April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಮೇರಿಕಾದಲ್ಲಿ ನೆಲೆಸಿದರೂ ಭಾರತೀಯ ಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳನ್ನು ಬಳಸಿ ಗೃಹ ಪ್ರವೇಶ

ಬೆಳ್ತಂಗಡಿ; ದೂರದ ಅಮೇರಿಕಾದಲ್ಲಿ ನೆಲೆಸಿದರೂ ತಮ್ಮ ಗೃಹ ಪ್ರವೇಶ ಸಂದರ್ಭದಲ್ಲಿ ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಬಿಡದೆ ಹೊರದೇಶದಲ್ಲಿಯೂ ಕಟ್ಟುಪಾಡು ಪಾಲಿಸುವ ಮೂಲಕ ಉಜಿರೆಯ ದೀಪ್ತಿ ಕಾಂಚೋಡು ಮತ್ತು ಡಾ‌. ಶುಭಮಯಿ ಚಟರ್ಜಿ ಅವರು ಸನಾತನ ಧರ್ಮ ಸಂಸ್ಕೃತಿಯನ್ನು ಎತ್ತಿಹಿಡಿದ್ದಾರೆ‌.

ಡಿ.29 ರಂದು ಅಮೇರಿಕಾದ ಕೊಲೆರೋಡದಲ್ಲಿ ನಡೆದ ನೂತನ ಗೃಹ ಪ್ರವೇಶದ ಕಾರ್ಯಕ್ರಮ ಸಂಪೂರ್ಣವಾಗಿ ಭಾರತೀಯ ಪೂಜಾ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಇದು ಅಲ್ಲಿನ ಜನರ ಪ್ರೀತಿ ವಿಶ್ವಾಸವನ್ನೂ ಗಳಿಸಿ ಕೊಂಡದ್ದಲ್ಲದೆ ಅಭಿಮಾನ ಮೆರೆಯುವಂತೆ ಮಾಡಿತು.


ಗೃಹ ಪ್ರವೇಶದ ಸಂಪ್ರದಾಯದಂತೆ ಹಿಂದಿನ ದಿನ ವಾಸ್ತು ಹೋಮ, ಮರು ದಿನ ಗಣಪತಿ ಹವನ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ದೇವತಾ ಕಾರ್ಯಕ್ರಮಗಳು ನಡೆದವು. ಉಡುಪಿ ಪುತ್ತಿಗೆ ಮಠದ ಅಮೇರಿಕದ ಶಾಖೆಯ ಪುರೋಹಿತ ವಾದಿರಾಜ ಭಟ್ಟರು ನೇತೃತ್ವ ನೀಡಿದರು. ಈ ವೇಳೆ ಆಹ್ವಾನಿತ ವಿದೇಶಿ ಪ್ರಜೆಗಳು ಮುಖ್ಯವಾಗಿ ನಮ್ಮ ದೇಶದ ಧಾರ್ಮಿಕ ವಿಧಿ ವಿಧಾನಗಳನ್ನು ಗೌರವ ಭಾವದಿಂದ ಕಣ್ತುಂಬಿಕೊಂಡರು. ಅತಿಥ್ಯ ಸ್ವೀಕರಿಸುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ದೀಪ್ತಿ ಕಾಂಚೋಡು ಅವರು ಉಜಿರೆಯ ಮಾಜಿ ಯೋಧ ಲ. ಡಾ. ಗೋಪಾಲಕೃಷ್ಣ ಭಟ್ ಕಾಂಚೋಡು ಮತ್ತು ಸುಲೋಚನಾ ಕಾಂಚೋಡು ದಂಪತಿಯ ಪುತ್ರಿ. ಎಂಎಸ್ಸಿ ಪದವೀಧರೆಯಾಗಿರುವ ದೀಪ್ತಿ ಅವರು ಅಮೇರಿಕಾದಲ್ಲಿ ವೃತ್ತಿಯಲ್ಲಿದ್ದಾರೆ ಅವರ ಪತಿ ಡಾ.‌ಶುಭಮಯಿ ಚಟರ್ಜಿ ಅವರು ವಿಜ್ಞಾನಿಯಾಗಿ ಉದ್ಯೋಗದಲ್ಲಿದ್ದಾರೆ.

Related posts

ಬೆಳಾಲು ಪ್ರೌಢಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ

Suddi Udaya

ತಣ್ಣೀರುಪಂತ: ಎರಡು ವರ್ಷದಿಂದ ಕಾಣೆಯಾದ ವ್ಯಕ್ತಿ ಪತ್ತೆ

Suddi Udaya

ಕಲ್ಮಂಜ ನಿಡಿಗಲ್ ಮಜಲಿನಲ್ಲಿ ನಾಗದೇವರು ಹಾಗೂ ದೈವಗಳ ಪುನರ್ ಪ್ರತಿಷ್ಠೆ

Suddi Udaya

ಉಜಿರೆ ಅನುಗ್ರಹ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್ಸ್

Suddi Udaya

ಧರ್ಮಸ್ಥಳ :ಅಜಿಕುರಿ ಹೆಜ್ಜೇನು ದಾಳಿಯಿಂದ ಆಸ್ಪತ್ರೆಗೆ ದಾಖಲಾದ ಗಾಯಾಳುಗಳ ಆರೋಗ್ಯ ವಿಚಾರಿಸಿದ ರಕ್ಷಿತ್ ಶಿವರಾಂ

Suddi Udaya

ಕೊಕ್ಕಡದಲ್ಲಿ ಗಗನ್ ಪ್ರಾವಿಷನ್ ಸ್ಟೋರ್ಸ್ ಮತ್ತು ಗಗನ್ ಸ್ಟುಡಿಯೋ ಶುಭಾರಂಭ

Suddi Udaya
error: Content is protected !!