April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಪಾರೆಂಕಿ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ಜಾತ್ರೋತ್ಸವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ

ಮಡಂತ್ಯಾರು: ಇಲ್ಲಿಯ ಪಾರೆಂಕಿ ಗ್ರಾಮದ ಮಾರಿಕಾಂಬ ನಗರದ ಮಾರಿಕಾಂಬ ದೇವಿ ಸನ್ನಿಧಿಯಲ್ಲಿ ಜ. 9 ರಂದು ಜಾತ್ರೋತ್ಸವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು.

ಬೆಳಿಗ್ಗೆ ಸಾಮೂಹಿಕ ಶ್ರೀ ದೇವರ ಪ್ರಾರ್ಥನೆಯೊಂದಿಗೆ ತೋರಣ ಮುಹೂರ್ತ, ಪುಣ್ಯಹ, ಪಂಚಗವ್ಯ, ಅಷ್ಟ ದ್ರವ್ಯ, ಗಣಹೋಮ, ನವಕಲಶ ಪ್ರತಿಷ್ಠೆ, ಪ್ರಧಾನ ಹೋಮ ಮತ್ತು ಗ್ರಾಮ ದೈವಗಳಿಗೆ ತೋರಣ ಮುಹೂರ್ತ, ಸಾರಿ ಪ್ರಶ್ನೆ, ನವ ಕಳಸ ಅಭಿಷೇಕ ವಿಶೇಷ ಸರ್ವಲಂಕಾರ ಸಹಿತ ಮಹಾಪೂಜೆ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಮೂಡಾಯೂರು ಗುತ್ತಿನಿಂದ ಗ್ರಾಮದೈವ ಕೊಡಂಗೆತ್ತಾಯ ಮತ್ತು ಇತರ ಪರಿವಾರ ದೈವಗಳ ಭಂಡಾರ ಅದ್ದೂರಿ ಮೆರವಣಿಗೆಯೊಂದಿಗೆ ದೇವಿ ಸನ್ನಿಧಿಗೆ ಆಗಮಿಸಿ ಗದ್ದಿಗೆ ಪೂಜೆ ನೇಮೋತ್ಸವ ದೈವ ದೇವರುಗಳ ಭೇಟಿ ನಡೆಯಿತು. ನಂತರ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶೃತಿ ಆರ್ಟ್ಸ್ ಕಾವಲಕಟ್ಟೆ ಇವರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಿತು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆ ಸನತ್ ಕುಮಾರ್ ಪಡಿವಾಲ್ ಮತ್ತು ಕುಟುಂಬಸ್ಥರು, ಕಾರ್ಯಧ್ಯಕ್ಷರಾದ ಡಾ| ಕೆ ಎಸ್ ಬಲ್ಲಾಳ್, ಜಾತ್ರಾ ಸಮಿತಿಯ ಸದಸ್ಯರಾದ ರತ್ನಾಕರ್ ಶೆಟ್ಟಿ ಮೂಡಯೂರು, ನವೀನ್ ಪಿ ಯಾದವ್, ಲೋಕೇಶ್ ಆಚಾರ್ಯ, ಜಯಂತ್ ಶೆಟ್ಟಿ, ಕಾಂತಪ್ಪ ಗೌಡ, ಪ್ರವೀಣ್ ಕುಮಾರ್, ಸುಂದರ ಪೂಜಾರಿ, ಅರ್ಚಕರಾದ ರಮೇಶ್ ಭಟ್, ಯೋಗೀಶ್ ಹೆಗ್ಡೆ, ಜಾತ್ರಾ ಉಪ ಸಮಿತಿಯ ಸದಸ್ಯರಾದ ಗಂಗಾಧರ್ ಪೂಜಾರಿ, ಬಾಬು ಆಚಾರ್ಯ, ಸುಂದರ ಮೂಲ್ಯ, ಆನಂದ ಮೂಲ್ಯ, ಸತೀಶ್ ಮೂಲ್ಯ, ದಿನೇಶ್ ಮೂಲ್ಯ, ಮೋಹನ್ ದೊಟ ಹಾಗೂ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಉಳ್ತೂರಿನಲ್ಲಿ ಸಂಭ್ರಮದ ಈದ್ ಆಚರಣೆ

Suddi Udaya

ವಾಲಿಬಾಲ್ ಪಂದ್ಯಾಟ: ಮುಂಡಾಜೆ ಪ್ರೌಢಶಾಲಾ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಹೊಸಂಗಡಿ ವಲಯದ ಕೇಳದಪೇಟೆ ಕಾರ್ಯಕ್ಷೇತ್ರದ ವತಿಯಿಂದ ವೀಲ್ ಚಯರ್ ವಿತರಣೆ

Suddi Udaya

ದೈಹಿಕ ಶಿಕ್ಷಕ ಜೋನ್ ಕೆ ಪಿ ಸೇವಾ ನಿವೃತ್ತಿ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಬೀಳ್ಕೊಡುಗೆ ಸನ್ಮಾನ

Suddi Udaya

ಬೆಳ್ತಂಗಡಿ ಬ್ಲಾಕ್ ಸಮಿತಿಗಳಿಗೆ ಲೋಕಸಭಾ ಚುನಾವಣಾ ಪ್ರಚಾರ ಸಮಿತಿ ಉಸ್ತುವಾರಿಯಾಗಿ ಶಾಹುಲ್ ಹಮೀದ್ ಕೆ.ಕೆ. ಹಾಗೂ ಲೋಕೇಶ್ವರಿ ವಿನಯಚಂದ್ರ ನೇಮಕ

Suddi Udaya

ಗರ್ಡಾಡಿ ಶಕ್ತಿ ಕೇಂದ್ರದಲ್ಲಿ ಮೂರನೇ ಸುತ್ತಿನ ಬಿರುಸಿನ ಮತಯಾಚನೆ

Suddi Udaya
error: Content is protected !!