April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಮೂರು ದಿನದ ಅಂತರದಲ್ಲಿ ಸಹೋದರರಿಬ್ಬರ ಸಾವು

ಆನಂದ ಪೂಜಾರಿ

ಬೆಳ್ತಂಗಡಿ: ನಾಲ್ಕೂರು ಗ್ರಾಮದ ಹಟ್ಟೆಮಾರ್ ಹೊಸಮನೆ ನಿವಾಸಿ ಕೃಷಿಕ ಆನಂದ ಪೂಜಾರಿ (62 ವ) ಹೃದಯಾಘಾತದಿಂದ ಇಂದು ಬೆಳಗ್ಗಿನ ಜಾವ (ಜ. 15) ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಕೃಷಿಕರಾಗಿದ್ದು ಎಲ್ಲರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.

ಮೂರು ದಿನದ ಹಿಂದೆ ಆನಂದ ಪೂಜಾರಿಯವರ ಸಹೋದರ ನಾವೂರು ಬಂಗ್ಲೆ ಮನೆ ನಿವಾಸಿ, ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಚಂದ್ರಹಾಸ ಪೂಜಾರಿ (60ವ)ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದರು. ಸಹೋದರರಿಬ್ಬರ ಸಾವಿನಿಂದ ಕುಟುಂಬ, ಬಂಧು ಬಳಗ ಶೋಕ ಸಾಗರದಲ್ಲಿ ಮುಳುಗಿದೆ.

ಮೃತ ಆನಂದ ಪೂಜಾರಿಯವರು ಪತ್ನಿ ಗುಲಾಬಿ, ಮೂವರು ಮಕ್ಕಳಾದ ಯೋಗೀಶ್ ಪೂಜಾರಿ, ಪ್ರಮೀಳಾ, ಹರೀಶ್ ಅವರನ್ನು ಆಗಲಿದ್ದಾರೆ. ಮೃತ ಚಂದ್ರಹಾಸ ಪೂಜಾರಿಯವರು ಪತ್ನಿ ಪ್ರೇಮಾ, ಮೂವರು ಮಕ್ಕಳಾದ ಪ್ರಸನ್ನ, ಪ್ರಸಾದ್, ಪ್ರತಿಮಾ, ಸಹೋದರರಾದ ಕೃಷ್ಣಪ್ಪ ಪೂಜಾರಿ,ಬಾಬು ಪೂಜಾರಿ, ದೇವದಾಸ ಪೂಜಾರಿ,ದಾಮೋದರ ಪೂಜಾರಿ,ಶಶಿಧರ ಪೂಜಾರಿ ಹಾಗೂ ಕಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ ಸ.ಪ್ರ.ದ. ಕಾಲೇಜಿನಲ್ಲಿ ಜೋಶ್ ಅಲುಕಾಸ್ ಸಂಸ್ಥೆಯಿಂದ ಉದ್ಯೋಗ ಮೇಳ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ರಕ್ಷಾಬಂಧನ ಆಚರಣೆ

Suddi Udaya

ಬಳಂಜ: ಉದ್ಯಮಿ ಯಶೋಧರ ಜೈನ್ ನಿಧನ

Suddi Udaya

ನ್ಯಾಯತರ್ಪು: ಬೃಹತ್‌ ಗಾತ್ರದ ಹೆಬ್ಬಾವು ಕೋಳಿ ಗೂಡಿನಲ್ಲಿ ಪತ್ತೆ

Suddi Udaya

ಕಲ್ಮಂಜ ಬೆರ್ಕೆಯಲ್ಲಿ ಕೃಷಿ ತೋಟಕ್ಕೆ ಆನೆ ದಾಳಿ: ಅಪಾರ ಪ್ರಮಾಣ ಕೃಷಿ ನಾಶ

Suddi Udaya

ಅಕ್ರಮ ಇಸ್ಪೀಟು ಅಡ್ಡೆಗೆ ಪೊಲೀಸ್ ದಾಳಿ: ನಗದು ಹಾಗೂ ಸೊತ್ತುಗಳ ಸಹಿತ 23 ಮಂದಿ ವಶ

Suddi Udaya
error: Content is protected !!