25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು ಕುಂಭಶ್ರೀ ಶಾಲೆಯಲ್ಲಿ ಮಾತಾ-ಪಿತಾ-ಗುರುದೇವೋಭವ ಕಾರ್ಯಕ್ರಮ


ವೇಣೂರು: ಪಾಲಕರಾಗಿ ಒಂದು ಮಗುವನ್ನು ಸರಿಯಾದ ಮೌಲ್ಯಗಳೊಂದಿಗೆ ಬೆಳೆಸುವುದು ಸವಾಲಿನ ಕೆಲಸವೇ ಸರಿ. ಮಕ್ಕಳಿಗೆ ಊಟ, ಬಟ್ಟೆ ಕೊಟ್ಟು ಪೋಷಣೆ ಮಾಡುವುದೇ ಬೇರೆ, ಅವರಿಗೆ ಜೀವನದ ಪಾಠಗಳನ್ನು ಹೇಳುತ್ತಾ, ಮೌಲ್ಯಗಳನ್ನು ಕಲಿಸುತ್ತಾ, ಕಲಿಕೆಯಲ್ಲಿ ಸಹಕರಿಸುತ್ತ ಬೆಳೆಸುವುದೇ ಬೇರೆ. ಆದರೆ ಈ ಬ್ಯುಸಿ ಲೈಫ್‌ನಲ್ಲಿ ಪೋಷಕರು ಇವುಗಳ ಬಗ್ಗೆ ಎಲ್ಲಾ ಹೆಚ್ಚು ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಮಕ್ಕಳೊಂದಿಗೆ ಪೋಷಕರು ಹೆಚ್ಚೆಚ್ಚು ಬೆರೆಯದೇ ಇದ್ದಾಗ ಮಗು ಮತ್ತು ತಂದೆ-ತಾಯಿ ನಡುವೆ ಅಂತರ ಉಂಟಾಗಬಹುದು. ಪೋಷಕರು ಹಾಗೂ ಮಕ್ಕಳೊಂದಿಗೆ ಇಂತಹ ಭಾಂದವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಮಾತಾ-ಪಿತಾ-ಗುರುದೇವೋಭವ ಅನ್ನುವ ಹೃದಯಸ್ಪರ್ಶಿಯ ಭಾವನಾತ್ಮಕ ಕಾರ್ಯಕ್ರಮಕ್ಕೆ ಜ. 6 ರಂದು ವೇಣೂರು ಕುಂಭಶ್ರೀ ಶಾಲೆ ಸಾಕ್ಷಿಯಾಯಿತು.

ಪ್ರತೀ ಬಾರಿಯಂತೆ ಈ ಬಾರಿಯೂ ಕೂಡಾ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಒಂದು ಭಾವನಾತ್ಮಕ ಕಾರ್ಯಕ್ರಮವಾಗಿ ಮೂಡಿಬಂತು.
ಕಾರ್ಯಕ್ರಮದಲ್ಲಿ ಕಾರ್ಪೋರೇಶನ್ ಬ್ಯಾಂಕಿನ ನಿವೃತ್ತ ಅಧಿಕಾರಿ ದಿನೇಶ್ ದಾಮೋದರ್ ಗೋಖಲೆ ಶಾಲೆಗೆ ಕೊಡುಗೆಯಾಗಿ ನೀಡಿದ ನೂತನ ಕೊಠಡಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಶಿಕ್ಷಣ ಅನ್ನುವುದು ಕೇವಲ ಅಂಕ ಪಡೆಯುವುದಲ್ಲ. ನಿತ್ಯ ಜೀವನಕ್ಕೆ ಬೇಕಾಗುವ ಗುಣ-ನಡತೆ, ಸಂಸ್ಕಾರವನ್ನು ಮಕ್ಕಳಲ್ಲಿ ಮೈಗೂಡಿಸುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು. ಇಂತಹ ಸಂಸ್ಕಾರ ಕಲಿಸುವ ಕುಂಭಶ್ರೀ ಸಂಸ್ಥೆಯ ಬೋಧಕ ವೃಂದ ಜ್ಞಾನದ ಬೆಳವಣಿಗೆಯ ಜತೆ ಸರ್ವಸ್ವವನ್ನು ಮಕ್ಕಳಿಗೆ ಧಾರೆಯೆರೆದಿದ್ದಾರೆ ಎಂದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕುಂಭಶ್ರೀ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಗಿರೀಶ್ ಕೆ.ಎಚ್. ಅವರು ಮಾತನಾಡಿ, ದಾನಿಗಳ ಸಹಕಾರದಿಂದ ಕುಂಭಶ್ರೀ ಶಾಲೆಯ ಬೆಳವಣಿಗೆ ಕಂಡಿದೆ. ಶಾಲೆ ಇಂದು ಜಿಲ್ಲೆ, ರಾಜ್ಯದಲ್ಲಿ ಗುರುತಿಸಿಕೊಳ್ಳಲು ಇಲ್ಲಿಯ ಶಿಕ್ಷಕ ವೃಂದವೇ ಕಾರಣ ಎಂದರು.


