ಜಾರಿಗೆಬೈಲು ಬದ್ರಿಯಾ ಹಿದಾಯತುಲ್ ಇಸ್ಲಾಂ ಮದರಸ ಸಮಿತಿ ಹಾಗೂ ಗಲ್ಫ್ ಸಮಿತಿ ನೇತೃತ್ವದಲ್ಲಿ; ಜ. 7 : ಪರಿಮ ಜಾರಿಗೆ ಬೈಲಿನಲ್ಲಿ ಏಕದಿನ ಮತ ಪ್ರಭಾಷಣ – ಸನ್ಮಾನ ಕಾರ್ಯಕ್ರಮ

Suddi Udaya

Updated on:

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನ್ಯಾಯತರ್ಪು ಗ್ರಾಮದ ಪರಿಮ ಜಾರಿಗೆಬೈಲು ಬದ್ರಿಯಾ ಹಿದಾಯತುಲ್ ಇಸ್ಲಾಂ ಮದರಸ ಸಮಿತಿ ಹಾಗೂ ಗಲ್ಫ್ ಸಮಿತಿ ಇದರ ವತಿಯಿಂದ ಜ .7 ರಂದು ಪರಿಮ ಮದರಸದ ವಠಾರದಲ್ಲಿ ಸಂಜೆ ಗಂಟೆ 5 ರಿಂದ ಏಕದಿನ ಮತ ಪ್ರಭಾಷಣ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು
ಸದರ್ ಮುಅಲ್ಲಿಮರಾದ ಅಬ್ದುಲ್ ಅಝೀಝ್ ಅಶ್ಯಾಪಿ ಹೇಳಿದರು.

ಅವರು ಜ. 2 ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮದ ಉದ್ಘಾಟನೆ ಮತ್ತು ದುವಾಶೀರ್ವಚನವನ್ನು ಸಮಸ್ತ ಕೇರಳ ಜಂ-ಇಯತುಲ್ ಉಲಮಾ ಕೇಂದ್ರ ಮುಶಾವರ ಇದರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಸೈಯ್ಯದ್ ಝೈನುಲ್ ಆಭಿದೀನ್ ತಂಙಳ್ ಬೆಳ್ತಂಗಡಿ ವಹಿಸಲಿದ್ದಾರೆ. ಸೈಯ್ಯದ್ ಜುನೈದ್ ಜಿಫ್ರಿ ತಂಙಳ್ ಆತೂರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಹಾಗೂ ಮುಖ್ಯ ಅತಿಥಿಗಳಾಗಿ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್,ಸಚಿವರಾದ ಜಮೀರ್ ಅಹಮದ್ ಖಾನ್, ಮಂಗಳೂರು ಖಾಝಿಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್, ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ -ಖಾಸಿಮಿ ಬಂಬ್ರಾಣ, ಉಸ್ಮಾನ್ ಫೈಝಿ ತೋಡಾರು. ವಳಚ್ಚಿಲ್ ಖತೀಬರಾದ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಆಪ್ತ ಕಾರ್ಯದರ್ಶಿಗಳಾದ ಕೆ.ಎ.ಹಿದಾಯತುಲ್ಲ, ಶಾಸಕರಾದ ಎನ್.ಎ.ಹಾರಿಶ್, ವಿಧಾನ ಪರಿಷತ್ ಶಾಸಕರಾದ ಬಿ.ಎಮ್.ಫಾರೂಕ್, ಇನಾಯತ್ ಆಲಿ,ಶಾಹುಲ್ ಹಮೀದ್ ಕೆ.ಕೆ., ಅಬ್ದುಲ್ ಅಝೀಝ್ ದಾರಿಮಿ, ಎಸ್.ಬಿ. ದಾರಿಮಿ,ಹುಸೈನ್ ದಾರಿಮಿ, ಇರ್ಷಾದ್ ದಾರಿಮಿ ಮಿತ್ತಬೈಲು, ಬಿ.ಎ.ನಝೀರ್ ಬೆಳ್ತಂಗಡಿ, ಉದ್ಯಮಿಗಳಾದ ಲತೀಫ್ ಗುರುಪುರ, ಅಬ್ದುಲ್ ಹಮೀದ್ ಸುಳ್ಯ ಭಾಗವಹಿಸಲಿದ್ದಾರೆ ಹಾಗೂ ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಯಾಕೂಬ್.ಎಸ್. ಕೊಯ್ಯರು ಹಾಗೂ 2023ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಾರ್ಮಾಡಿ ಹಸನಬ್ಬರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಅನೇಕ ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ರಶೀದ್ ಪರಿಮ, ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಪರಿಮ, ಕಾರ್ಯದರ್ಶಿಯಾದ ಅಬ್ದುಲ್ ರಹಿಮಾನ್ ಸಿಟಿ ಲ್ಯಾಂಡ್, ಸದಸ್ಯರಾದ ಉಸ್ಮಾನ್ ಮುಂಡಾಜೆ ಉಪಸ್ಥಿತರಿದ್ದರು.

Leave a Comment

error: Content is protected !!