24.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಜ.12: ಬಳಂಜ ಬದಿನಡೆಯಲ್ಲಿ ಅಯ್ಯಪ್ಪ ಪೂಜೆ, ಇರುಮುಡಿ ಕಟ್ಟುವ ಕಾರ್ಯಕ್ರಮ

ಬಳಂಜ: ಬಳಂಜ ಬದಿನಡೆ ಶ್ರೀ ಶಾಸ್ತಾರ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹಾಗೂ ಅಯ್ಯಪ್ಪ ಭಕ್ತ ವೃಂದ ಬಳಂಜ ಬದಿನಡೆ ಇದರ ವತಿಯಿಂದ ಜ.12 ರಂದು ಕ್ಷೇತ್ರದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ಗುರುಸ್ವಾಮಿಗಳ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ವೃತಧಾರಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ಮತ್ತು ಅಯ್ಯಪ್ಪ ಪೂಜೆಯು ಬದಿನಡೆ ಕ್ಷೇತ್ರದಲ್ಲಿ ನಡೆಯಲಿದೆ.

ಹಲವು ವರ್ಷಗಳಿಂದ ಇಲ್ಲಿಂದ ಭಕ್ತರು ಶಬರಿಮಲೆ ಯಾತ್ರೆಯನ್ನು ಮಾಡುತ್ತಿದ್ದು ಸುಂದರವಾದ ಶಿಲಾಮಯ ಅಯ್ಯಪ್ಪ ಸ್ವಾಮಿಯ ದೇಗುಲವಿದ್ದು ಹತ್ತಿರದಲ್ಲಿ ಫಲ್ಗುಣಿ ನದಿ ಹರಿಯುತ್ತಿದೆ.


ಮಾಲಾಧಾರಿಗಳಾದ ಸದಾನಂದ ಸಾಲಿಯಾನ್, ಸತೀಶ್ ಬಿಕೆ, ವಿಜಯ ಹೆಗ್ಡೆ, ಪ್ರವೀಣ್ ಕುಮಾರ್ ಲಾಂತ್ಯಾರ್, ಚಂದ್ರಶೇಖರ್ ಪಿಟ್ಟರ್, ದರಣೇಂದ್ರ ಜೈನ್, ಜಯ ಶೆಟ್ಟಿ ನಾಲ್ಕೂರು ಸೇರಿದಂತೆ 15 ಮಂದಿ ಅಯ್ಯಪ್ಪ ಭಕ್ತರು ಮಾಲೆ ಹಾಕಿದ್ದು ಮಕರ ಜ್ಯೋತಿಯ ಪುಣ್ಯ ಕಾಲದಲ್ಲಿ ಶಬರಿಮಲೆ ಯಾತ್ರೆ ಮಾಡಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲಿದ್ದಾರೆ.

Related posts

ಬೆಳ್ತಂಗಡಿ : ಹುಣ್ಸೆಕಟ್ಟೆ ಕಾರ್ಯಕ್ಷೇತ್ರದ “ನಂದಗೋಕುಲ” ಸ್ವ-ಸಹಾಯ ಸಂಘದ ರಚನೆ

Suddi Udaya

ಆದಿದ್ರಾವಿಡ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ

Suddi Udaya

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನಡ ಮತದಾನ ಕೇಂದ್ರದಲ್ಲಿ ಮತದಾನ

Suddi Udaya

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಅರ್ಚಕ ಚಂದ್ರಶೇಖರ್ ಭಟ್ ನಿಧನ

Suddi Udaya

ಸವಣಾಲು ಅ.ಹಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ; ಪ್ರತಿಭಾ ಪುರಸ್ಕಾರ

Suddi Udaya

ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya
error: Content is protected !!