ಬೆಳಾಲು : ಇಲ್ಲಿಯ ವಿಶ್ವಕರ್ಮ ಸಂಘದ ಪೂರ್ವಭಾವಿ ಸಭೆ ಹಾಗೂ ನೂತನ ಸಮಿತಿ ರಚನೆಯು ಜ.14 ರಂದು ಬೆಳಾಲು ಶ್ರೀ ಸರಸ್ವತಿ ಹಿ. ಪ್ರಾ. ಶಾಲೆಯಲ್ಲಿ ನಡೆಯಿತು.
ದೀಪಾ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಬೆಳ್ತಂಗಡಿ ಆನೆಗುಂದಿ ಗುರುಸೇವಾ ಪರಿಷತ್ ಅಧ್ಯಕ್ಷ ಪ್ರಕಾಶ್ ಪುರೋಹಿತ್ ಸಲಹೆ ಸೂಚನೆಗಳ ಬಗ್ಗೆ ಮಾತನಾಡಿದರು. ಬೆಳ್ತಂಗಡಿ ವಿಶ್ವಕರ್ಮಾಭ್ಯದಯ ಸಭಾ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಯಕೋಡಿ , ಪುರುಷೋತ್ತಮ ಆಚಾರ್ಯ ಕನ್ನಾಜೆ, ಉಮೇಶ್ ಆಚಾರ್ಯ ಕಾನರ್ಪ, ಶ್ರೀಮತಿ ಪುಷ್ಪ ಆಚಾರ್ಯ ಬಲ್ಯಯಕೋಡಿ ಸಂಘದ ರಚನಾ ಕ್ರಮಗಳ ಬಗ್ಗೆ ಮಾತನಾಡಿದರು.

ನೂತನವಾಗಿ ರಚನೆಯಾದ ಸಂಘದ ಗೌರವಾಧ್ಯಕ್ಷರಾಗಿ ಚಂದ್ರಯ್ಯ ಆಚಾರ್ಯ ವಾನಜೆ, ಅಧ್ಯಕ್ಷರಾಗಿ ಕೃಷ್ಣಯ್ಯ ಆಚಾರ್ಯ, ಉಪಾಧ್ಯಕ್ಷರಾಗಿ ಲೋಹಿತಾಕ್ಷ ಆಚಾರ್ಯ, ಕಾರ್ಯದರ್ಶಿ ಮತ್ತು ಜೊತೆ ಕಾರ್ಯದರ್ಶಿಯಾಗಿ ಹರೀಶ್ ಆಚಾರ್ಯ ಮಾಯಾ ಮತ್ತು ಪುಷ್ಪ ಶಾಂತಿನಗರ, ಕೋಶಾಧಿಕಾರಿಯಾಗಿ ಶಶಿಧರ ಆಚಾರ್ಯ ಮಾಯಾ ನೇಮಕಗೊಂಡರು. ಹಾಗೂ 16 ಜನರ ಕಾರ್ಯಕಾರಿ ಸಮಿತಿ ರಚನೆಯಾಯಿತು.
ವೇದಿಕೆಯಲ್ಲಿ ಗಣೇಶ್ ಆಚಾರ್ಯ ಉಸೆನಕ್ಕೆ, ಸದಾನಂದ ಆಚಾರ್ಯ ಅಳದಂಗಡಿ, ನಾಗಪ್ರಸಾದ್ ಆಚಾರ್ಯ ಕುಂಟಿನಿ ಉಪಸ್ಥಿತರಿದ್ದರು.
ಶ್ರೀಮತಿ ಲತಾ ಪ್ರಾರ್ಥಿಸಿದರು. ಕು. ವಿನಿಷಾ ನಿರೂಪಿಸಿ ಕೃಷ್ಣಯ್ಯ ಆಚಾರ್ಯ ಧನ್ಯವಾದ ವಿತ್ತರು.