27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ನೂತನ‌ ಅಧ್ಯಕ್ಷ ರಂಜಿತ್ ಹೆಚ್.ಡಿ ಮತ್ತು ತಂಡದ ಪದಪ್ರದಾನ ಸಮಾರಂಭ

ಬೆಳ್ತಂಗಡಿ: ಪ್ರತಿಷ್ಠಿತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ 2023-24 ನೇ ಸಾಲಿನ ನೂತನ ಅಧ್ಯಕ್ಷ ರಂಜಿತ್ ಹೆಚ್.ಡಿ ಮತ್ತು ತಂಡದ ಪದಪ್ರದಾನ ಸಮಾರಂಭವು ಬೆಳ್ತಂಗಡಿ ಜೆಸಿ ಭವನದಲ್ಲಿ ಜ7 ರಂದು ನಡೆಯಿತು.

ಕಳೆದ ಸಾಲಿನ ಅಧ್ಯಕ್ಷ ಶಂಕರ್ ರಾವ್ ನೂತನ ಅಧ್ಯಕ್ಷ ರಂಜಿತ್ ಹೆಚ್.ಡಿ ಅವರಿಗೆ ಅಧಿಕಾರ ಹಸ್ತಾಂತರಿಸಿ ಮುಂದಿನ ವರ್ಷದ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಜೆಸಿಐ ಭಾರತದ ಪೂರ್ವ ರಾಷ್ಟ್ರೀಯ ನಿರ್ದೇಶಕ ಸಂಪತ್ ಬಿ ಸುವರ್ಣ, ವಲಯ ಉಪಾಧ್ಯಕ್ಷ ಶಂಕರ್ ರಾವ್, ಉಪಸ್ಥಿತರಿದ್ದರು.

ಕಳೆದ ಬಾರಿಯ ಕಾರ್ಯದರ್ಶಿ ಸುಧೀರ್ ಕೆ.ಎನ್ ನೂತನ‌ ಕಾರ್ಯದರ್ಶಿ ಅನುದೀಪ್ ಜೈನ್,ಲೇಡಿ ಜೇಸಿ ಸಂಯೋಜಕಿ ಮಮಿತಾರವರು ಶ್ರತಿ ರಂಜಿತ್ ಅವರಿಗೆ, ಜೂನಿಯರ್ ಜೆಸಿ ಅಧ್ಯಕ್ಷ ರಾಮಕೃಷ್ಣ ಶರ್ಮ ಅವರು ಸಮನ್ವಿತ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಘಟಕದ ವತಿಯಿಂದ ವಲಯ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಶಂಕರ್ ರಾವ್ ಹಾಗೂ ವಲಯಾಧ್ಯಕ್ಷ ಗಿರೀಶ್ ಎಸ್.ಪಿ ಅವರನ್ನು ಸನ್ಮಾನಿಸಲಾಯಿತು.

ಜೆಸಿಐ ಬೆಳ್ತಂಗಡಿ ಘಟಕಕ್ಕೆ ಸುಮಾರು 14 ಸದಸ್ಯರು ಸೇರ್ಪಡೆಯಾದರು.

ಪೂರ್ವಾಧ್ಯಕ್ಷ ಚಿದಾನಂದ ಇಡ್ಯ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು.ಪೂರ್ವಾಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಬಳಂಜ ನೂತನ ಅಧ್ಯಕ್ಷರನ್ನು ಸಭೆಗೆ ಪರಿಚಯಿಸಿದರು. ಅರೋಲಿನ್ ಜೆಸಿ ವಾಣಿ ಉದ್ಘೋಷಿಸಿದರು.ಶಂಕರ್ ರಾವ್ ಸ್ವಾಗತಸಿದರು, ಅತಿಥಿಗಳನ್ನು ಪ್ರೀತಮ್ ಶೆಟ್ಟಿ, ಶೈಲೇಶ್,ರಕ್ಷಿತಾ ಶೆಟ್ಟಿ,ಸುದೀರ್ ಕೆ.ಎನ್,ಆಶಾಲತಾ ಪರಿಚಯಿಸಿದರು. ಕಾರ್ಯದರ್ಶಿ ಅನುದೀಪ್ ಜೈನ್ ವಂದಿಸಿದರು.

ಘಟಕದ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಹಕರಿಸಿದರು.

Related posts

ಅಂಡಿಂಜೆ: ಅಕ್ರಮ ಮರಳು ಸಾಗಾಟ : ರೂ.7 ಸಾವಿರ ಮೌಲ್ಯದ ಮರಳು ವಶಪಡಿಸಿಕೊಂಡ ವೇಣೂರು ಪೊಲೀಸರು

Suddi Udaya

ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಹುಟ್ಟೂರ ಸಮ್ಮಾನ

Suddi Udaya

ತಣ್ಣೀರುಪಂತ ಗ್ರಾ.ಪಂ. ಪ್ರಥಮ ಸುತ್ತಿನ ಗ್ರಾಮ ಸಭೆ

Suddi Udaya

ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ವತಿಯಿಂದ ಕಾರುಣ್ಯ ಸ್ಪರ್ಶ ಯೋಜನೆಯಡಿಯಲ್ಲಿ ಸಹಾಯಧನ ಹಸ್ತಾಂತರ

Suddi Udaya

ಡಾ. ಕುಮಾರ ಹೆಗ್ಡೆ ರವರಿಗೆ ಪ್ರತಿಷ್ಠಿತ ಜೇಸಿಯ ಉದ್ಯೋಗ ರತ್ನ ಪ್ರಶಸ್ತಿ

Suddi Udaya

ಜೂ. 8: ಧರ್ಮಸ್ಥಳ ವಿದ್ಯುತ್ ನಿಲುಗಡೆ

Suddi Udaya
error: Content is protected !!