23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನೆರಿಯ: ಕಡವೆ ಬೇಟೆ ಪ್ರಕರಣ: ಆರೋಪಿಗೆ ನ್ಯಾಯಾಂಗ ಬಂಧನ

ನೆರಿಯ ಗ್ರಾಮದ ಕುಲೆನಾಡಿ ಎಂಬಲ್ಲಿ ಕಡವೆ ಬೇಟೆಯಾಡಿ ಮಾಂಸ ಮಾಡಿದ ಆರೋಪದ ಮೇಲೆ ಸ್ಥಳೀಯ ಅಶೋಕ್ ಕುಮಾರ್(59)ಎಂಬ ವ್ಯಕ್ತಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು,ಬೇಟೆಗೆ ಬಳಸಿದ ಬಂದೂಕು ಹಾಗು 5 ಕೆಜಿ ಮಾಂಸ ಹಾಗು ಬೇಟೆಗೆ ಸಂಬಂಧಿಸಿದ ಇತರ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡು ಕೇಸು ದಾಖಲಿಸಿದ್ದು ಇದರ ಪ್ರಕರಣ ಕೋರ್ಟ್ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಯ ಮನೆಯಿಂದ ನಾಲ್ಕು ಕಿಮೀ ದೂರದಲ್ಲಿರುವ ಚಾರ್ಮಾಡಿ-ಕನಪಾಡಿ ಮೀಸಲು ಅರಣ್ಯ ಪ್ರದೇಶದ ಪೆರ್ನಾಳೆ ಕೆರೆಯಿಂದ ಒಂದಿಷ್ಟು ದೂರದಲ್ಲಿ ಅಶೋಕ್ ಕುಮಾರ್ ಹಾಗೂ ಇತರರು ಕಡವೆಯನ್ನು ಬೇಟೆಯಾಡಿ ಮಾಂಸ ಮಾಡಿರುವ ಬಗ್ಗೆ ಶಂಕೆ ಇದ್ದು,ಸ್ಥಳದಲ್ಲಿ ಚರ್ಮ,ತಲೆಯ ಹಾಗೂ ಕಾಲಿನ ಭಾಗಗಳು ಮತ್ತು ಇನ್ನಿತರ ಅವಯವಗಳು ಪತ್ತೆಯಾಗಿವೆ. ಬೇಟೆಯಾಡಿದ ತಂಡದಲ್ಲಿ ಇತರರು ಇರುವ ಅನುಮಾನ ವ್ಯಕ್ತವಾಗಿದ್ದು ತನಿಖೆ ಮುಂದುವರೆದಿದೆ.

Related posts

ಕೌಟುಂಬಿಕ ಕಲಹ: ಜೀವ ಬೆದರಿಕೆ

Suddi Udaya

ಗೇರುಕಟ್ಟೆ: ಇರೋಲು ವ್ಯಾಪಾರಿ ನೇಣುಬಿಗಿದು ಆತ್ಮಹತ್ಯೆ

Suddi Udaya

ಗೋವಿಂದೂರು ರಾಜ್ಯ ಹೆದ್ದಾರಿಯಲ್ಲಿ ಜೀವ ಬಲಿ ಪಡೆಯಲು ಕಾಯುತ್ತಿದೆ ರಸ್ತೆ ಗುಂಡಿಗಳ ಸಾಲು

Suddi Udaya

ಮುಗ್ಧ ಪ್ರವಾಸಿಗರನ್ನು ಹತ್ಯೆಗೈಯ್ಯುವ ಮೂಲಕ ಉಗ್ರರು ಹೇಡಿತನವನ್ನು ಪ್ರದರ್ಶಿಸಿದ್ದಾರೆ: ಪ್ರತಾಪ್‌ಸಿಂಹ ನಾಯಕ್

Suddi Udaya

ಸ್ಪಂದನಾ ಸೇವಾ ಸಂಘದ 116ನೇ ಸೇವಾ ಯೋಜನೆಯ ಧನಸಹಾಯ ವಿತರಣೆ

Suddi Udaya

ಉಜಿರೆಯ ಪದ್ಮಶ್ರೀ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ “ಪದ್ಮಶ್ರೀ ಬೆಳಕಿನ ಶಾಪಿಂಗ್ ಉತ್ಸವ”

Suddi Udaya
error: Content is protected !!