ನಡ: ನಡ ಹಾಲು ಉತ್ಪಾದಕರ ಸಹಕಾರಿ ಸಂಘದ 13 ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರಿ ಭಾರತೀಯ ಅಭ್ಯರ್ಥಿಗಳು 13 ಸ್ಥಾನಗಳಲ್ಲೂ ಗೆಲುವು ಸಾಧಿಸುವುದರೊಂದಿಗೆ ಜಯಭೇರಿ ಬಾರಿಸಿದ್ದಾರೆ. ಸಾಮಾನ್ಯ ಸ್ಥಾನದಿಂದ ಹಾಲಿ ಅಧ್ಯಕ್ಷ ಅಜಿತ್ ಆರಿಗ 183 ಮತ, ಕರುಣಾಕರ ಗೌಡ 184 ಮತ, ಚಂದ್ರಹಾಸ 182 ಮತ, ಪಿ. ಜನಾರ್ದನ ಗೌಡ 178 ಮತ, ನಾರಾಯಣ ಪೂಜಾರಿ 140 ಮತ, ಮಹಾಲಿಂಗ ಮೂಲ್ಯ 159 ಮತ, ಸ್ಟ್ಲಾನಿ ಪ್ರವೀಣ್ ಡಿ. ಸೋಜ 157 ಮತ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ರಾಜು ಮುಗೇರಾ 176 ಮತ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಹೇಮಂತ ನಾಯ್ಕ 183 ಮತ, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ದಯಾನಂದ ಸಾಲಿಯಾನ್ 185ಮತ, ಮಹಿಳಾ ಮೀಸಲು ಕ್ಷೇತ್ರದಿಂದ ಭಾರತಿ 196 ಮತ, ಹೇಮಾವತಿ 184ಮತ ಪಡೆದು ಜಯಭೇರಿ ಬಾರಿಸಿದ್ದಾರೆ.
ಹಿಂದುಳಿದ ವರ್ಗ ಬಿ. ಸ್ಥಾನದಿಂದ ಎನ್.ಬಿ ಹರಿಶ್ಚಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಬೆಂಬಲಿತರಾಗಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೈಸನ್ ಜೀವನ್ ಡಿ ಸೋಜ 91, ಝಾಕೀರ್ ಹುಸೈನ್ 87 ಮತ, ತಿರುಮಲೇಶ್ವರ ಗೌಡ 83, ಫ್ರಾನ್ಸಿಸ್ ಡಿ ಸೋಜ 81, ಬಿ. ಮುನಿರಾಜ ಅಜ್ರಿ 102, ವಲೇರಿಯನ್ ವೇಗಸ್ 77, ವಿಕ್ಟರ್ ಡಿ ಸೋಜ 66, ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೀತಾಂಜಲಿ 101, ವಜನಾಕ್ಷಿ 83, ಹಿಂದುಳಿದ ವರ್ಗ ಎಯಿಂದ ಸ್ಪರ್ಧಿಸಿದ್ದ ಗುರುವಪ್ಪ ಪೂಜಾರಿ 97, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಶರ್ಮಿಳಾ 104, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಮಲ ೧೦೫ ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.