕ್ಷ ವಸಂತ ಪೂಜಾರಿ, ಸ. ಸಂಘಗಳ ಉಪನಿಬಂಧಕ ರಮೇಶ್, ಸ. ಸಂಘಗಳ ಸಹಾಯ ನಿಬಂಧಕಿ ಶ್ರೀ ಮತಿ ತ್ರಿವೇಣಿ ರಾವ್, ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಪ್ರತಿಮಾ, ಬದ್ಯಾರು ಚರ್ಚ್ ಧರ್ಮಗುರುಗಳು ರೆ.ಫಾ. ಮೆಲ್ವಿನ್ ಡಿ’ಸೋಜ, ಪೇರಡ್ಕ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಮಂಜಿತ್ತಾಯ, ಮೊಹಿದ್ಧಿನ್ ಜುಮ್ಮಾ ಮಸೀದಿ ಖತೀಬರು ಎ.ಆರ್ ದಾರಿಮಿ, ಪಡಂಗಡಿ ಪ್ರಾ.ಕೃ.ಪ. ಸ.ಸ ಮಾಜಿ ಅಧ್ಯಕ್ಷರಾದ ಯೋಗೀಶ್ ಕುಮಾರ್ ಕೆ. ಎಸ್ ಹಾಗೂ ಎಸ್. ಜಯರಾಮ್ ಶೆಟ್ಟಿ, ಪಡಂಗಡಿ ಗ್ರಾ. ಪಂ.ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ಜೈನ್, ಪಡಂಗಡಿ ಪ್ರಾ. ಕೃ.ಪ. ಸ.ಸ. ಮಾಜಿ ನಿರ್ದೇಶಕ ನೇಮಿರಾಜ ಶೆಟ್ಟಿ, ಹಾಲು.ಉ.ಸ. ಸ ಅಧ್ಯಕ್ಷ ಮ್ಯಾಕ್ಸಿಮ್ ಸಿಕ್ವೆರಾ ಭಾಗವಹಿಸಲಿದ್ದಾರೆ.

ಸಂಘದ ಅಭಿವೃದ್ಧಿಗೆ ರೈತರ ಸಲಹೆ ಸ್ವೀಕಾರ: ಅಂತೋನಿ ಫೆರ್ನಾಂಡೀಸ್

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಎಲ್ಲಾ ರೈತ ಬಾಂಧವರ ಸಹಕಾರದಿಂದ ಉತ್ತಮವಾಗಿ ಮುನ್ನಡೆಯುತ್ತಿರುವುದು ಸಂತೋಷದ ವಿಚಾರವಾಗಿದೆ. ಬ್ಯಾಂಕಿನ ಅಭಿವೃದ್ಧಿ ದೃಷ್ಟಿಯಿಂದ ರೈತರ ಸಲಹೆಗಳನ್ನು ಸ್ವೀಕರಿಸಲು ಸಿದ್ದರಿದ್ದೇವೆ. ನಮಗೆ ಮಹಾಸಭೆ ಮಾಡಲು ಸಭಾಭವನದ ಅವಶ್ಯಕತೆ ಇತ್ತು. ಎಲ್ಲರಿಗೂ ಕಾರ್ಯಕ್ರಮಗಳಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಸಮೃದ್ದಿ ಸಭಾ ಭವನ ನಿರ್ಮಿಸಿದ್ದು ಇದರ ಪ್ರಯೋಜನವನ್ನು ಈ ಭಾಗದ ಗ್ರಾಮಸ್ಥರು ಪಡೆಯಬೇಕಾಗಿ ವಿನಂತಿ.

