September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಲವಂತಿಗೆ ಜನಸ್ಪಂದನ ಸಭೆ

ಡಿಡುಪೆ: ಮಲವಂತಿಗೆ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಡಿ.26 ರಂದು ಶಾಲಾ ವಠಾರದಲ್ಲಿ ನಡೆಯಿತು.

ಮುಂಡಾಜೆ – ಕಜಕ್ಕೆ ರಸ್ತೆ ದುರಸ್ತಿಗೊಳಿಸಬೇಕು ಹಾಗೆಯೇ ಕಾಜೂರು-ಕಜಕ್ಕೆ ರಸ್ತೆ ಕಿರಿದಾಗಿದ್ದು ಅಗಲೀಕರಣಗೊಳಿಸಬೇಕು ಎಂದು ಗ್ರಾಮಸ್ಥರು ಹೇಳಿದರು.

ಡಿಡುಪೆ – ಎಳನೀರು ಮುಂದುವರಿದ 5 ಕಿಮೀ ರಸ್ತೆಯನ್ನು ನಿರ್ಮಾಣಗೊಳಿಸಬೇಕು. ಈಗಾಗಲೇ 3 ಕಿಮೀ ರಸ್ತೆ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಹೇಳಿದಾಗ ಈಗಾಗಲೇ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸಲಾಗಿದ್ದು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹಲವಾರು ಬಾರಿ ಈ ರಸ್ತೆಯ ನಿರ್ಮಾಣದಲ್ಲಿ ಪ್ರಯತ್ನಿಸುತ್ತಿದ್ದೇನೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ ಅಧಿಕಾರಿಗಳು ಸ್ಪಂದನೆ ನೀಡುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು.

ಅರಣ್ಯದಂಚಿನದಲ್ಲಿರುವ ಕರಿಯಾಲು ಭಾಗದಲ್ಲಿ 10ಕ್ಕೂ ಮಿಕ್ಕಿ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲ ಎಂದು ಗ್ರಾಮಸ್ಥರು ಹೇಳಿದಾಗ ಇಲಾಖೆಯಲ್ಲಿ ಕಡತದ ಪರಿಶೀಲನೆ ಹಂತದಲ್ಲಿದೆ ಎಂದು ಶಾಸಕರು ತಿಳಿಸಿದರು. ಬಂಗಾರಪಲ್ಕೆ ಎಂಬಲ್ಲಿ 10 ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಬೇಕು ಎಂದು ಮೆಸ್ಕಾಂ ಇಲಾಖೆಗೆ ಶಾಸಕರು ಸೂಚಿಸಿದರು. ಎಳನೀರು, ಗುತ್ಯಡ್ಕ ಭಾಗದಲ್ಲಿ ಕಳೆದ 75 ವರ್ಷಗಳಿಂದ ವಿದ್ಯುತ್ ಸೌಲಭ್ಯ ಕಾಣದ ನಮಗೆ ಬೆಳಕು ಹರಿಸಿದ್ದು ಶಾಸಕ ಹರೀಶ್ ಪೂಂಜ ಎಂದು ಗ್ರಾಮಸ್ಥರು ಅವರನ್ನು ಅಭಿನಂದಿಸಿದರು.

ರಸ್ತೆ ಅಭಿವೃದ್ಧಿ ಅವಕಾಶ ಕಲ್ಪಿಸಿವುದಾದರೆ ಸೂಕ್ಷ್ಮ ವಲಯ ಅರಣ್ಯಕ್ಕೆ ಸಮ್ಮತ ಸೂಚಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದರು. ಅರಣ್ಯ ಇಲಾಖೆಯ ಪ್ರವಾಸಿ ತಾಣಕ್ಕೆ ಸುಂಕ ವಸೂಲಿ ಮಾಡಲಾಗುತ್ತಿದೆ ಆದರೆ ಇದರಿಂದ ಪಂಚಾಯತ್ ಗೆ ಯಾವುದೇ ಲಾಭವಿಲ್ಲ, ಸ್ವಲ್ಪ ಅಂಶವನ್ನು ಪಂಚಾಯತ್ ಅಭಿವೃದ್ಧಿಗೆ ನೀಡಬೇಕು ಎಂದು ಗ್ರಾಮಸ್ಥರು ಹೇಳಿದಾಗ ಈ ಪ್ರಕ್ರಿಯೆ ಸರ್ಕಾರ ಹಂತದಲ್ಲಿ ಆಗಬೇಕು, ವಿಧಾನ ಸಭೆ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಶಾಸಕರು ತಿಳಿಸಿದರು. ಅಲ್ಲದೇ ಪ್ರವಾಸಿ ತಾಣ ನೇತ್ರಾವತಿ ಪೀಕ್ ಪ್ರವೇಶಿಸಿಸಲು ಪಂಚಾಯತ್ ರಸ್ತೆ ಬಳಕೆಯಾಗುತ್ತದೆ ಇದಕ್ಕೆ ಅನುಗುಣವಾಗಿ ಪಂಚಾಯತ್ 100 ರೂ ಸುಂಕ ವಸೂಲಿ ಮಾಡಬೇಕು ಈ ಬಗ್ಗೆ ಐಬಿಯಲ್ಲಿ ತಹಶೀಲ್ದಾರ್, ಇಓ, ಆರ್ ಎಫ್ ಓ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಶಾಸಕರು ಹೇಳಿದರು.

ನೆಟ್ವರ್ಕ್ ಸಮಸ್ಯೆ, ಸೇತುವೆ, ರಸ್ತೆ ನಿರ್ಮಾಣ ಬೇಡಿಕೆ ಗ್ರಾಮಸ್ಥರು ತಿಳಿಸಿದರು. ತಹಶೀಲ್ದಾರ್ ಪೃಥ್ವಿ ಸಾನಿಕಂ, ತಾಲೂಕು ಪಂಚಾಯತ್ ಲೆಕ್ಕ ಸಹಾಯಕ ಗಣೇಶ್ ಪೂಜಾರಿ, ಅಧ್ಯಕ್ಷ ಪ್ರಕಾಶ್ ಜೈನ್, ಉಪಾಧ್ಯಕ್ಷೆ ರೋಹಿಣಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮಿ, ಸದಸ್ಯರು ಇಲಾಖಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಮುಂಡಾಜೆ : ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ಕಾರ್ಯಕ್ರಮ

Suddi Udaya

ದರೋಡೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

Suddi Udaya

ಸುಲ್ಕೇರಿಮೊಗ್ರು: ಜಗದೀಶ ಪೂಜಾರಿ ನಿಧನ

Suddi Udaya

ಉಜಿರೆ ಹಳೆಪೇಟೆ ಸ.ಪ್ರೌ. ಶಾಲೆಯ ಹಿಂಬದಿಯಲ್ಲಿ ಮಣ್ಣು ಕುಸಿತ: ಶಾಸಕ ಹರೀಶ್ ಪೂಂಜ ಭೇಟಿ: ತಕ್ಷಣವೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ

Suddi Udaya

ಜ.1: ಜೆಸಿಐ ಕೊಕ್ಕಡ ಕಪಿಲ ಘಟಕದ ನೂತನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂಎಲ್ಸಿ ಹರೀಶ್ ಕುಮಾರ್ ಪಿಕ್ಸ್

Suddi Udaya
error: Content is protected !!