April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್.ಕೆ.ಎಸ್.ಎಸ್.ಎಫ್ ಗುರುವಾಯನಕೆರೆ ಕ್ಲಸ್ಟರ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

ಬೆಳ್ತಂಗಡಿ : ಎಸ್.ಕೆ.ಎಸ್.ಎಸ್.ಎಫ್ ಗುರುವಾಯನಕೆರೆ ಕ್ಲಸ್ಟರ್ ಇದರ ವತಿಯಿಂದ ಹಿದಾಯತುಲ್ ಇಸ್ಲಾಮ್ ಸೆಕೆಂಡರಿ ಮದರಸ ಪೇರಲ್ದಕಟ್ಟೆಯಲ್ಲಿ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಕಾರ್ಯಕ್ರಮ ಜ. 10 ರಂದು ನಡೆಯಿತು.

ಪೇರಲ್ದಕಟ್ಟೆ ಜುಮಾ ಮಸೀದಿಯ ಖತೀಬರಾದ ಶಂಶುದ್ದೀನ್ ದಾರಿಮಿಯವರು ದುಆಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮತ್ತು ನೂತನ ಸಮಿತಿಯ ರಚನೆಯ ಬಗ್ಗೆ ಮಾಹಿತಿ ನೀಡಿದರು. ಸುಲೈಮಾನ್ ಕಟ್ಟೆ ವಾರ್ಷಿಕ ವರದಿ ವಾಚಿಸಿದರು. ವಾರ್ಷಿಕ ವರದಿಗೆ ಮನ್ನಣೆ ಪಡೆದ ನಂತರ ನೂತನ ಸಮಿತಿಯ ರಚನೆಯು ಸಮಿತಿಯ ತಾಲೂಕು ವೀಕ್ಷಕರಾದ ಅಬುಬಕ್ಕರ್ ನಿಜಾಮಿ ಮತ್ತು ಯಾಸೀರ್ ಚಿಬಿದ್ರೆಯವರ ಸಮ್ಮುಖದಲ್ಲಿ ನಡೆಯಿತು.

ಗುರುವಾಯನಕೆರೆ ಕ್ಲಸ್ಟರಿನ ನೂತನ ಅಧ್ಯಕ್ಷರಾಗಿ ಎರಡನೇ ಬಾರಿ ಇಸುಬು ಪೂಂಜಿಲ್ಲಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ಕಟ್ಟೆ ಅದೇ ರೀತಿಯಾಗಿ ಕೋಶಾಧಿಕಾರಿಯಾಗಿ ಸಿರಾಜ್ ಚಿಲಿಂಬಿ ಯವರು ಆಯ್ಕೆಯಾದರು.

ವರ್ಕಿಂಗ್ ಕಾರ್ಯದರ್ಶಿಯಾಗಿ ಅಲ್ತಾಫ್ ಕಟ್ಟೆ, ಉಪವರ್ಕಿಂಗ್ ಕಾರ್ಯದರ್ಶಿಯಾಗಿ ಸಮೀರ್ ಕನ್ನಡಿಕಟ್ಟೆ,
ಮನ್ಸೂರ್ ಕಟ್ಟೆ, ಕಾರ್ಯದರ್ಶಿಯಾಗಿ ಸಮೀರ್, ಉಪಕಾರ್ಯದರ್ಶಿಯಾಗಿ ಹೈದರ್ ಮಾಸ್ಟರ್ ಜಾರಿಗೆಬೈಲು, ನೌಷಾದ್ ಸಾಬರಬೈಲು, ಝೋನ್ ಕೌನ್ಸಿಲ್ಲೆರ್ಸ್ ಯಾಗಿ ರಝಕ್ ಕಟ್ಟೆ, ಸಾದಿಕ್ ಕಟ್ಟೆ, ಇಲ್ಯಾಸ್ ಚಿಲಿಂಬಿ, ಸಿರಾಜ್ ಚಿಲಿಂಬಿ, ಮನ್ಸೂರ್ ಪಾದೆ, ಇಸ್ಮಾಯಿಲ್ ಕಿಂಗ್ ಸ್ಟಾರ್, ಶಿಹಾಬ್ ಜಾರಿಗೆಬೈಲು, ಶರೀಫ್ ಶಬರಿಬೈಲು ಹಂಝ ಕನ್ನಡಿಕಟ್ಟೆ, ಯಾಸೀರ್ ಗೋಳಿಯಂಗಡಿ ಆಯ್ಕೆಯಾದರು.

Related posts

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕ ನಂದಕುಮಾರ್ ಅವರಿಗೆ ಸಂತಾಪ ಸೂಚಕ ಸಭೆ

Suddi Udaya

ಶಿಬಾಜೆ: ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚೌತಿ- ನವರಾತ್ರಿಯ ಬಗ್ಗೆ ಪೂರ್ವಭಾವಿ ಸಭೆ

Suddi Udaya

ಲೋಕಸಭಾ ಚುನಾವಣೆ ಹಿನ್ನಲೆ: ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿ.ಆರ್.ಪಿ. ಎಫ್ ಯೋಧರು ಹಾಗೂ ಬೆಳ್ತಂಗಡಿ ಠಾಣೆಯ ಪೊಲೀಸರ ಪಥ ಸಂಚಲನ

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ “ಕ್ಷೀರಾಬ್ಧಿ” ಉದ್ಘಾಟನೆ

Suddi Udaya

ಕನ್ಯಾಡಿ ಸೇವಾಭಾರತಿ ಇದರ 20ನೇ ವರ್ಷದ ಸಂಭ್ರಮ: ನೂತನ ಕಟ್ಟಡಕ್ಕೆ ಭೂಮಿ ಪೂಜೆ ಮತ್ತು ಶಿಲಾನ್ಯಾಸ

Suddi Udaya

ಉರುವಾಲು ಶ್ರೀ ಭಾರತೀ ಆಂ.ಮಾ. ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!