ರೂ.೧.೬೨ ಕೋಟಿ ವೆಚ್ಚದಲ್ಲಿ ನೂತನ ಸಭಾಭವನ ನಿರ್ಮಾಣ
ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ ೧೬ ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು ರೈತರಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ.ಸಂಘದ ಸದಸ್ಯರ ಅವಶ್ಯಕತೆಗಳನ್ನು ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು ರೈತ ಸದಸ್ಯರಿಗೆ ಹಾಗೂ ಸಾರ್ವಜನಿಕರ ಕಾರ್ಯಕ್ರಮಗಳಿಗೆ ಸಮೃದ್ದಿ ಸಭಾ ಭವನವನ್ನು ರೂ೧.೬೨ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಮೃದ್ದಿ ಸಭಾ ಭವನಕ್ಕೆ ರೂ.೮೭.೭೦ ಲಕ್ಷ, ಗೋದಾಮು ರೂ ೭೫.೭೦ ಲಕ್ಷ ವೆಚ್ಚದಲ್ಲಿ ಸೀಮಿತ ಅವದಿಯಲ್ಲಿ ಒಂದು ವರ್ಷದೊಳಗೆ ನಿರ್ಮಾಣಗೊಂಡಿದೆ. ಸಂಘದ ಸದಸ್ಯರ ಕಾರ್ಯಕ್ರಮಗಳಿಗೆ ರಿಯಾಯಿತಿ ದರದಲ್ಲಿ ಸಭಾಭವನದ ಲಭ್ಯವಿದ್ದು ಇದರ ಪ್ರಯೋಜನ ಪಡೆಯಬಹುದಾಗಿದೆ. ಹಿರಿಯ ನಾಗರೀಕರಿಗೆ ಲಿಪ್ಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಗಾಗಲೇ ಕೆಲಸ ಕಾರ್ಯಗಳು ಪೂರ್ಣ ಹಂತದಲ್ಲಿ ಸಾಗುತ್ತಿದ್ದು ಕ್ಷೇತ್ರದ ಶಾಸಕರಾದ ಹರೀಶ್ ಪೂಂಜರವರು ಇಂಟರ್‌ಲಾಕ್ ಹಾಕಿಸುವ ಭರವಸೆ ನೀಡಿರುತ್ತಾರೆ.

ಸಂಘದ ವಿಶೇಷತೆಗಳು
ರೈತರಿಗೆ ಕೃಷಿ, ಕೃಷಿಯೇತರ ಸಾಲಗಳು, ಸ್ವಸಹಾಯ ಗುಂಪುಗಳಿಗೆ ಸಾಲ, ಗೃಹ ನಿರ್ಮಾಣ, ದುರಸ್ಥಿಗೆ ಸಾಲ, ವಾಹನ, ಆಭರಣ ಈಡಿನ ಸಾಲ, ವಿದ್ಯುತ್ ಚಾಲಿತ ಮೋಟಾರು ವಾಹನಗಳಿಗೆ ಮತ್ತು ಸೋಲಾರ್ ಅಳವಡಿಕೆಗೆ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಠೇವಣಿಗಳಿಗೆ ಆಕರ್ಷಕ ಬಡ್ಡಿ, ರಸಗೊಬ್ಬರ, ಪಶು ಆಹಾರ, ಪಡಿತರ ಮಾರಾಟ ವ್ಯವಸ್ಥೆ, ಪ್ರಸ್ತುತ ರೈತರಿಗೆ ಅನುಕೂಲವಾಗುವಂತೆ ಕೊಬ್ಬರಿ ಎಣ್ಣೆ ಮಿಲ್ಲಿನ ವ್ಯವಸ್ಥೆ ಹಾಗೂ ವ್ಯಾಪಾರ ವ್ಯವಹಾರ ಆರಂಭ

ಸಭಾಭವನದಲ್ಲಿ ವ್ಯವಸ್ಥೆಗಳು
ಸಭಾಭವನದಲ್ಲಿ 1000 ಕ್ಕಿಂತ ಹೆಚ್ಚಿನ ಆಸನದ ವ್ಯವಸ್ಥೆಯಿದ್ದು ಯಾವುದೇ ಕಾರ್ಯಕ್ರಮಗಳನ್ನು ಇಲ್ಲಿ ನಡೆಸಬಹುದಾಗಿದೆ. ಊಟದ ವ್ಯವಸ್ತೆಗೆ ಬೇಕಾದ ಅಡುಗೆ ಕೋಣೆ ರೆಡಿಯಾಗಿದೆ. ಊಟದ ಹಾಲ್, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

Leave a Comment

error: Content is protected !!