April 2, 2025
ಚಿತ್ರ ವರದಿವರದಿಶಾಲಾ ಕಾಲೇಜು

ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಯುವದಿನೋತ್ಸವ ಆಚರಣೆ

ಉಜಿರೆ: ಯುವತನ ಎನ್ನುವುದು ನಮ್ಮ ವಯಸ್ಸಿನಿಂದ ನಿರ್ಧರಿತವಾಗುವುದಲ್ಲ. ಅದು ನಮ್ಮ ಮನಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ನರೇಂದ್ರನಾಗಿದ್ದಂತಹ ವ್ಯಕ್ತಿಯು ತಮ್ಮ ಮನೋಬಲ, ಏಕಾಗ್ರತೆ, ಇಚ್ಛಾಶಕ್ತಿ ಮತ್ತು ನಿರ್ದಿಷ್ಟ ಗುರಿಯ ಮುಖಾಂತರ ವಿವೇಕಾನಂದರಾದರು. ಸಮಯಪ್ರಜ್ಞೆಯನ್ನು ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಉನ್ನತಿಯನ್ನು ಹೊಂದಲು ಸಾಧ್ಯವೆಂದು ಭಾರತೀಯ ವಾಯುಸೇನೆಯ ಗ್ರೌಂಡ್ ಟೈನಿಂಗ್ ತರಬೇತುದಾರ ಪ್ರಮೋದ್ ಹೇಳಿದರು.


ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯ ಉಜಿರೆಯಲ್ಲಿ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ 161 ನೇ ಜನ್ಮ ಜಯಂತಿ “ಯುವದಿನೋತ್ಸವ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಆಲ್ಬರ್ಟ್ ಸಲ್ಡಾನ ಮಾತನಾಡಿ ವಿವೇಕಾನಂದರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.


ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ತಿರುಮಲೇಶ್ ರಾವ್ ಎನ್. ಕೆ, ಹರೀಶ್ ಕುಮಾರ್, ಬೋಧಕೇತರ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವೀರಗೀತೆಯನ್ನು ಹಾಡುವ ಮೂಲಕ ಚಾಲನೆ ನೀಡಿ ಸ್ವಾಮಿ ವಿವೇಕಾನಂದರ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದ ವೀಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ವಿವೇಕಾನಂದರ ವ್ಯಕ್ತಿತ್ವದ ಕುರಿತು ಪ್ರಶಿಕ್ಷಣಾರ್ಥಿ ಚಂದ್ರಶೇಖರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪ್ರಶಿಕ್ಷಣಾರ್ಥಿ ಕೀರ್ತನ್ ಅತಿಥಿ ಪರಿಚಯ ಮಾಡಿದರು.


ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿ ಪ್ರೀತಿ ಸ್ವಾಗತಿಸಿ, ವಿನಯ ಧನ್ಯವಾದವಿತ್ತರು. ಪೂಜಾಶ್ರೀ ಕಾರ್ಯಕ್ರಮ ನಿರೂಪಿಸಿದರು.

Related posts

ಅ.23, 26 ರಂದು ಬಳಂಜ ಶಾಲೆಯಲ್ಲಿ ವಲಯ ಹಾಗೂ ತಾಲೂಕು ಮಟ್ಟದ ಕ್ರೀಡಾಕೂಟ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಜಯವಿಕ್ರಮ್ ಕಲ್ಲಾಪು

Suddi Udaya

ನಾಳೆ(ಜೂ.12): ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ವಾತ್ಸಲ್ಯ ಕುಟುಂಬದ ಸದಸ್ಯರಿಗೆ ದಿನ ಬಳಕೆಯ ವಸ್ತು ಹಾಗೂ ಆಹಾರ ಕಿಟ್ ವಿತರಣೆ

Suddi Udaya

ಆಗಸ್ಟ್ 12, 13 ವಿ.ವಿ. ಘಟಕ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಹುದ್ದೆಗೆ ಸಂದರ್ಶನ

Suddi Udaya

ಗುರುವಾಯನಕೆರೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಸಹಾಯಧನ ಹಸ್ತಾಂತರ

Suddi Udaya
error: Content is protected !!