ಬೆಳ್ತಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಉಪ್ಪಿನಂಗಡಿಯ ಬಿ.ಎಮ್ ಆರ್ಕೇಡ್ ನಲ್ಲಿ ಆರಂಭಿಸಿರುವ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಇದರ ಪ್ರಾರಂಭೋತ್ಸವವು ಜ.14 ರಂದು ನಡೆಯಿತು.
ನೂತನ ಸಂಸ್ಥೆಯ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಶುಭ ಕೋರಿದರು.
ಬರೋಡ ಉದ್ಯಮಿ,ಶಶಿ ಕೆಟರಿಂಗ್ ಸರ್ವಿಸಸ್ ಪ್ರೈ.ಲಿ ಶಶಿಧರ ಶೆಟ್ಟಿ ನವಶಕ್ತಿ ಅಧ್ಯಕ್ಷತೆಯನ್ನು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕ ಕೆ. ಪ್ರತಾಪ್ ಸಿಂಹ ನಾಯಕ್, ಪುತ್ತೂರು ಕೌಶಲ್ ಕನ್ ಸ್ಟ್ರಕ್ಷನ್ ಮಾಲಕ ನವೀನ್ ಕುಮಾರ್, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ,ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಮೋಹನ್ ಕುಮಾರ್ ಉಪಸ್ಥಿತರಿದ್ದರು.
ಶ್ರೀಮತಿ ಲೀಲಾವತಿ ರಾಜು ಮೇಸ್ತ್ರಿ,ಸಂಸ್ಥೆಯ ಮಾಲಕ ಮೋಹನ್ ಕುಮಾರ್ ಶ್ರೀಮತಿ ರೇಶ್ಮಾ ಮೋಹನ್ ಕುಮಾರ್,ಮೌಲ್ಯಲಕ್ಷ್ಮೀ,ಮಾನ್ವಿಲಕ್ಷ್ಮೀ ಸಂಸ್ಥೆಗೆ ಆಗಮಿಸಿ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು. ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ಕನಸಿನ ಮನೆ ಉಜಿರೆ ಸಿಬ್ಬಂದಿ ವರ್ಗದವರು ಸಹಕರಿಸಿದರು.ತಿಮ್ಮಯ್ಯ ನಾಯ್ಕ್ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಶಿಧರ ಕಲ್ಮಂಜ,ಶ್ರೀಧರ್ ಕಲ್ಮಂಜ,ಗುರು ಸ್ವಾಮಿ ಸುಬ್ರಹ್ಮಣ್ಯ ಸ್ವಾಮಿ ಉಜಿರೆ,ಪ್ರಭಾಕರ ಜೈನ್,ಪ್ರಶಾಂತ್ ಜೈನ್ ಉಜಿರೆ,ರಾಜೇಶ್ ಶೆಟ್ಟಿ ನವಶಕ್ತಿ, ಜಯಪ್ರಕಾಶ್ ಶೆಟ್ಟಿ, ರವಿ ಚಕ್ಕಿತ್ತಾಯ,ಬೆಳಾಲು ಗ್ರಾ.ಪಂ ಅಧ್ಯಕ್ಷೆ ವಿದ್ಯಾ,ಧನ್ಯ ಕುಮಾರ್ ಉಪ್ಪಿನಂಗಡಿ,ಪ್ರತೀಕ್ ಕೋಟ್ಯಾನ್,ಗಣೇಶ್ ಬೆನಕ, ಉಪಸ್ಥಿತರಿದ್ದರು.
ತಿಮ್ಮಯ್ಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.