ಕುವೆಟ್ಟು: ಓಡಿಲ್ನಾಳ ಗ್ರಾಮದ ಶ್ರೀರಾಮ ನಗರ ಮೈರಲ್ಕೆ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಥಮ ವರ್ಷದ ವರ್ಷಾವಧಿ ಜಾತ್ರೋತ್ಸವವು ಕ್ಷೇತ್ರದ ತಂತ್ರಿಗಳಾದ ವೇ|ಮೂ| ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಡಿ.28ರಿಂದ ಜ.1ರವರೆಗೆ ನಡೆಯಲಿದೆ.
ಡಿ.28ರಂದು ಬೆಳಿಗ್ಗೆ ಹೊರೆಕಾಣಿಕೆ ಸಮರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕ ಪ್ರಸನ್ನ ಭಟ್, ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್‍ಯಾರು, ಪ್ರ. ಕಾರ್ಯದರ್ಶಿ ವಿಮಲಾಕ್ಷ ಗೌಡ ಪಡ್ಪು, ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ಎಸ್. ಶೆಟ್ಟಿ, ಯುವ ಸಮಿತಿ ಅಧ್ಯಕ್ಷ ನಿತೇಶ್ ಕುಮಾರ್, ಭಜನಾ ಸಮಿತಿ ಅಧ್ಯಕ್ಷ ಯೋಗೀಶ್ ಕೊಡಂಗೆ, ಟ್ರಸ್ಟಿಗಳಾದ ಮೋಹನ್ ಭಟ್ ಮೈರಾರು, ವಾಮನ ಮೂಲ್ಯ ಮಡಂತಿಲ, ರಾಜ್‌ಪ್ರಕಾಶ್ ಶೆಟ್ಟಿ ಪಡ್ಡೈಲು, ಚಿದಾನಂದ ಇಡ್ಯ, ಚಿನ್ನಯ್ಯ ಮೂಲ್ಯ ಪರಾರಿ, ಲಕ್ಷ್ಮಿಕಾಂತ್ ಶೆಟ್ಟಿ ಮೂಡಯಿಲ್, ಹರೀಶ್ ನಾಕ ನಾನಡಿ, ದೇವಿಪ್ರಸಾದ್ ಮೂಲೊಟ್ಟು, ಮೀನಾಕ್ಷಿ ಮೈರಳಿಕೆ, ಗುರುರಾಜ ಪೊಡುಂಬ, ವಸಂತ ಮಠ, ಗೋಪಾಲ ಬನ, ಸತೀಶ್ ಮೈರಳಿಕೆ, ಎಲ್ಲಾ ಸಮಿತಿ ಸದಸ್ಯರು, ಊರವರು ಉಪಸ್ಥಿತರಿದ್ದರು.
ಡಿ.29ರಂದು ಬೆಳಿಗ್ಗೆ ಗಣಹೋಮ, ಕಲಶಪೂಜೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಉತ್ಸವ ಕಟ್ಟೆಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಡಿ.30ರಂದು ಗಣಹೋಮ, ಶೋಡರ ಬಳಿ ಉತ್ಸವ, ಕಲಶ ಪೂಜೆ, ಕಲಶಾಭಿಚೇಕ ಉಪದೇವರಿಗೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿಪೂಜೆ, ಶ್ರೀ ಭೂತ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಡಿ.30ರಂದು ಓಡಿಲ್ನಾಳ ಸ.ಹಿ.ಪ್ರಾ. ಶಾಲೆ ಹಾಗೂ ಸ.ಹಿ.ಪ್ರಾ. ಶಾಲೆ ಕಟ್ಟದಬೈಲು ಮತ್ತು ಅಂಗನವಾಡಿ ಕೇಂದ್ರ ರೇಷ್ಮೆ ಇಲ್ಲಿಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್‍ಯಾರು ವಹಿಸಲಿದ್ದಾರೆ. ನಾವೂರು ಆರೋಗ್ಯ ಕ್ಲಿನಿಕ್‌ನ ಡಾ| ಪ್ರದೀಪ್ ನಾವೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ಶಶಿಧರ ಬಿ. ಶೆಟ್ಟಿ ನವಶಕ್ತಿ, ಶ್ರೀ ಕ್ಷೇತ್ರ ಓಡೀಲು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ನಾಳ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ ಉಪಸ್ಥಿತರಿರುವರು.
ಡಿ.31ರಂದು ಬೆಳಿಗ್ಗೆ ಗಣಹೋಮ, ದರ್ಶನ ಬಳಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಕಲಶ ಪೂಜೆ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಪೂಜೆ, ಉತ್ಸವ ಕಟ್ಟೆಪೂಜೆ ಶಯನ, ಸಂಜೆ ಕಾಪಿಕಾಡ್, ವಾಮಂಜೂರು, ಬೋಳಾರ್, ಅಭಿನಯದಲ್ಲಿ ಚಾಪರ್‍ಕ ಕಲಾವಿದರಿಂದ ಈ ವರ್ಷದ ವಿಭಿನ್ನ ಶೈಲಿಯ ನಾಟಕ ಪುದರ್ ದೀದಾಂಡ್ ಪ್ರದರ್ಶನಗೊಳ್ಳಲಿದೆ. ಜ.೧ರಂದು ಬೆಳಿಗ್ಗೆ ಗಣಹೋಮ, ಯಾತ್ರಾಹೋಮ, ಕವಾಟ ಉದ್ಘಾಟನೆ, ಸಂಜೆ ಮಹಾ ರಂಗಪೂಜೆ, ಆರಾಟ ಬಲಿ, ಆರಾಟ ಉತ್ಸವ, ಧ್ವಜಾಅವರೋಹಣ ನಡೆಯಲಿದೆ.
ಜ.2ರಂದು ಸಂಪ್ರೋಕ್ಷಣೆ ಮತ್ತು ಮಂಗಳ ಮಂತ್ರಾಕ್ಷತೆ ನಡೆಯಲಿದೆ.