32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಲ್ ಬದ್ರಿಯ್ಯೀನ್ ಫ್ಯಾಮಿಲಿ ಗ್ರೂಪ್; ಅಧ್ಯಕ್ಷರಾಗಿ ಅಶ್ರಫ್ ಆಲಿಕುಂಞಿ ಪುನರಾಯ್ಕೆ

ಬೆಳ್ತಂಗಡಿ: 2017 ರಲ್ಲಿ ಆರಂಭಗೊಂಡು ಹಲವಾರು ಸೇವಾ ಚಟುವಟಿಕೆಗಳ ಮೂಲಕ ಯಶಸ್ವಿಯಾಗಿ ಮುನ್ನಡೆಯುತ್ತಿರುವ ‘ಅಲ್ ಬದ್ರಿಯ್ಯೀನ್ ಫ್ಯಾಮಿಲಿ ಗ್ರೂಪ್’ ಸಂಘಟನೆ ಇದರ 2024 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವಿರೋಧವಾಗಿ ಪುನರಾಯ್ಕೆಗೊಂಡಿರುತ್ತಾರೆ.

ಉಪಾಧ್ಯಕ್ಷರಾಗಿ ಹಬೀಬ್ ಸಿ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಮುಸ್ಲಿಯಾರ್ ನೆರಿಯ, ಜತೆ ಕಾರ್ಯದರ್ಶಿಯಾಗಿ ಮನ್ಸೂರ್ ದರ್ಖಾಸ್ ಮತ್ತು ಕೋಶಾಧಿಕಾರಿಯಾಗಿ ಅಬೂಬಕ್ಕರ್ ಪಂಪು ಇವರು ಆಯ್ಕೆಯಾದರು.
ಉಳಿದಂತೆ 8 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದ್ದು, ನಾಸಿರ್ ಕಲ್ಲಗುಡ್ಡೆ, ರಶೀದ್ ಕಲ್ಲಗುಡ್ಡೆ, ರಫೀಕ್ ಮದನಿ, ಸಲೀಂ ಗಾಂಧಿನಗರ, ಝಕರಿಯಾ ದರ್ಖಾಸ್, ಸ್ವದಕತುಲ್ಲಾ ದಾರಿಮಿ, ಕೆರೀಂ ಬೆಳಾಲು ಮತ್ತು ಯಹ್ಯಾ ಗಾಂಧಿನಗರ ಇವರು ಸ್ಥಾನ‌ ಪಡೆದುಕೊಂಡರು.
ಸಂಘಟನೆಯ 6 ನೇ ಮಹಾಸಭೆಯು ಕಕ್ಕಿಂಜೆ ದರ್ಖಾಸ್ ನಲ್ಲಿ ನಡೆಯಿತು. ಸೂರಲ್ಪಾಡಿ ಮಸ್ಜಿದ್ ಪ್ರಧಾನ ಧರ್ಮಗುರು ಮುರ್ಷಿದ್ ಫೈಝಿ ಉಪನ್ಯಾಸ ನಡೆಸಿಕೊಟ್ಟರು. ನಾಸಿರ್ ಕಲ್ಲಗುಡ್ಡೆ, ರಫೀಕ್ ಮದನಿ ಕಾರ್ಯಕ್ರಮ‌ ನಿರೂಪಿಸಿದರು. ಹಬೀಬ್ ಸಿ ವರದಿ ಮತ್ತು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಗೌರವ ಸಲಹೆಗಾರ ಅಬ್ದುಲ್ಲ ಗಾಂಧಿನಗರ, ಅಬ್ದುಲ್ ರಹಿಮಾನ್ ಮಂತ್ರಬೈಲು, ಸಿ ಮುಹಮ್ಮದ್, ಮೋಣುಚ್ಚ ಕಲ್ಲಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ: ಸ್ಕೂಟಿ- ಬೈಕ್ ಮುಖಾಮುಖಿ ಡಿಕ್ಕಿ,ಸವಾರರಿಬ್ಬರಿಗೆ ಗಂಭೀರ ಗಾಯ,ಆಸ್ಪತ್ರೆಗೆ ದಾಖಲು

Suddi Udaya

ಧರ್ಮಸ್ಥಳ ಭಜನಾ ಪರಿಷತ್ ಪದಾಧಿಕಾರಿಗಳ ವಾರ್ಷಿಕ ಸಭೆ

Suddi Udaya

ಸಾವ್ಯ: ನೂಜಿಲೋಡಿಯಲ್ಲಿ ಮನೆಗೆ ನುಗ್ಗಿದ್ದ ಕಳ್ಳರು: ರೂ.2.15ಲಕ್ಷ ಮೌಲ್ಯದ ಸೊತ್ತುಗಳ ಕಳವು

Suddi Udaya

ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ರವರ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿ ಬಳಗದಿಂದ ಮಂಗಳೂರು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

Suddi Udaya

ಅನಾರು ಸ.ಉ.ಹಿ. ಪ್ರಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಗರ್ಡಾಡಿ ವಲಯದ ಮಹಿಳಾ ಜ್ಞಾನವಿಕಾಸದ ವಾರ್ಷಿಕೋತ್ಸವ

Suddi Udaya
error: Content is protected !!