ಬಳಂಜ: ನಾಲ್ಕೂರು ಗ್ರಾಮದ ಪುಣ್ಕೆದೊಟ್ಟು ಪರಿಸರದಲ್ಲಿ ದಿನದಿಂದ ದಿನಕ್ಕೆ ಚಿರತೆ ಕಾಟ ಜಾಸ್ತಿಯಾಗಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ.ಕಳೆದ ಕೆಲವು ಸಮಯದ ಹಿಂದೆ ಬಳಂಜ, ನಿಟ್ಟಡ್ಕ, ಪುಣ್ಕೆದೊಟ್ಟು ಪರಿಸರದಲ್ಲಿ ಸಾಕು ಪ್ರಾಣಿಗಳಾದ ಗೋವು, ನಾಯಿ,ಬೆಕ್ಕು, ಕೋಳಿಗಳ ಮೇಲೆ ದಾಳಿಗಳಾಗಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಕೂಡಲೇ ಉಪವಲಯರಣ್ಯಾಧಿಕಾರಿ ತಕ್ಷಣ ಸ್ಪಂದಿಸಿ ಚಿರತೆ ಪತ್ತೆಗಾಗಿ ಪುಣ್ಕೆದೊಟ್ಟು ಪರಿಸರದಲ್ಲಿ ಬೋನ್ ಅಳವಡಿಸಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಈ ಪರಿಸರದಲ್ಲಿ ಪುನಃ ಚಿರತೆ ದಾಳಿ ಮಾಡುತ್ತಿದೆ. ಕಳೆದ ರಾತ್ರಿ ಪುಣ್ಕೆದೊಟ್ಟು ಮನೆ ಕೋಳಿ ಗೂಡುವಿಕೆ ದಾಳಿ ಮಾಡಿದೆ, ನಾಯಿ,ಬೆಕ್ಕು ಕಣ್ಮರೆಯಾಗಿದ್ದು ಇದರಿಂದ ಊರಲ್ಲಿ ಚಿರತೆಯ ಚಿಂತೆ ಹೆಚ್ಚಾಗಿ ಜನರು ರಾತ್ರಿ ಓಡಾಡಲು ಭಯಪಡುವ ಸಮಸ್ಯೆ ಸಂಭವಿಸಿದೆ.