38.6 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭೀಷೇಕ ‘ಶ್ರೀಮುಖ ಪತ್ರಿಕೆ’ ಬಿಡುಗಡೆ

ವೇಣೂರು: ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ವೇಣೂರು ಇದರ ವತಿಯಿಂದ ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭೀಷೇಕ ಮಹೋತ್ಸವದ ‘ಶ್ರೀಮುಖ ಪತ್ರಿಕೆ’ಯ ಬಿಡುಗಡೆ ಸಮಾರಂಭ ಮೂಡುಬಿದಿರೆ ಶ್ರೀ ಜೈನಮಠದ ಪರಮಪೂಜ್ಯ ‘ಭಾರತಭೂಷಣ’ ಡಾ||ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜೀಯವರ ದಿವ್ಯ ಉಪಸ್ಥಿತಿಯಲ್ಲಿ ಡಿ.27ರಂದು ವೇಣೂರು ಶ್ರೀ ಬಾಹುಬಲಿ ಸಭಾಭವನದಲ್ಲಿ ಜರುಗಿತು.


ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿಜೀಯವರು ದೀಪ ಪ್ರಜ್ವಲಿಸಿದರು. ಶ್ರೀಮುಖ ಪತ್ರಿಕೆಯನ್ನು ಮಹಾರಾಷ್ಟ್ರ ನಾಸಿಕ್‌ನ ರವೀಂದ್ರ ಪಾಟೀಲ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಅಧ್ಯಕ್ಷತೆಯನ್ನು ಮಹಾಮಸ್ತಕಾಭೀಷೇಕ ಸಮಿತಿಯ ಕಾರ್ಯಾಧ್ಯಕ್ಷ ತಿಮ್ಮಣ್ಣರಸರಾದ ಡಾ|ಪದ್ಮಪ್ರಸಾದ ಅಜಿಲ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಹಾಮಸ್ತಕಾಭೀಷೇಕ ಸಮಿತಿ ಉಪಾಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್,
ಎಕ್ಸೆಲ್ ಪ.ಪೂ.ಕಾಲೇಜು ಗುರುವಾಯನಕೆರೆಯ ಅಧ್ಯಕ್ಷ ಬಿ. ಸುಮಂತ್ ಕುಮಾರ್ ಜೈನ್ ಭಾಗವಹಿಸಿದ್ದರು.

ಶ್ರೀ ಮತಿ ಸುಪ್ರೀಯ ಪ್ರಾಥ೯ನೆ ಬಳಿಕ ಮಹಾಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ವಿ. ಪ್ರವೀಣ ಕುಮಾರ್ ಇಂದ್ರ ಸ್ವಾಗತಿಸಿದರು. ಕೆ.ಹೇಮರಾಜ ಬೆಳ್ಳಿಬೀಡು ಮೆಲೋಡಿ, ಶ್ರೀಮತಿ ಮಧುರಾ ಅಜಿಲ ಅಳದಂಗಡಿ ಅರಮನೆ, ಶ್ರೀಮತಿ ಪ್ರಸನ್ನ ಆರ್.ಹೆಗ್ಡೆ ಪಡ್ಡಂದಡ್ಕ, ಎಂ.ಜೀವಂದರ್ ಕುಮಾರ್ ಪಡ್ಯೋಡಿಗುತ್ತು, ಯುವರಾಜ್ ಜೈನ್ ಎಕ್ಸಲೆಂಟ್ ಕಲ್ಲಬೆಟ್ಟು,, ಡಾ. ಶಾಂತಿಪ್ರಸಾದ್ ವೇಣೂರು, ಸ್ವಸ್ತಿಕ್ ಜೈನ್ ಬುಳೇಕ್ಕಾರ ಬೀಡು ಸ್ವಾಮೀಜಿ ಹಾಗೂ ಅತಿಥಿ -ಗಣ್ಯರನ್ನು ಗೌರವಿಸಿದರು.
ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯದರ್ಶಿ ಮಹಾವೀರ್ ಜೈನ್ ಮೂಡುಕೋಡಿ ಕಾರ್ಯಕ್ರಮ ನಿರೂಪಿಸಿದರು.

Related posts

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 46 ಮತದಾನ

Suddi Udaya

ವಸಂತಿ ಟಿ. ನಿಡ್ಲೆ ರವರು ಆಲ್ ಇಂಡಿಯಾ ವಿಮೆನ್ ಅಚೀವರ್-2023 ಪ್ರಶಸ್ತಿಗೆ ಆಯ್ಕೆ

Suddi Udaya

ಡಾಮರೀಕರಣ ಭಾಗ್ಯಕ್ಕಾಗಿ ಕಾಯುತ್ತಿರುವ ಬಂಗೇರಕಟ್ಟೆ- ನೆತ್ತರ ರಸ್ತೆ

Suddi Udaya

ಮದ್ದಡ್ಕ : ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿಬಿದ್ದ ಕಾರು 

Suddi Udaya

ಸಿಯೋನ್ ಆಶ್ರಮ: ಅಲ್ಕಾರ್ಗೋ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Suddi Udaya

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸಹಾಯಕ ಇಂಜಿನಿಯರ್ ಗಂಗಾಧರ ಬಳಂಜರವರಿಗೆ ಸೇವಾ ನಿವೃತ್ತಿ

Suddi Udaya
error: Content is protected !!