ಚಾರ್ಮಾಡಿ: ವಿಶ್ವ ಹಿಂದೂ ಪರಿಷತ್ ಭಜರಂಗದಳ ಚಾರ್ಮಾಡಿ, ಘಟಕ ಶ್ರೀ ರಾಮ್ ಚಾರ್ಮಾಡಿ ಇದರ ಸಹಭಾಗಿತ್ವದಲ್ಲಿ ಹೊನಲು ಬೆಳಕಿನ ಹಿಂದೂ ಭಾಂಧವರ ತಾಲೂಕು ಮಟ್ಟದ ಹಾಗೂ ಚಾರ್ಮಾಡಿ ತೋಟತ್ತಾಡಿ ಚಿಬಿದ್ರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಸೇವಾ ಚಟುವಟಿಕೆಗಳ ಸಹಾಯಾರ್ಥ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭವು ಡಿ.24ರಂದು ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ಅಂಕಣದಲ್ಲಿ ನಡೆಯಿತು.
ಚಾರ್ಮಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಕಾಶ್ ಹೊಸಮಠ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಚಾರ್ಮಾಡಿ ವಿ.ಹೆಚ್.ಪಿ. ಅಧ್ಯಕ್ಷ ಎ. ಬಾಲಕೃಷ್ಣ ಅಡಿಮಾರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಪ್ರಖಂಡ ವಿ.ಹೆಚ್.ಪಿ. ಕಾರ್ಯದರ್ಶಿ ಮೋಹನ್ ಕುಮಾರ್, ಕೃಷಿಕ ಕೃಷ್ಣ ಭಟ್ ಕೋಡಿತ್ತಿಲು, ಚಾರ್ಮಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಜಿ. ಪಡೆಂಕಲ್ಲು, ಚಾರ್ಮಾಡಿ ವಿ.ಹೆಚ್.ಪಿ ಕಾರ್ಯದರ್ಶಿ ಯೋಗೀಶ್ ಪೊಂಗರೆದಡಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಹೆಚ್.ಪಿ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ವಹಿಸಿದ್ದರು.
ಪುತ್ತೂರು ಜಿಲ್ಲಾ ಸಂಚಾಲಕ ಭರತ್ ಕುಮ್ಡೇಲು ದಿಕ್ಸೂಚಿ ಭಾಷಣ ಮಾಡಿದರು.
ಮುಖ್ಯ ಅಥಿತಿಗಳಾಗಿ ಪುತ್ತೂರು ಜಿಲ್ಲಾ ಅಖಾಡ ಪ್ರಮುಖ್ ಗಣೇಶ್ ಕಳೆಂಜ, ವಿ.ಹೆಚ್.ಪಿ ಬಜರಂಗದಳ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ವಿ.ಹೆಚ್.ಪಿ ಬಜರಂಗದಳ ಬೆಳ್ತಂಗಡಿ ಪ್ರಖಂಡದ ಪ್ರಸಾರ/ಪ್ರಚಾರ ಪ್ರಮುಖ್ ನಾಗೇಶ್ ಕಲ್ಮಂಜ, ವಿ.ಹೆಚ್.ಪಿ ಚಾರ್ಮಾಡಿ ಅಧ್ಯಕ್ಷ ಎ. ಬಾಲಕೃಷ್ಣ ಅಡಿಮಾರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್ಯಕರ್ತರು ಹಾಗೂ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು.