September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳ ಕ್ಷೇತ್ರದಿಂದ ಅಯೋಧ್ಯೆಗೆ ಬೆಳ್ಳಿಯ ಪೂಜಾ ಪರಿಕರ ಸಮರ್ಪಣೆ

ಧರ್ಮಸ್ಥಳ: ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ನಿತ್ಯದ ಪೂಜಾ ಕಾರ್ಯಕ್ಕೆ ಅನುಕೂಲವಾಗುವಂತೆ ರಜತ ಪರಿಕರಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮುಖೇನ ಅಯೋಧ್ಯೆ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ಗೆ ಜ.15ರಂದು ಪೇಜಾವರ ಮಠದಲ್ಲಿ ಡಿ.ಹರ್ಷೇಂದ್ರ ಕುಮಾರ್ ಅವರು ಹಸ್ತಾಂತರಿಸಿದರು.

ಪೇಜಾವರ ಶ್ರೀಪಾದರು ಮಾತನಾಡಿ, ರಾಮ ದೇವರು ಮತ್ತು ರುದ್ರದೇವರಲ್ಲಿ ಇರುವ ಅನ್ನೋನ್ಯ ಭಾವನ್ನು ಶಾಸ್ತ್ರದಲ್ಲಿ ಗಮನಿಸಬಹುದಾಗಿದೆ. ಅಯೋಧ್ಯೆಯ ಶ್ರೀರಾಮ ದೇವರ ಸನ್ನಿಧಿಯಲ್ಲಿ ನಿತ್ಯ ಪೂಜೆಗೆ ಅನುಕೂಲವಾಗುವಂತೆ ಧರ್ಮಸ್ಥಳದಿಂದ ಸೇವೆಯ ರೂಪದಲ್ಲಿ ಪೂಜಾ ಪರಿಕರಗಳು ಬಂದಿವೆ. ಅದನ್ನು ಅಯೋಧ್ಯೆಗೆ ಮುಟ್ಟಿಸಲಿದ್ದೇವೆ ಎಂದು ಹಾರೈಸಿದರು.

ಡಿ.ಹರ್ಷೇಂದ್ರ ಕುಮಾರ್ ಅವರು ಮಾತನಾಡಿ, ಧರ್ಮಸ್ಥಳದ ಧರ್ಮದರ್ಶಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ತಿಳಿಸಿರುವಂತೆ ಶ್ರೀ ಕ್ಷೇತ್ರದ ವತಿಯಿಂದ ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ನಿತ್ಯ ಪೂಜೆಗೆ ಅವಶ್ಯವಿರುವ ಬೆಳ್ಳಿಯ ಪೂಜಾ ಪರಿಕರಗಳನ್ನು ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಟ್ರಸ್ಟ್‌ನ ಸದಸ್ಯರೂ ಆಗಿರುವ ಪೇಜಾವರ ಶ್ರೀಪಾದರ ಮುಖೇನ ಟ್ರಸ್ಟ್‌ಗೆ ಒಪ್ಪಿಸಿದ್ದೇವೆ. ಶ್ರೀರಾಮನ ಸನ್ನಿಧಿಯಲ್ಲಿ ನಡೆಯುವ ನಿತ್ಯ ಪೂಜೆಗೆ ಈ ಎಲ್ಲ ಪರಿಕರಗಳನ್ನು ಬಳಸಿಕೊಳ್ಳುವಂತೆ ಕೋರಿಕೊಂಡಿದ್ದೇವೆ ಎಂದು ಹೇಳಿದರು.

ವಿವಿಧ ಬಗೆಯ ಆರತಿ, ದೀಪ, ಶಂಖ, ತಂಬಿಗೆ, ಘಂಟೆ, ಹರಿವಾಣ, ದೇವರಿಗೆ ನೀರೆಯಲು ಅನುಕೂಲವಾಗುವ ಕೊಡಪಾನ ಹೀಗೆ ಹಲವು ಬೆಳ್ಳಿ ಪರಿಕರಗಳನ್ನು ಶ್ರೀ ಕ್ಷೇತ್ರದಿಂದ ಒಪ್ಪಿಸಲಾಗಿದೆ.

Related posts

ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜ ದುಬೈ ವತಿಯಿಂದ ‘ಕ್ರಿಕೆಟ್ ಸೀಸನ್–6’ ಹಾಗೂ ಪ್ರಥಮ ವರ್ಷದ ‘ತ್ರೋಬಾಲ್ ಸೀಸನ್-1’ ಕ್ರೀಡಾಕೂಟ

Suddi Udaya

ಮುಂಡಾಜೆ ಪ.ಪೂ. ಕಾಲೇಜಿನಲ್ಲಿ ಸಂಸ್ಥಾಪನಾ ದಿನಾಚರಣೆ ಮತ್ತು ನಿಪುಣ್ ಪರೀಕ್ಷೆಯ ಬಗ್ಗೆ ಕಾರ್ಯಾಗಾರ

Suddi Udaya

ಶಿಶಿಲ: ಗುಂಡಿಗಾಡು ನಿವಾಸಿ ದೇಜಮ್ಮ ನಿಧನ

Suddi Udaya

ರೂ.1.00 ಕೋಟಿ ವೆಚ್ಚದಲ್ಲಿ ಬಳಂಜ- ಸುದೆಗುಂಡಿ ಸಂಪರ್ಕ ರಸ್ತೆ ಕಾಂಕ್ರೀಟಿಕರಣ: ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ:ಬೇಡಿಕೆಗೆ ಸ್ಪಂದಿಸಿದ ಶಾಸಕರಿಗೆ ಅಭಿನಂದಿಸಿದ ಗ್ರಾಮಸ್ಥರು

Suddi Udaya

ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಬೀದಿ ನಾಯಿ ಕಡಿತದ ಮತ್ತು ರೇಬಿಸ್ ರೋಗದ ಬಗ್ಗೆ ಮಾಹಿತಿ

Suddi Udaya

ಡಾ. ರೋಹನ್ ದೀಕ್ಷಿತ್ ರೋಟರೀ ಕ್ಲಬ್ ಸದಸ್ಯರಾಗಿ ಪದಗ್ರಹಣ

Suddi Udaya
error: Content is protected !!