ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರು: ಬೃಹತ್ ಉಚಿತ ವೈದ್ಯಕೀಯ ಹೃದಯ ರೋಗ, ಕ್ಯಾನ್ಸರ್ ತಪಾಸಣೆ ಹಾಗೂ ರಕ್ತದಾನ ಶಿಬಿರ

ವೇಣೂರು : ವೇಣೂರುನಲ್ಲಿ ಬೃಹತ್ ಉಚಿತ ವೈದ್ಯಕೀಯ ಹೃದಯ ರೋಗ ಕ್ಯಾನ್ಸರ್ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿ ಇಂದಿನ ಅನಾರೋಗ್ಯಕ್ಕೆ ಆಧುನಿಕ ಜೀವನಶೈಲಿಯ ಪ್ರಮುಖ ಕಾರಣವಾಗಿದೆ ಬದಲಾದ ಜೀವನ ಶೈಲಿ ಆಹಾರದ ಪದ್ಧತಿ ಯಿಂದಾಗಿ ದಿನಕ್ಕೊಂದರಂತೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದೆ ಇಂದಿನ ದಾವಂತದ ಒತ್ತಡದ ಜೀವನ ಕ್ರಮದಿಂದಾಗಿ ಯಾರಿಗೂ ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಲು ಸಮಯವಿಲ್ಲದಂತಾಗಿದೆ ನಾವು ಮಕ್ಕಳಿಗೆ ಶಿಕ್ಷಣ ನೀಡುವಾಗ ಬಹಳ ಯೋಚನೆ ಮಾಡುತ್ತೇವೆ ನಮ್ಮ ಅರೋಗ್ಯ ಕಡೆ ನಾವು ಯೋಚನೆ ಮಾಡುವುದ್ದಿಲ್ಲ ನಾವು ಪ್ರತಿ ನಿತ್ಯ ಸೇವಿಸುವ ಆಹಾರ ಬಗ್ಗೆ ನಮಗೆ ಸ್ವಲ್ಪವು ಕಾಳಜಿ ಇಲ್ಲ ನಮ್ಮ ಮನೆಗೆ ಬೇಕಾಗುವ ತರಕಾರಿಯನ್ನು ನಾವೇ ಬೆಳೆದು ಸೇವಿಸಿ ನಮ್ಮ ಅರೋಗ್ಯ ನಾವೇ ಕಾಪಾಡಿಕೊಳಬೇಕೆಂದು ಮಾಹಿತಿ ನೀಡಿದರು.

ಕೆಎಮ್ ಸಿ ಆಸ್ಪತ್ರೆ ಆತಾವರ ಮಂಗಳೂರಿನ ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಕ್ಯಾನ್ಸರ್ ತಪಾಸಣೆ ಯನ್ನು ಪುರುಷ ರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಾಗಿ ತಪಾಸಣೆ ನಡೆಸಲಾಯಿತು. ರಕ್ತದಾನ ಶಿಬಿರ ಆಯೋಜನೆ ಮಾಡಲಾಯಿತು. ಬಹಳ ಜನರು ರಕ್ತದಾನ ಭಾಗವಹಿಸಿದರು, ಸಾಮಾನ್ಯ ರೋಗ ವಿಭಾಗ ಎಲಬು ಮತ್ತು ಕಿಲುರೋಗ ವಿಭಾಗ ಕಿವಿ ಮೂಗು ಮತ್ತು ಗಂಟಲು ವಿಭಾಗ ಕ್ಯಾನ್ಸರ್ ವಿಭಾಗ, ಕಣ್ಣಿನ ವಿಭಾಗ ಹೃದಯ ವಿಭಾಗ ವಾಗಿ ವಿಂಗಡಣೆ ಮಾಡಿ ಎಲ್ಲಾ ಜನರಿಗೆ ತಪಾಸಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜಗದೀಶ್ ನಾಯಕ್, ಸಿಎ ಬ್ಯಾಂಕಿನ ಅಧ್ಯಕ್ಷ ಸುಂದರ ಹೆಗ್ಡೆ , ಎಸ್.ಕೆ.ಡಿಆರ್ ಡಿ.ಪಿ ಟ್ರಸ್ಟ್ ಯೋಜನಾಧಿಕಾರಿ ಅಶೋಕ್, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ್ ರೈ ಮತ್ತು ಜಗದೀಶ್ ನಾಯಕ್ ಪೂರ್ಣಚಂದ್ರ ಸೇವಾ ಪ್ರತಿಷ್ಠಾಪನ ಅಧ್ಯಕ್ಷರು ಮರಳಿಧರ್ ಪ್ರಭು ಬಂಟರ, ಗ್ರಾಮ ಸಮಿತಿ ಅಧ್ಯಕ್ಷರು ರವಿಚಂದ್ರ ಶೆಟ್ಟಿ ಮತ್ತು ಮಂಜುನಾಥೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ದಿನೇಶ್ ಶೆಟ್ಟಿ ಕ್ರಿಸ್ತ ದೇವಾಲಯ ಭಾರತೀಯ ಕ್ಯಾಥೋಲಿಕ್ ಯುವಕ ಸಂಚಾಲನ ವೇಣೂರು ಘಟಕದ ಅಧ್ಯಕ್ಷ ಅರುಣ ಮತ್ತು ಜಸ್ವಿನ್ ಲೋಬೊ ವಲಯದ ಮೇಲ್ವಿಚಾರಕಿ ಶ್ರೀಮತಿ ಶಾಲಿನಿ , ಒಕ್ಕೂಟದ ಅಧ್ಯಕ್ಷರುಗಳಾದ ವಿನ್ಸೆಂಟ್ ವಿಲಿಯಂ ರೇಗು ಮತ್ತು ಪ್ರವೀಣ್ ನಾಯಕ್, ಸೇವಾ ಪ್ರತಿನಿಧಿಯಾದ ಶೋಭಾ ಉಪಸ್ಥಿತರಿದ್ದರು. ರಮೇಶ್ ನಾಯಕ್ ಸ್ವಾಗತಿಸಿದರು.

Related posts

ಕುವೆಟ್ಟು :ಪಯ್ಯೋಟ್ಟು ನಿವಾಸಿ ಡೀಕಯ್ಯ ಮೂಲ್ಯ ನಿಧನ

Suddi Udaya

ಧರ್ಮಸ್ಥಳ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ

Suddi Udaya

ಗುಂಡೂರಿ: ಮಂಜಪ್ಪ ದೇವಾಡಿಗರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಕಜಕೆ, ಎಳನೀರು , ಕಕ್ಕಿಂಜೆ ಶಾಲಾ ಮತಗಟ್ಟೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಭೇಟಿ

Suddi Udaya

ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಏಕತಾ ದಿನ ಆಚರಣೆ

Suddi Udaya

ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ಗರ್ಡಾಡಿ ಮಿತ್ತೊಟ್ಟು – ಪಾರ ರಸ್ತೆಯ ಕಾಂಕ್ರಿಟೀಕರಣ ರಸ್ತೆ ನಿರ್ಮಾಣ

Suddi Udaya
error: Content is protected !!