ಉಜಿರೆ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಧ್ವಜಾರೋಹಣವನ್ನು ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಜ.14 ರಾತ್ರಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಆರ್ಚಕರು, ವಿಲಯದವರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಇಂದು ಬದಿ ಮೇಲೆ ಉಳ್ಳಾಲ್ತಿ, ಪೊಸಲ್ಲಾಯಿ, ಕುಮಾರಸ್ವಾಮಿ ದೈವಗಳಿಗೆ ನೇಮ ಜರುಗಲಿದೆ.
ಜ.16ರಂದು ಸಂಜೆ ಬದಿಮೇಲೆ ನೆತ್ತರಮುಗುಳಿ ದೈವದ ನೇಮ, ಜ.17ರಂದು ರಾತ್ರಿ ಆಶತ್ಥಕಟ್ಟೆ ಉತ್ಸವ, ಜ. 18ರಂದು ರಾತ್ರಿ ಪುಷ್ಕರಣಿ ಕಟ್ಟೆ ಉತ್ಸವ, ಜ.19ರಂದು ರಾತ್ರಿ ಪೇಟೆ ಸವಾರಿ, ಜ. 20ರಂದು ರಾತ್ರಿ ಚಂದ್ರಮಂಡಲ ರಥೋತ್ಸವ, ಜ.21ರಂದು ಬೆಳಗ್ಗೆ ದರ್ಶನ ಬಲಿ ಉತ್ಸವ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಮಹಾರಥೋತ್ಸವ ಹಾಗೂ ಶ್ರೀ ಭೂತ ಬಲಿ ಹಾಗೂ ಜ. 22ರಂದು ಧ್ವಜಾವರೋಹಣ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮ ಜ.19ರಂದು ಸಂಜೆ 7ರಿಂದ ನೃತ್ಯಾರ್ಪಣಂ, ಜ.20ರಂದು ಸಂಜೆ 6.30ರಿಂದ ಹಿಂದು ಸ್ಥಾನಿ ಶಾಸ್ತ್ರೀಯ ಸಂಗೀತ,ನೃತ್ಯ ಸಂಭ್ರಮ ಜ.21ರಂದು ಸಂಜೆ6.30ರಿಂದ ಅಯೋಧ್ಯಾ ಶ್ರೀರಾಮ ಚರಿತಂ ಯಕ್ಷಗಾನ ಜರಗಲಿದೆ.