38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ.27: ಗುರುವಾಯನಕೆರೆ 37 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಗುರುವಾಯನಕೆರೆ: ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ , ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಸಮಿತಿ ಆಶ್ರಯದಲ್ಲಿ ಗುರುವಾಯನಕೆರೆ ಅಯ್ಯಪ್ಪನಗರ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ವಠಾರದಲ್ಲಿ ವೇದಮೂರ್ತಿ ಶ್ರೀ ರಘುರಾಮ ಭಟ್ ಮಠ ಇವರ ಪೌರೋಹಿತ್ಯದಲ್ಲಿ 37 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಸುಕುಮಾರ ಗುರುಸ್ವಾಮಿ ಕಳೆಂಜ ಕಾಯರ್ತಡ್ಕ ಇವರ ನೇತೃತ್ವದಲ್ಲಿ ಅಯ್ಯಪ್ಪ ದೀಪೋತ್ಸವವು ಡಿ.27 ರಂದು ನಡೆಯಲಿದೆ.

ಬೆಳಗ್ಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ಆಶ್ಲೇಷ ಪೂಜೆ, ನಾಗತಂಬಿಲ, ಗಣಹೋಮ, ಸಾರ್ವಜನಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಬೆಳ್ತಂಗಡಿ ಭಗವಾನ್ ಶಿರಾಡಿ ಸತ್ಯಸಾಯಿ ಸೇವಾ ಕ್ಷೇತ್ರ ಹಳೇಕೋಟೆ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ ಮಂಡಲ ಪೂಜೆ, ತನ್ನೀರಪ್ಪ ಸೇವೆ, ದೇವಿ ದರ್ಶನ, ಕೆಂಡಸೇವೆ, ಶ್ರೀ ಅಯ್ಯಪ್ಪ ವಾವರ ಯುದ್ಧ, ಸುಬ್ರಹ್ಮಣ್ಯ ದರ್ಶನ, ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ ಗಂಟೆ 9.30 ರಿಂದ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸುಂಕದಕಟ್ಟೆ ಮೇಳದವರಿಂದ ಅಪ್ಪೆ ಮಂತ್ರದೇವತೆ ನಡೆಯಲಿದೆ ಎಂದು ದೀಪೋತ್ಸವ ಸಮಿತಿ ಅಧ್ಯಕ್ಷ ಸಂಪತ್ ಬಿ ಸುವರ್ಣ ತಿಳಿಸಿದರು.

Related posts

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಐರನ್ ರೋಡ್ರಿಗಸ್ ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಬೆಳ್ತಂಗಡಿ ಕೋಟಕ್ ಲೈಫ್ ಕಚೇರಿಯಲ್ಲಿ ನಿವೃತ್ತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್ ‍ರವರಿಗೆ ಸನ್ಮಾನ

Suddi Udaya

ತೆಕ್ಕಾರು ಬ್ರಹ್ಮಕಲಶೋತ್ಸವದಲ್ಲಿ ಶಾಸಕ ಹರೀಶ್ ಪೂಂಜರವರು ಮುಸ್ಲಿಂರನ್ನು ನಿಂದಿಸಿರುವುದು ಸಮುದಾಯಕ್ಕೆ ನೋವು ತಂದಿದೆ: ಮುಸ್ಲಿಂ ಮುಖಂಡರಿಂದ ಪತ್ರಿಕಾಗೋಷ್ಠಿ

Suddi Udaya

ನಡ : ಮಂಜೊಟ್ಟಿ ಬಿ.ಕೆ ಹರಿಪ್ರಸಾದ್ ಅನುದಾನದಲ್ಲಿ ನಿರ್ಮಾಣವಾದ ಆಟೋ ನಿಲ್ದಾಣ ಉದ್ಘಾಟನೆ

Suddi Udaya

ನಡ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya

ಬಜಿರೆ: ಚಿರತೆ ಹಾವಳಿಗೆ ಬೋನ್ ಇರಿಸಿದ ಅರಣ್ಯ ಇಲಾಖೆ

Suddi Udaya
error: Content is protected !!