ಮಡಂತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೂಸಿನ ಮನೆ ಶಿಶುಪಾಲನಾ ಕೇಂದ್ರದ ಉದ್ಘಾಟನಾ ಸಮಾರಂಭ ನಡೆಯಿತು. ಮಡಂತ್ಯಾರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ರೂಪಾ ಎ.ಎಸ್ ಕೂಸಿನ ಮನೆಯನ್ನು ಉದ್ಘಾಟಿಸಿದರು.


ಕಾರ್ಯಕ್ರಮದಲ್ಲಿ ಗ್ರಾ.ಪಂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಪ್ರಕಾಶ್ ಎಸ್, ಸದಸ್ಯರಾದ ವಿಶ್ವನಾಥ ಪೂಜಾರಿ, ಕಿಶೋರ್ ಕುಮಾರ್ ಶೆಟ್ಟಿ , ರಾಜೀವ್ , ಹರಿಪ್ರಸಾದ್ ಶೆಟ್ಟಿ, ಶಶಿ ಪ್ರಭಾ, ಸಂಗೀತ ಶೆಟ್ಟಿ, ಆಗ್ನೆಸ್ ಮೊನಿಸ್, ಶ್ರೀಮತಿ ಶೀಲಾವತಿ ಕಾರ್ಯದರ್ಶಿಯವರಾದ ಶ್ರೀಮತಿ ಮೋರ್ಲಿನ್ ಕ್ರಿಸ್ತಿನ್ ಡಿಸೋಜ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಿಶುಪಾಲನ ಕೇಂದ್ರದ ಕೇರ್ ಟೇಕರ್ ರವರಾದ ಜ್ಯೋತಿ ಮತ್ತು ತಾರಾ ಉಪಸ್ಥಿತರಿದ್ದರು.
