September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬೃಹತ್ ಘಂಟೆ ಉದ್ಘಾಟನೆ; ಶಿವನ ನಾಮಸ್ಮರಣೆಯಿಂದ ಸಂಕಷ್ಟಗಳ ನಿವಾರಣೆ: ಡಾ.ಹೆಗ್ಗಡೆ

ಧರ್ಮಸ್ಥಳ: ಶಿವರಾತ್ರಿಯ ಪರಮ ಪವಿತ್ರವಾದ ದಿನದಂದು ಶಿವನ ಜಾಗರಣೆ ಮಾಡುವುದು ವಿಶೇಷ. ಸಮುದ್ರಮಥನವಾದಾಗ ಒಳ್ಳೆಯ ವಸ್ತುಗಳು ಬಂದಾಗ ಎಲ್ಲರೂ ಸ್ವೀಕರಿಸಲು ಮುಂದಿದ್ದರು. ಆದರೆ ವಿಷ ಬಂದಾಗ ಶಿವ ವಿಷವನ್ನು ಪಾನ ಮಾಡಿ ಲೋಕವನ್ನು ಕಾಪಾಡುತ್ತಾನೆ. ಇದಕ್ಕಾಗಿ ಶಿವನನ್ನು ಬಹಳ ‘ಭಕ್ತಿಯಿಂದ ಆರಾಧಿಸುತ್ತಾರೆ ಎಂದು ‘ಧರ್ಮಸ್ಥಳ ‘ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ನುಡಿದರು.


ಬೆಂಗಳೂರಿನ ಸದಾಶಿವನಗರದ ಉದ್ಯಮಿ ದಿನೇಶ್ ಹಾಗೂ ಸುನಿತಾ ದಂಪತಿಯು ಕೊಡಮಾಡಿದ ಬೃಹದಾಕಾರದ ಘಂಟೆಯನ್ನು ಧರ್ಮಸ್ಥಳ ಅಣ್ಣಪ್ಪ ಬೆಟ್ಟದ ಮುಂಭಾಗ ಸ್ಥಾಪಿಸಿರುವುದನ್ನು ಫೆ.26 ರಂದು ಉದ್ಘಾಟಿಸಿ ಆಶೀರ್ವಚನ ನೀಡಿದರು.


ಜೀವನದಲ್ಲಿ ಸುಖವಿದ್ದಾಗ ಎಲ್ಲರೂ ತಾಮುಂದು ನಾಮುಂದು ಎಂದು ನಮ್ಮೊಂದಿಗಿರುತ್ತಾರೆ. ಆದರೆ ಕಷ್ಟ ಬಂದಾಗ ಯಾರೂ ಇರುವುದಿಲ್ಲ. ಶಿವ ಜನರ ದುಃಖ, ಕಷ್ಟಗಳನ್ನು ಸ್ವೀಕರಿಸಿ ಕಾಪಾಡಿದಾತ. ಹಾಗಾಗಿ ಶಿವರಾತ್ರಿಯಂದು ನಮ್ಮ ಕಷ್ಟಗಳನ್ನೆಲ್ಲ ನೀನು ಸ್ವೀಕರಿಸಿ ಸುಖವನ್ನು ಕೊಡು ಎಂದು ಪಾದಯಾತ್ರೆಯಲ್ಲಿ ಬರುತ್ತಾರೆ. ಅವರಿಗೆಲ್ಲ ಶಿವ ಆಶೀರ್ವದಿಸುತ್ತಾನೆ ಎಂದ ಅವರು ಬೆಂಗಳೂರಿನ ಉದ್ಯಮಿ ದಿನೇಶ್ ಅವರ ಇಚ್ಛೆಯಂತೆ ಕ್ಷೇತ್ರಕ್ಕೆ ಶಿವರಾತ್ರಿಯಂದು ವಿಶೇಷ ಕೊಡುಗೆ ನೀಡಿದ್ದಾರೆ. ಅವರನ್ನು ದೇವರು ಹರಸಲಿ ಎಂದು ಆಶೀರ್ವದಿಸಿದರು.


ಘಂಟೆ ಕೊಡುಗೆ ನೀಡಿದ ಬೆಂಗಳೂರು ಸದಾಶಿವನಗರದ ಉದ್ಯಮಿ ದಿನೇಶ್ ಮಾತನಾಡಿ, ಸಣ್ಣ ವಯಸ್ಸಿನಿಂದ ನಾನು ಧರ್ಮಸ್ಥಳಕ್ಕೆ ಬರುತ್ತಿದ್ದೆ. ಧರ್ಮಸ್ಥಳಕ್ಕೆ ಏನಾದರು ಕೊಡುಗೆ ನೀಡಬೇಕೆಂಬ ನೆಲೆಯಲ್ಲಿ ಘಂಟೆ ಕೊಡುಗೆ ನೀಡಿದ್ದೇನೆ. ಎಲ್ಲ ಜನತೆಗೆ ಒಳ್ಳೆದಾಗಲಿ ಎಂಬ ನೆಲೆಯಲ್ಲಿ ಕೊಡುಗೆ ನೀಡಿದ್ದೇನೆ. ಶಿವರಾತ್ರಿಯಂದು ಉದ್ಘಾಟನೆಯಾಗಿರುವುದು ಬಹಳ ಸಂತೋಷ ನೀಡಿದೆ ಎಂದರು.

ಉದ್ಯಮಿ ಆಪ್ತರಾದ ಪ್ರಸಾದ್, ರವೀಂದ್ರ, ವಿಜಯ್ ಕುಮಾರ್, ಪತ್ನಿ ಸುನಿತಾ, ‘ಧರ್ಮಸ್ಥಳದ ಎ.ವೀರು ಶೆಟ್ಟಿ ಸಹಿತ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.

Related posts

ಸ್ಕೌಟ್ ಗೈಡ್, ಕಬ್ಸ್, ಬುಲ್ ಬುಲ್ ಸ್ಪರ್ಧೆಯಲ್ಲಿ ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya

ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡ

Suddi Udaya

ಕೃಷಿ ಕ್ಷೇತ್ರ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ವಿಶೇಷ ಸಾಧನೆ : ನಿವೃತ್ತ ಯೋಧ ಉಜಿರೆಯ ಗೋಪಾಲಕೃಷ್ಣ ಕಾಂಚೋಡು ಅವರಿಗೆ ಗೌರವ ಡಾಕ್ಟರೇಟ್ ಪದವಿ

Suddi Udaya

ಮುಂಡಾಜೆ ಕುಂಟಾಲಪಲ್ಕೆ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಆಚರಣೆ.

Suddi Udaya

ಮುಂಡಾಜೆ: ಕೊಂಬಿನಡ್ಕ ಸ.ಕಿ.ಪ್ರಾ. ಶಾಲೆ ಎಸ್‌ಡಿಎಂಸಿ ಕಮಿಟಿ ಪುನರ್ ರಚನೆ

Suddi Udaya
error: Content is protected !!