ಮಂಗಳೂರು ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್ ಅವರು ಮಾತಾ-ಪಿತಾ-ಗುರುದೇವೋಭವ ಅನ್ನುವ ಹೃದಯಸ್ಪರ್ಶಿ ಕಾರ್ಯಕ್ರಮದ ದೀಪ ಬೆಳಗಿಸಿ, ಸರ್ವ ಧರ್ಮೀಯರ ಮಕ್ಕಳನ್ನು ಒಂದೇ ಭಾವನೆಯಲ್ಲಿ ಕಾಣುವ ಸಂಸ್ಥೆ ಕುಂಭಶ್ರೀ ಆಗಿದೆ. ಆಂಗ್ಲ ಶಿಕ್ಷಣದ ಜತೆಗೆ ಗುರುಕುಲ ಪದ್ದತಿಯ ವ್ಯವಸ್ಥೆಯ ಮೂಲಕ ಭಾರತೀಯ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸುವ ಈ ಶಿಕ್ಷಣ ಸಂಸ್ಥೆ ಇನ್ನಷ್ಟು ಬೆಳಗಲಿ ಎಂದರು.


ಮಡಂತ್ಯಾರು ಸೆಕ್ರೆಟ್ ಹಾರ್ಟ್ ಪ್ರಥಮದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜೋಸೆಫ್ ಎನ್.ಎಂ., ಬೆಳ್ತಂಗಡಿ ಅಗ್ನಿಶಾಮಕ ದಳದ ಅಧಿಕಾರಿ ಉಸ್ಮಾನ್ ಗರ್ಡಾಡಿ, ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಿತ್ ಕುಲಾಲ್, ಸಂಸ್ಥೆಯ ಹಿರಿಯ ವಿದ್ಯಾರ್ಥಿ ಪೂಜಿತ್ ಕುಲಾಲ್, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಜಯಂತಿ, ಪ್ರೌಢಶಾಲೆ ವಿಭಾಗದ ಮುಖ್ಯ ಶಿಕ್ಷಕಿ ಉಷಾ ಜಿ., ಪ್ರಾಂಶುಪಾಲರಾದ ಓಮನಾ, ಪೂರ್ವಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಶೋಭಾ ಎಲ್.ಎನ್. ರಾವ್, ಕಿ.ಪ್ರಾ ವಿಭಾಗದ ಮುಖ್ಯ ಶಿಕ್ಷಕಿ ಪವಿತ್ರಾ ಕುಮಾರಿ ಎಸ್., ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಾಲಪ್ಪ ಎಸ್. ಖೋತ್ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ವೃಂದ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಸಹಕರಿಸಿದರು.

ಸಮ್ಮಾನ: ಶಾಲೆಗೆ ಕೊಠಡಿ ಕೊಡುಗೆ ನೀಡಿದ ದಾನಿ ದಿನೇಶ್ ದಾಮೋದರ್ ಗೋಖಲೆ, ಹರೀಶ್ ಕುಮಾರ್ ಪೊಕ್ಕಿ, ರಮೇಶ್ ಭಟ್ ಕೊಂಕಣಾಜೆ, ಗುರುಪ್ರಸಾದ್ ಕಕ್ಯಪದವು, ಜಗದೀಶ್ ದೇವಾಡಿಗ ವೇಣೂರು , ಅಕ್ಷತಾ ಹಿರಿಯ ಪ್ರಾಥಮಿಕ ಮುಖ್ಯೋಪಾಧ್ಯಾಯನಿ, ಶ್ರೀಮತಿ ಪ್ರಮೀಳಾ , ಶ್ರೀಮತಿ ಪವಿತ್ರ ಕಿರಿಯ ಪ್ರಾಥಮಿಕ ಮುಖ್ಯೋಪಾಧ್ಯಾಯನಿ ಹಾಗೂ ಹಳೆ ವಿದ್ಯಾರ್ಥಿಗಳಾದ ಜಿತೇಶ್ ಗುಂಡೂರಿ, ಸ್ವಾತಿ ಗೊಳಿಯಂಗಡಿ, ಶ್ರೀತೇಶ್ ವೇಣೂರು, ಪವನ್ ಕುಮಾರ್ ನಿಟ್ಟಡೆ, ಶ್ರೀಪ್ತಿ ಹಾಸನ್, ಪ್ರಜ್ವಲ್ ಪೂಜಾರಿ ವೇಣೂರು ಅವರನ್ನು ಸಮ್ಮಾನಿಸಲಾಯಿತು. ಹಾಗೂ ಸಂಸ್ಥೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.


ಉಪನ್ಯಾಸಕ ವಿನಯ್ ಹಾಗೂ ಹಿ.ಪ್ರಾ. ವಿಭಾಗದ ಮುಖ್ಯಶಿಕ್ಷಕಿ ಶ್ರೀಮತಿ ಅಕ್ಷತಾ, ಶಿಕ್ಷಕಿ ವೀಣಾ ನಿರೂಪಿಸಿದರು. ಶಿಕ್ಷಕ ಮಧು ವಂದಿಸಿದರು.

Related posts

ದಾಮೋದರ ಶೆಟ್ಟಿಅನಾರೋಗ್ಯದಿಂದ ನಿಧನ

Suddi Udaya

ಬಳಂಜ ಶ್ರೀ ಶಾಸ್ತಾರ ನಾಗಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಬಳಂಜ: ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರೀಶ್ ವೈ ಆಯ್ಕೆ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ಮಹಿಳಾಮೋರ್ಚಾದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ನಡ ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಬಗ್ಗೆ ಸಮಾಲೋಚನ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ತಂದೆಯಂದಿರ ದಿನಾಚರಣೆ

Suddi Udaya
error: Content is protected !!