ಮಚ್ಚಿನ : ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟ ಮಚ್ಚಿನ ಇದರ ವಾರ್ಷಿಕ ಮಹಾಸಭೆಯು ಜ.13 ರಂದು ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಸುಮತಿರವರ ಉಪಸ್ಥಿತಿಯಲ್ಲಿ ನಡೆಯಿತು.
ರೈತ ಸಂತೆ ಉದ್ಘಾಟಿಸುವುದರ ಮೂಲಕ ಆರಂಭಗೊಂಡ ಸಭೆಯು ಜಯಂತಿ ರವರ ಪ್ರಾರ್ಥನೆಯೊಂದಿಗೆ ಮುಂದುವರಿಯಿತು. ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ವಸಂತಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವರದಿಯನ್ನು ಒಕ್ಕೂಟದ ಸದಸ್ಯರಾಗಿರುವಂತಹ ಶ್ರೀಮತಿ ತಾರಾರವರು ಮಂಡಿಸಿದರು. ಜಮಾ ಖರ್ಚಿನ ವಿವರವನ್ನು ಕೃಷಿ ಉದ್ಯೋಗ ಸಖಿ ನೀತಾರವರು ಮಂಡಿಸಿದರು. ಒಕ್ಕೂಟದ ಆಡಿಟ್ ರಿಪೋರ್ಟನ್ನು ಬಿ.ಸಿ ಸಖಿ ಶ್ರೀಕಲಾ ರವರು ಮಂಡಿಸಿದರು.
ತಾಲೂಕು ವ್ಯವಸ್ಥಾಪಕರಾದ ನಿತೇಶ್ ಮತ್ತು ಕೃಷಿ ಇಲಾಖೆಯ ಸಿಬ್ಬಂದಿ ಜಯಂತ್ ಇವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ನಿತೇಶ್ ಒಕ್ಕೂಟದ ಕಾರ್ಯವೈಖರಿಗಳು ಹೇಗೆ ನಡೆಯಬೇಕು ಎಂಬುದನ್ನು ಸವಿಸ್ತಾರವಾಗಿ ಸಭೆಯಲ್ಲಿ ತಿಳಿಸಿದರು. ಕೃಷಿ ಇಲಾಖೆಯ ಸಿಬ್ಬಂದಿಯಾಗಿರುವಂತ ಜಯಂತ್ ರವರು ಕೃಷಿ ಇಲಾಖೆಯಿಂದ ಇನ್ನು ಸಿಗುವಂತಹ ಸೌಲಭ್ಯಗಳನ್ನು ತಿಳಿಸಿದರು. ಒಕ್ಕೂಟದ ಮಾಜಿ ಅಧ್ಯಕ್ಷೆ ಶ್ರೀಮತಿ ಸುಮತಿ ಅವರ ಅನುಭವವನ್ನು ಹಂಚಿಕೊಂಡರು. ನಂತರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕರಾದ ಶ್ರೀಮತಿ ವೀಣಾ ರವರು ನಡೆಸಿಕೊಟ್ಟರು. ಮಾಜಿ ಪದಾಧಿಕಾರಿಗಳು ತಮ್ಮ ತಮ್ಮ ಅನಿಸಿಕೆಯನ್ನು ಸಭೆಯಲ್ಲಿ ಹಂಚಿಕೊಂಡರು.
ಎಲ್ ಸಿ ಆರ್ ಪಿ ಶ್ವೇತಾ ಸ್ವಾಗತಿಸಿದರು. ಕಾರ್ಯದರ್ಶಿ ಪುಷ್ಪಾ ಧನ್ಯವಾದವಿತ್ತರು.