28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಣಿಯೂರು: ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

ಕಣಿಯೂರು: ಶ್ರೀ ಉಮಾ ಮಹೇಶ್ವರ ದೇವಸ್ಥಾನ ಮಲೆಂಗಲ್ಲು ವಾರ್ಷಿಕ ಜಾತ್ರಾ ಮಹೋತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.
ಡಿ.31 ರಂದು ಬೆಳಿಗ್ಗೆ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು.


ಇಂದು ಬೆಳಿಗ್ಗೆ ಪ್ರಾರ್ಥನೆ, ಗಣಪತಿ ಹೋಮ, ಕಲಶಾಭಿಷೇಕ, ಉರುವಾಲು ಶ್ರೀ ಗಾನಭಾರತಿ ಸಂಗೀತ ಶಾಲಾ ಮಕ್ಕಳಿಂದ ಗಾನಸುಧಾ ಕಾರ್ಯಕ್ರಮ, ಶ್ರೀ ರಾಮ ಭಜನಾ ಮಂಡಳಿ ಎಡಪದವು ಇವರಿಂದ ಭಜನಾ ಕಾರ್ಯಕ್ರಮ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಅರ್ಚಕರಾದ ವಿಜಯಕುಮಾರ್ ಭಟ್, ಆಡಳಿತ ಮೋಕ್ತೆಸರ ಚಿದಾನಂದ ರಾವ್ ಕೊಲ್ಲಾಜೆ, ಅಧ್ಯಕ್ಷ ಸದಾನಂದ ಮೊಗರೋಡಿ, ಉಪಾಧ್ಯಕ್ಷರಾದ ಶಿವಪ್ರಸಾದ್ ಭಟ್, ಕಾರ್ಯದರ್ಶಿ ಜಿತೇಶ್ ಕುಮಾರ್ ಅಡೆಂಜ, ಜೊತೆ ಕಾರ್ಯದರ್ಶಿ ಅನುಸೂಯ ಶಂಬು ರೈ, ಕೋಶಾಧಿಕಾರಿ ರಕ್ಷಿತ್ ಶೆಟ್ಟಿ, ಸದಸ್ಯರಾದ ಚೇತನಾ ರಾಯಣ್ಣಗೌಡ, ತಿಮ್ಮಪ್ಪ ಸಾಲಿಯಾನ್, ಸಾಂತಪ್ಪ ನಾಯ್ಕ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಸಂಜೆ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮಲೆಂಗಲ್ಲು ಇವರಿಂದ ಭಜನಾ ಕಾರ್ಯಕ್ರಮ, ರಂಗಪೂಜೆ, ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಶ್ರೀ ಶಾರದಾ ಕಲಾ ಶಾಲೆ ಪದ್ಮುಂಜ ಶಾಖೆ ನೃತ್ಯಶಿಕ್ಷಕಿ ವಿದುಷಿ ಡಿಂಪಲ್ ಅನಂತಾಡಿ ಇವರ ಶಿಷ್ಯವೃಂದದಿಂದ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ಉಮಾಮಹೇಶ್ವರ ದೇವರ ಭಕ್ತಿಗೀತಾ ಧ್ವನಿಸುರುಳಿ ಬಿಡುಗಡೆ, ತೆಲಿಕೆದ ಕಲಾವಿದೆರ್ ಪದ್ಮುಂಜ ಇವರಿಂದ ಸುರೇಂದ್ರ ಕುಮಾರ್ ಅಳತ್ರಪಾದೆ ವಿರಚಿತ ತುಳು ಸಾಂಸಾರಿಕ ಹಾಸ್ಯಮಯ ನಾಟಕ ತುಂಗ-ಭದ್ರ
ನಡೆಯಲಿದೆ.

Related posts

ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ನಿರ್ದೇಶಕರಾಗಿ ರಕ್ಷಿತ್ ಶಿವರಾಂ ಆಯ್ಕೆ

Suddi Udaya

ಅಳದಂಗಡಿ ಶ್ರೀ ಸತ್ಯ ದೇವತೆ ಕಲ್ಲುರ್ಟಿ ದೇವಸ್ಥಾನಕ್ಕೆ ನಟ ವಿಜಯರಾಘವೇಂದ್ರ ಭೇಟಿ

Suddi Udaya

ಕಲ್ಲಾಜೆ ನವ ಭಾರತ್ ಗೆಳೆಯರ ಬಳಗದ ವಾರ್ಷಿಕ ಮಹಾಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ

Suddi Udaya

ಕುಂಟಾಲಪಲ್ಕೆ ಅಂಗನವಾಡಿ ಕೇಂದ್ರದಲ್ಲಿ ಪೋಲಿಯೋ ಲಸಿಕೆ ಅಭಿಯಾನ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕಕ್ಕೆರಾಜ್ಯ ಸದಸ್ಯೆಯಾಗಿ ಬರಹಗಾರ್ತಿ ಆಶಾ ಅಡೂರು, ಬೆಳ್ತಂಗಡಿ ನೇಮಕ .

Suddi Udaya

ಗಣೇಶೋತ್ಸವಕ್ಕೆಂದು ಹೋದ ವ್ಯಕ್ತಿಯಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya
error: Content is protected !!