ನಾವೂರು: ಗ್ರಾಮ ಪಂಚಾಯತ್ ನಾವೂರು ಮತ್ತು ಕೆನರಾ ಬ್ಯಾಂಕ್ ಬಂಗಾಡಿ ಸಹಯೋಗದೊಂದಿಗೆ ಗ್ರಾಮ “ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ”ವು ಡಿ.22ರಂದು ಪಂಚಾಯತ್ ವಠಾರದಲ್ಲಿ ನಡೆಯಿತು.
ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಸುನಂದ ರವರ ಅಧಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು. ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್ ಮಾತನಾಡಿ ಕೇಂದ್ರ ಸರಕಾರದಿಂದ ಸಿಗುವ ಪ್ರಧಾನ ಮಂತ್ರಿಗಳ ವಿವಿಧ ಯೋಜನೆಗಳ ಬಗ್ಗೆ ಸವಿ ವಿವರವಾಗಿ ಮಾಹಿತಿ ನೀಡಿದರು.
ಡಾ. ಮಧು ಸೂಧನ ಕೃಷಿ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಕೃಷಿಯ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ತೃಪ್ತಿ ಸಂಜೀವಿನಿ ಒಕ್ಕೂಟ ನಾವೂರು ಇವರ ವತಿಯಿಂದ ಹಳ್ಳಿ ಸಂತೆ ಉದ್ಘಾಟನಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಂದ ಮತ್ತು ಸದಸ್ಯರು ಹಾಗೂ ತೃಪ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಮತ್ತು ಸದಸ್ಯರು ಉದ್ಘಾಟನೆ ನಡೆಸಿದರು.
ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಆರೋಗ್ಯವಂತ ಅಂಗನವಾಡಿ ಮಕ್ಕಳಿಗೆ, ಮುದ್ರಾ ಯೋಜನೆಯಡಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಟೈಲರಿಂಗ್ ಸಾಧಕರಿಗೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ, ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಜೀವಿತ್ ಇವರನ್ನು ಸನ್ಮಾನಿಸಲಾಯಿತ್ತು.
ಕಿಸಾನ್ ಕ್ರೆಡಿಟ್ ಕಾರ್ಡ್ , ಆಯುಷ್ಮಾನ್ ಕಾರ್ಡ್, ಉಜ್ವಲ ಗ್ಯಾಸ್ ಗೆ ಹೊಸದಾಗಿ ಅರ್ಜಿ ಸಲ್ಲಿಸುವುದು. ಹಾಗೂ ಈ ಹಿಂದೆ ಗ್ಯಾಸ್ ಪಡೆದವರು ಎಲ್ಲರೂ ತಮ್ಮ ಬೆರಳಚ್ಚು( THUMB) ನೀಡುವುದು. ಕಿಶಾನ್ ಸನ್ಮಾನ್ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವುದು. B.P ಶುಗರ್ ಇತ್ಯಾದಿ ಆರೋಗ್ಯ ತಪಾಸಣಾ ಶಿಬಿರ, ಮಹತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಅರ್ಜಿ ಸ್ವೀಕಾರ ಕಾರ್ಯಕ್ರಮ ನಡೆಸಲಾಯಿತ್ತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮಮತ, ಸದಸ್ಯರಾದ ಗಣೇಶ್ ಗೌಡ, ಹರೀಶ್ ಸಾಲಿಯಾನ್, ಬಾಲಕೃಷ್ಣ, ವೇದಾವತಿ, ಶಾಂತಿ, ಎನ್ ಕೆ ಹಸೈನಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ ವೆಂಕಟಕೃಷ್ಣ ರಾಜ, ಕೆನರಾ ಬ್ಯಾಂಕ್ ಮೇನೆಜರ್ ಶ್ಯಾಮ್ ಕಿಶೋರ್, ತಾಲೂಕು ವಲಯ ಮೇಲ್ವಿಚಾರಕರಾದ ಜಯಾನಂದ ,ಊರಿನ ಗಣ್ಯರು, ಜನಪ್ರತಿನಿಧಿಗಳು, ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು, ಶಾಲಾ ಮಕ್ಕಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು , ಆಶಾ ಕಾರ್ಯಕರ್ತೆಯರು, ವ್ಯಾಪಾರ ವ್ಯವಹಾರಸ್ಥರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ತೃಪ್ತಿ ಸಂಜೀವಿನಿ ಒಕ್ಕೂಟ ದ ಎಂ ಬಿ ಕೆ, ಎಲ್ ಸಿ ಆರ್ ಪಿ, ಅಧ್ಯಕ್ಷರು, ಸರ್ವ ಸದಸ್ಯರು, ಊರಿನ ಗ್ರಾಮಸ್ಧರು ಉಪಸ್ಥಿತರಿದ್ದರು
ಸ.ಹಿರಿಯ ಪ್ರಾಥಮಿಕ ಶಾಲಾಭಿವೃಧ್ದಿ ಸಮಿತಿಯ ಅಧ್ಯಕ್ಷ ಸುರೇಶ್ ಕಾರ್ಯಕ್ರಮ ನಿರೂಪಿಸಿ, ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಮಮತ ಸ್ವಾಗತಿಸಿ, ಸದಸ್ಯರಾದ ಗಣೇಶ್ ಗೌಡ ಧನ್ಯವಾದವಿತ್ತರು.