ನಾರಾವಿ : ಇಲ್ಲಿಯ ಮಂಚಕಲ್ಲು ಅರಸಕಟ್ಟೆ ಶ್ರೀ ಮಹಮ್ಮಾಯಿ ದೇವಿ ಗೊಂದೋಳು ಸಮಿತಿಯಿಂದ ಶ್ರೀ ಮಹಮ್ಮಾಯಿ ದೇವಿಯ ಪುನಃ ಪ್ರತಿಷ್ಠಾ ಸಾನಿಧ್ಯ ಕಲಶಾಭಿಷೇಕ ಮತ್ತು ಶ್ರೀ ಮಹಮ್ಮಾಯಿ ದೇವಿಯ ಗೊಂದೋಳು ಸೇವೆ ಶ್ರೀ ಕೊಡಮಣಿತ್ತಾಯ ದೈವದ ದೊಂಪದ ಬಲಿ ಉತ್ಸವವು ಜ.5 ರಂದು ನಾರಾವಿ ತಂತ್ರಿಗಳಾದ ಶ್ರೀ ಕೃಷ್ಣ ತಂತ್ರಿ ಪ್ರಧಾನ ಅರ್ಚಕರು ಶ್ರೀ ಸೂರ್ಯನಾರಾಯಣ ದೇವಸ್ಥಾನ ನಾರಾವಿ ಇವರ ನೇತೃತ್ವದಲ್ಲಿ ನಡೆಯಲಿದೆ.
ಜ.4 ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಶ್ರೀ ಸ್ವಸ್ತಿ ಪುಣ್ಯಾಹ ವಾಚನ, ಸಪ್ತ ಶುದ್ಧಿ, ಪ್ರಸಾದ ಶುದ್ಧಿ, ವಾಸ್ತು ಪೂಜೆ, ವಾಸ್ತುಬಲಿ, ರಾಕ್ಷೋಘ್ನ ಹೋಮ ರಾತ್ರಿ ಮಹಾಪೂಜೆ, ದಿಕ್ಷಾಲ ಬಲಿ, ಪ್ರಸಾದ ವಿತರಣೆ.
ಜ.5 ಬೆಳಿಗ್ಗೆ ಗಣಯಾಗ, ಪಂಚಮಿಶಂತಿ, ಕಲಶಾರಾಧನೆ, ಪ್ರತಿಷ್ಠಾ ಪ್ರಧಾನ ಹೋಮ, ಮಹಾಮ್ಮಾಯಿ ಅಮ್ಮನವರ ಪುನಃ ಪ್ರತಿಷ್ಠೆ, ಕಂಬಾಭಿಷೇಕ, ಪ್ರಸನ್ನ ಪೂಜೆ, ಪಂಚಾದುರ್ಗಾ ಮಂತ್ರಹೋಮ ಪ್ರಾರಂಭ, ಮಹಾಪೂಜೆ ಅನ್ನಸಂತರ್ಪಣೆ.
ರಾತ್ರಿ ಶ್ರೀ ದೇವಿಯ ಗೊಂದೋಳು ಸೇವೆ, ಶ್ರೀ ಕೊಡಮಣಿತ್ತಾಯ ದೈವ ಹಾಗೂ ಕಲ್ಲುಡ-ಕಲ್ಲರ್ಟಿ ದೈವದ ದೊಂಪದ ಬಲಿ ನಡೆಯಲಿದೆ.