ಬೆಳ್ತಂಗಡಿ: ಗೇರುಕಟ್ಟೆ ಪರಪ್ಪು ದರ್ಗಾ ಶರೀಫ್‌ನ ಉರೂಸ್ 2024 ಜನವರಿ 16 ರಿಂದ 20ರ ತನಕ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಫಕೀರ್ ಮುಹಿಯುದ್ದೀನ್ ದರ್ಗಾ ಶರೀಫ್‌ನ ವರ್ಷಂಪ್ರತಿ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು ಬಹು| ಶೈಖುನಾ ಖುರ್‍ರತುಸ್ಸಾದಾತ್ ಅಸ್ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್‌ರವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿರುವುದು ಹಾಗೂ ವಿಧಾನ ಸಭಾಧ್ಯಕ್ಷರಾದ ಯು. ಟಿ. ಖಾದರ್, ಹಿದಾಯತುಲ್ಲಾ ಕೆ.ಎ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಎಂದು ಪರಪ್ಪು ಮಸೀದಿ ಖತೀಬರಾದ ತಾಜುದ್ದೀನ್ ಸಖಾಫಿ ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜ.16 ರಂದು ಸಂಜೆ 5 ಗಂಟೆಗೆ ಪರಪ್ಪು ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಧ್ವಜಾರೋಹಣಗೈದು ರಾತ್ರಿ 8 ಗಂಟೆಗೆ ಪರಪ್ಪು ಮಸೀದಿ ಖತೀಬರಾದ ತಾಜುದ್ದೀನ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಸ್ಸಯ್ಯದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ದುವಾಶೀರ್ವಚನಗೈದು ಹುಸೈನ್ ಅಪ್ಪನಿ ಆಲ್ ಮುಈನಿ ಮಾರ್ನಾಡ್ ತಾಜುಲ್ ಉಲಮಾ ಅನುಸ್ಮರಣಾ ಪ್ರಭಾಷಣ ಗೈಯ್ಯಲಿದ್ದಾರೆ. ಉರೂಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಬಶೀರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜ. 17 ರಂದು ಸಹಾಯಕ ಖಾಯಿಗಳಾದ ಅಸ್ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ದುವಾಶೀರ್ವಚನಗೈದು ರಶೀದ್ ಸಆದಿ ಬೋಳಿಯಾರ್ ಮುಖ್ಯಪ್ರಭಾಷಣ ಗೈಯ್ಯಲಿದ್ದಾರೆ. ಜ.18 ರಂದು ಅಸ್ಸಯ್ಯದ್ ಉಮ್ಮರ್ ಅಸ್ಸಖಾಫ್ ತಂಙಳ್ ಮದನಿ ದುವಾಶೀರ್ವಚನಗೈದು ಡಾ.ಕೋಯ ಕಾಪ್ಪಾಡ್ ಮತ್ತು ಸಂಗಡಿಗರಿಂದ ಗ್ರ್ಯಾಂಡ್ ಇಶಲ್ ನೈಟ್ ಕಾರ್ಯಕ್ರಮ ನಡೆಯಲಿದೆ. ಜ.19 ರಂದು ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನೀಯಂ ಮಜ್ಜಿಸ್ ಕಾರ್ಯಕ್ರಮ ನಡೆಯಲಿದೆ. ಜ.20 ರಂದು ಉರೂಸ್ ಸಮಾರೋಪ ಸಮಾರಂಭವು ಅಸ್ಸಯ್ಯದ್ ಕೂರತ್ ತಂಙಳ್ ರವರ ಘನ ಅಧ್ಯಕ್ಷತೆಯಲ್ಲಿ ಸಂಜೆ ಮಗ್‌ರಿಬ್ ನಮಾಝಿನ ನಂತರ ಆಧ್ಯಾತ್ಮಿಕ ಮಜ್ಲಿಸ್ ಹಾಗೂ ಸಾಮೂಹಿಕ ಝಿಯಾರತ್ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಗಂಟೆಗೆ ನೂರುಸ್ಸಾದಾತ್ ಅಸ್ಸಯ್ಯದ್ ಅಬ್ದುರ್‍ರಹ್ಮಾನ್ ಇಂಬಿಚ್ಚಿ ಕೋಯ ತಂಙಳ್ ಬಾಯಾರ್ ದುವಾ ನೆರವೇರಿಸಿ, ಜಾರಿಗೆಬೈಲು ಮಸೀದಿಯ ಮುದರಿಸ್‌ರಾದ ಮುಹಮ್ಮದ್ ಯಾಸಿರ್ ಫಾಝಿಲ್ ಅಲ್ ಫುರ್ಖಾನಿ ಉದ್ಘಾಟಿಸಲಿದ್ದಾರೆ. ತಾಜುದ್ದೀನ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮುಸ್ತಫಾ ಸಖಾಫಿ ತೆನ್ನಲ ಮುಖ್ಯ ಪ್ರಭಾಷಣ ಗೈಯ್ಯಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜನಾಬ್ ಯು. ಟಿ. ಖಾದರ್, ಹಿದಾಯತ್ತುಲ್ಲ, ಕೆ. ಎ.. ವ ಕ್ಫ್ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಹಾಗೂ ಇನ್ನಿತರ ಹಲವಾರು ಉಲಮಾ, ಉಮರಾ ನಾಯಕರು ಭಾಗವಹಿಸಲಿದ್ದಾರೆ. ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಾಜಿ ಹಸನಬ್ಬ ಚಾರ್ಮಾಡಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಬ್ದುಲ್ಲ ಮಾದುಮೂಲೆರವರಿಗೆ ಸನ್ಮಾನ ಕಾರ್ಯಕ್ರಮವಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಬಶೀರ್, ಪ್ರಧಾನ ಕಾರ್ಯದರ್ಶಿಯಾದ ಕೆ.ಎಮ್. ಅಬ್ದುಲ್ ಕರೀಮ್ ಗೇರುಕಟ್ಟೆ, ಆಡಳಿತ ಸಮಿತಿಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಉರೂಸ್ ಸಮಿತಿಯ ಉಪಾಧ್ಯಕ್ಷರಾದ ಹಾಜಿ ಬಿ.ಕೆ. ರವೂಫ್ ಉಪಸ್ಥಿತರಿದ್ದರು.