ಲಾಯಿಲ: ಶ್ರೀ ಉಳ್ಳಾಲ್ತಿ, ಮೈಸಂದಾಯ ಹಾಗೂ ಗುಳಿಗ ದೈವಗಳ ಸಾನಿಧ್ಯ ಪಿಲಿಪಂಜರ ಕ್ಷೇತ್ರ ಇದರ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಲಾಯಿಲ: ಶ್ರೀ ಉಳ್ಳಾಲ್ತಿ, ಮೈಸಂದಾಯ ಹಾಗೂ ಗುಳಿಗ ದೈವಗಳ ಸಾನಿಧ್ಯ ಪಿಲಿಪಂಜರ ಕ್ಷೇತ್ರ ಇದರ ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ವ್ಯವಸ್ಥಾಪನ ಸಮಿತಿಯನ್ನು ರಚಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಸಂಜೀವ ಶೆಟ್ಟಿ ಕುಂಟಿನಿ ಇವರು ವಹಿಸಿಕೊಂಡರು. ನಂತರ ನಡೆದ ಚರ್ಚೆಯಲ್ಲಿ ವಾರ್ಷಿಕ ಪ್ರತಿಷ್ಠೋತ್ಸವ, ನೇಮೋತ್ಸವ ಹಾಗೂ ಮುಂದಕ್ಕೆ ಶ್ರೀ ಕ್ಷೇತ್ರದಲ್ಲಿ ಆಗುವ ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಲಾಯಿತು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಶರತ್ ಕೃಷ್ಣಪಡ್ವೆಟ್ನಾಯ ಉಜಿರೆ, ಅಧ್ಯಕ್ಷರಾಗಿ ಸುರೇಶ್ ಬರಮೇಲು ಅಯೋಧ್ಯ ನಗರ, ಪ್ರಧಾನ ಕಾರ್ಯದರ್ಶಿಗಳಾಗಿ ಸುಧಾಕರ್ ಬಿ ಎಲ್ ಅಯೋದ್ಯ ನಗರ, ಕಾರ್ಯದರ್ಶಿಗಳಾಗಿ ಪುಷ್ಪರಾಜ್ ಲಾಯಿಲ, ಕೋಶಾಧಿಕಾರಿಗಳಾಗಿ ಲಕ್ಷ್ಮಣ್ ಜಿಎಸ್ ಪಿಲಿಪಂಜರ, ಉಪಾಧ್ಯಕ್ಷರಾಗಿ ಸೀತಾರಾಮ ಹೆಗಡೆ ಆದರ್ಶ ನಗರ,
ಶ್ರೀಮತಿ ಲಕ್ಷ್ಮಿ ರವಿಕುಮಾರ್ ಪಿಲಿಪಂಜರ, ಜೊತೆ ಕಾರ್ಯದರ್ಶಿಗಳಾಗಿ ಅನಿಲ್ ಕಕ್ಕೆನ, ಜೊತೆ ಕೋಶಾಧಿಕಾರಿಗಳಾಗಿ ಶ್ರೀಮತಿ ಉಷಾ ಗೋಕುಲ್ದಾಸ್ ಕೊಯ್ಯೂರು ಕ್ರಾಸ್, ಇವರುಗಳನ್ನು ಸಮಿತಿಯ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.


ಸಮಿತಿಯ ಸದಸ್ಯರಾಗಿ ಸಂಜೀವ ಶೆಟ್ಟಿ ಕುಂಠಿನಿ, ಪ್ರಕಾಶ ಕಾಶೀಬೆಟ್ಟು, ಗಿರೀಶ್ ಡೋಂಗ್ರೆ ಲಾಯಿಲ, ಗಣೇಶ್ ಲಾಯಿಲ, ಶ್ರೀಮತಿ ಶ್ವೇತ ಲೋಹಿತ್ ಅಯೋಧ್ಯ ನಗರ, ಕುಮಾರಿ ಸುಮಿತ್ರ ಆದರ್ಶ ನಗರ, ಸಂತೋಷ ಸಾಲಿಯಾನ್ ಅರಳಿ, ಅರವಿಂದ ಶೆಟ್ಟಿ ಲಾಯಿಲ, ರಮೇಶ್ ಆರ್ ಲಾಯಿಲ, ಹರಿಕೃಷ್ಣ ಪುತ್ರ ಬೈಲು, ಶ್ರೀಮತಿ ಸತ್ಯವತಿ ಜಯರಾಮ ಓಡದಕರಿಯ, ಕೇಶವ ನಾಯ್ಕ ಪಿಲಿಪಂಜರ, ಸದಾನಂದ ಪೂಜಾರಿ ಪಿಲಿಪಂಜರ, ಕಿರಣ್ ಪೂಜಾರಿ ಪಿಲಿಪಂಜರ, ರವಿ ಜೋಗಿ ಪಿಲಿಪಂಜರ, ದೇವರಾಜ್ ಕಕ್ಕೆನಾ, ಗಂಗಾಧರ ಹೆಗಡೆ ಆದರ್ಶ ನಗರ,
ಇವರುಗಳನ್ನು ಮುಂದಿನ ಎರಡು ವರ್ಷದ ಅವಧಿಯ ವ್ಯವಸ್ಥಾಪನ ಸಮಿತಿಗೆ ಆಯ್ಕೆಮಾಡಲಾಯಿತು.
ಕಾರ್ಯದರ್ಶಿಯಾದ ಪುಷ್ಪರಾಜ್ ಲಾಯಿಲ ಸ್ವಾಗತಿಸಿ, ಗಣೇಶ್ ಲಾಯಿಲ ಧನ್ಯವಾದವಿತ್ತರು.

Leave a Comment

error: Content is protected !!