23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಐಸಿವೈಎಮ್ ಘಟಕದ ಕ್ರಿಸ್ಮಸ್ ಟ್ಯಾಬ್ಲೊ


ಬೆಳ್ತಂಗಡಿ: ಯೇಸು ಕ್ರಿಸ್ತನ ಹುಟ್ಟುಹಬ್ಬದ ಸಂತೋಷವನ್ನು ಎಲ್ಲರಿಗೂ ಹರಡಲು ಒಂದು ಅರ್ಥಪೂರ್ಣ ಕಥೆಯೊಂದಿಗೆ, ಹೋಲಿ ರಿಡೀಮರ್ ಚರ್ಚ್ ಬೆಳ್ತಂಗಡಿ ಇಲ್ಲಿನ ಐಸಿವೈಎಮ್ ಘಟಕದ ಯುವಕರು ಈ ಸಲ ತಮ್ಮ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಸ್ಮಸ್ ಟ್ಯಾಬ್ಲೋ ಆಯೋಜಿಸಿತು. ಕ್ರಿಸ್ಮಸ್ ಟ್ಯಾಬ್ಲೋ ಡಿ 22 ರಂದು ಗುರುವಾಯನಕೆರೆಯಿಂದ ಲಾಯಿಲದವರೆಗೂ 5 ಕಡೆಗಳಲ್ಲಿ (ಗುರುವಾಯನಕೆರೆ ಜಂಕ್ಷನ್, ಚರ್ಚ್ ರೋಡ್, ಸಂತೆಕಟ್ಟೆ, ಬೆಳ್ತಂಗಡಿ ಬಸ್ ನಿಲ್ದಾಣ, ಲಾಯಿಲ) ಸಂಜೆ ನಡೆಯಿತು.


ಯೇಸು ಕ್ರೀಸ್ತನ ಹುಟ್ಟಿನ ಕಥೆಯನ್ನು ವರ್ಣಿಸುವ ಹಾಡು ಹಾಗು ರೂಪಕವು ಒಳಗೊಂಡು ವಿವಿಧ ಕಡೆಗಳಲ್ಲಿ ಪ್ರದರ್ಶಿಸಲಾಯಿತು. ಐಸಿವೈಎಮ್ ಸದಸ್ಯರು ಕ್ಯಾರೋಲ್‌ಗಳನ್ನು ಹಾಡಿ ನೆರೆದಿರುವ ಸರ್ವರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದಲ್ಲಿ ಎರಡು ಸಾಂಟಾ ಕ್ಲಾಸ್ ಮತ್ತು ಹೆಚ್ಚಿನಷ್ಟು 30 ಐಸಿವೈಎಮ್ ಮತ್ತು ವೈಸಿಎಸ್ ಸದಸ್ಯರು ಭಾಗವಹಿಸಿದ್ದು ಅಲ್ಲಿದ್ದ ಪ್ರತಿಯೊಬ್ಬರಿಗೂ ಚಾಕೊಲೇಟ್ ವಿತರಿಸಿದರು.
ಕಾರ್ಯಕ್ರಮ ಹೋಲಿ ರಿಡೀಮರ್ ಚರ್ಚಿನ ಪ್ರಾಧಾನ ಗುರುಗಳು ಹಾಗೂ ಐಸಿವೈಎಮ್ ಬೆಳ್ತಂಗಡಿ ಘಟಕದ ನಿರ್ದೇಶಕರಾದ ಅ.ವಂ.ಫಾ. ವೋಲ್ಟರ್ ಡಿಮೆಲ್ಲೊರವರ ಮಾರ್ಗದರ್ಶನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಬ್ರದರ್ ಸೈಮನ್, ಐಸಿವೈಎಮ್ ಬೆಳ್ತಂಗಡಿ ಘಟಕದ ಸಚೇತಕಿ ಶ್ರೀಮತಿ ಫ್ಲೇವಿಯಾ ಪಾವ್ಲ್, ವೈಸಿಎಸ್ ಬೆಳ್ತಂಗಡಿ ಘಟಕದ ಸಚೇತಕಿ ಶ್ರೀಮತಿ ರೈನಾ, ಐಸಿವೈಎಮ್ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಗ್ಲೆನ್ ಮೋನಿಸ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya

ಶಿಬಾಜೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಯುವತಿಯ ಮನೆಗೆ ಬಿಜೆಪಿ ಮಂಡಲ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಭೇಟಿ

Suddi Udaya

ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮಲವಂತಿಗೆ -ಮಿತ್ತಬಾಗಿಲು ನಲ್ಲಿ “ಸ್ವ ಸಹಾಯ ಸಂಘಗಳ” ಉದ್ಘಾಟನೆ

Suddi Udaya

ಉಜಿರೆ ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ಯೋಗ ಸಪ್ತಾಹಕ್ಕೆ ಚಾಲನೆ

Suddi Udaya

ಕುಣಿತ ಭಜನಾ ಸ್ಪರ್ಧೆ: ಉಜಿರೆ ಛತ್ರಪತಿ ಶಿವಾಜಿ ಕುಣಿತ ಭಜನಾ ಮಂಡಳಿ ಪ್ರಥಮ

Suddi Udaya
error: Content is protected !!