ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಕರ ಸಂಕ್ರಮಣದ ಪ್ರಯುಕ್ತ ಪಾವನ ಪುರುಷೋತ್ತಮ ಶ್ರೀರಾಮ ತಾಳಮದ್ದಳೆ ಜರಗಿತು.
ಕವಿ ಡಾ. ವಸಂತ ಭಾರದ್ವಾಜ ವಿರಚಿತ ಕೃತಿಯಿಂದ ಆಯ್ದ ವಿಶ್ವಾಮಿತ್ರರ ಯಜ್ಞ ಸಂರಕ್ಷಣೆಯಿಂದ ರಾಮಘಟ್ಟಾಭಿಷೇಕದ ವರೆಗಿನ ಸನ್ನಿವೇಶಗಳನ್ನು ಕಲಾವಿದರು ರೂಪಕದ ರೀತಿಯಲ್ಲಿ ಪ್ರಸ್ತುತಪಡಿಸಿದರು. ಮೂರು ಗಂಟೆಯ ಅವಧಿಯಲ್ಲಿ 18 ಕಲಾವಿದರು ಭಾಗವಹಿಸಿದ್ದು ವಿಶೇಷವಾಗಿತ್ತು.
ಭಾಗವತರು ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಶ್ರೀ ನಿತೀಶ್ ಮನೋಳಿತ್ತಾಯ. ಹಿಮ್ಮೇಳದಲ್ಲಿ ವಾಸುದೇವ ಆಚಾರ್ಯ ಉಜಿರೆ,ಮುರಲೀಧರ ಆಚಾರ್ಯ ನೇರೆಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ, ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ (ವಿಶ್ವಾಮಿತ್ರ )ಗೋಪಾಲ ಶೆಟ್ಟಿ(ಹನುಮಂತ) ಜಯರಾಮ ಭಟ್ ದೇವಸ್ಯ(ಶ್ರೀ ರಾಮ) ಸತೀಶ ಶಿರ್ಲಾಲು(ದಶರಥ) ದಿನೇಶ್ ಭಟ್ ಬಳೆಂಜ(ಶ್ರೀ ರಾಮ)ಹರೀಶ್ ಆಚಾರ್ಯ ಬಾರ್ಯ(ಜನಕ)ರಾಘವ ಮೆದಿನ(ಸೀತೆ )ರಾಘವ ಗೇರುಕಟ್ಟೆ (ದೇವೇಂದ್ರ)ಜಯರಾಮ ಬಲ್ಯ(ದನು ಮತ್ತು ಕಬಂಧ)ಶಿವಾನಂದ ಭಂಡಾರಿ(ತಾಟಕಿ)ಜಿನೇಂದ್ರ ಜೈನ್ ಬಳ್ಳಮಂಜ(ರಾವಣ ) ರಾಹುಲ್ ಶೆಟ್ಟಿ ಗೇರುಕಟ್ಟೆ(ಲಕ್ಷ್ಮಣ ) ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ರಾಮ) ಭಾಗವಹಿಸಿದ್ದರು.
ಕಳಿಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವಸಂತ ಮಜಲು, ಬೆಳ್ತಂಗಡಿ ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆರ್ಮುಡ, ಪ್ರಧಾನ ಅರ್ಚಕರಾದ ರಾಘವೇಂದ್ರ ಆಸ್ರಣ್ಣ, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಭುವನೇಶ ಗೇರುಕಟ್ಟೆ ,ಶ್ರೀನಾಳ ಮೇಳದ ಪ್ರಬಂಧಕ ರಾಘವ .ಎಚ್ ಕಲಾವಿದರನ್ನು ಗೌರವಿಸಿದರು. ದೇವಳದ ಕಚೇರಿ ವ್ಯವಸ್ಥಾಪಕರಾದ ಗಿರೀಶ್ ಶೆಟ್ಟಿನಾಳ ಸ್ವಾಗತಿಸಿ ಕಥಾ ಸಂಯೋಜನೆ ಮಾಡಿದ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು.